ಮಂಗಳೂರು: ರಾಜ್ಯ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ರಿಂಗಣಿಸಿದೆ. ಹತ್ತು ದಿನಗಳ ಅಂತರದಲ್ಲಿ ನಾಲ್ಕೂ ಕಡೆಗಳಲ್ಲಿ ಈ ಸಿಕ್ರೇಟ್ ಫೋನ್‍ನ ಲೊಕೇಷನ್ ಟ್ರೇಸ್ ಆಗಿದೆ.
Advertisement
ರಾಜ್ಯ ಕರಾವಳಿ ಮತ್ತು ಮಲೆನಾಡಿನಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಆಕ್ಟೀವ್ ಆಗಿದೆ. ದಕ್ಷಿಣಕನ್ನಡ ಜಿಲ್ಲೆಯ ಎರಡು ಕಡೆ, ಉತ್ತರಕನ್ನಡ, ಚಿಕ್ಕಮಗಳೂರು ಜಿಲ್ಲೆಯ ಒಂದೊಂದು ಕಡೆ ಈ ಸೀಕ್ರೆಟ್ ಫೋನ್ ರಿಂಗಣಿಸಿದೆ. ಕರಾವಳಿಯ ದಟ್ಟಾರಣ್ಯ ಪ್ರದೇಶಗಳಲ್ಲಿ ಸ್ಯಾಟಲೈಟ್ ಫೋನ್ ಇಂಟರ್‍ಸೆಪ್ಟ್ ಆಗಿರುವ ಬಗ್ಗೆ ಆಂತರಿಕ ಭದ್ರತಾ ದಳದ ಅಧಿಕಾರಿಗಳಿಗೆ ಕೇಂದ್ರ ಬೇಹುಗಾರಿಕಾ ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಯಲ್ಲಾಪುರ-ಸಿರಸಿಯ ಮಧ್ಯ ಇರುವ ದಟ್ಟಾರಣ್ಯ ಪ್ರದೇಶದಲ್ಲಿ ಇದರ ಲೊಕೇಶನ್ ಟ್ರೇಸ್ ಆಗಿದೆ. ಮಂಗಳೂರಿನಲ್ಲಿ ನಗರ ಹೊರವಲಯದ ನಾಟೆಕಲ್, ಕುಳಾಯಿಯಲ್ಲಿ ನಿಗೂಢ ವ್ಯಕ್ತಿಗಳು ಈ ಫೋನ್ ಮೂಲಕ ಸಂಪರ್ಕ ಸಾಧಿಸಿದ್ದಾರೆ. ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿದ ನಿಗೂಢ ವ್ಯಕ್ತಿಗಳ ಶೋಧ ಕಾರ್ಯಕ್ಕೆ ಆಂತರಿಕ ಭದ್ರತಾ ದಳದ ಅಧಿಕಾರಿಗಳು ಇಳಿದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ- ಗ್ರೌಂಡ್‍ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಹೈಡ್ರಾಮಾ
Advertisement
ಮೇ 23 ರಿಂದ ಮೇ 29ರ ಅಂತರದಲ್ಲಿ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿರುವ ಮಾಹಿತಿ ಇದೆ. ನೆಟ್ ವರ್ಕ್ ಇಲ್ಲದ ಪ್ರದೇಶಗಳಲ್ಲಿ ಈ ಸ್ಯಾಟಲೈಟ್ ಪೋನ್ ಬಳಕೆ ಕುರಿತಾದ ನಿಗೂಢ ಕರೆಗಳನ್ನು ಭದ್ರತಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.
Advertisement
Advertisement
ಹಡಗಿನಲ್ಲಿರುವ ಕ್ಯಾಪ್ಟನ್‍ಗಳಿಗೆ ಈ ಫೋನ್ ಬಳಕೆ ಮಾಡುವುದಕ್ಕೆ ಅವಕಾಶವಿದೆ. ಆದರೆ ದಟ್ಟಾರಣ್ಯ ಪ್ರದೇಶದಲ್ಲಿ ಇಂತಹ ಫೋನ್ ಆಕ್ಟೀವ್ ಆಗಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕರಾವಳಿ ಭಾಗದಲ್ಲಿ ಉಗ್ರರ ಸ್ಲೀಪರ್ ಸೆಲ್‍ಗಳು ವರ್ಕ್ ಮಾಡುತ್ತಿದೆಯಾ ಎಂಬ ಸಂಶಯವನ್ನು ಮೂಡಿಸಿದೆ. ಇದರ ಜೊತೆ ನಕ್ಸಲ್ ಚಟುವಟಿಕೆ ನಡೆಸುತ್ತಿರುವವರು ಈ ಸ್ಯಾಟಲೈಟ್ ಫೋನ್ ಯೂಸ್ ಮಾಡುತ್ತಿದ್ದಾರ ಎಂಬ ಪ್ರಶ್ನೆಯನ್ನು ಮೂಡಿಸಿದೆ. ಚಿಕ್ಕಮಗಳೂರಿನಲ್ಲಿ ಕಡೂರು-ಬೀರೂರು ನಡುವಿನ ಅರಣ್ಯ ಪ್ರದೇಶದಲ್ಲಿ ಇದು ಯೂಸ್ ಆಗಿರುವುದು ಈ ಸಂಶಯಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ. ಕಳೆದ ವರ್ಷ ಜನವರಿ ತಿಂಗಳಲ್ಲಿ 10 ದಿನಗಳಲ್ಲಿ ಮೂರು ಬಾರಿ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಇದೀಗ ಮತ್ತೆ ಈ ಸ್ಯಾಟಲೈಟ್ ಕರೆ ಸದ್ದು ಮಾಡಿರೋದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಸೂ.. ಮಕ್ಕಳಾ ಅಂತ ಕಾಂಗ್ರೆಸ್ ಪಕ್ಷದವರನ್ನ ನಿಂದಿಸಿದ ಬಿಜೆಪಿ ಸಂಸದ