‘ಧಡಕ್’ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಭುವನ ಸುಂದರಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ಒಂದಲ್ಲ ಒಂದು ಗಾಸಿಪ್‌ಗೆ ತುತ್ತಾಗುತ್ತಲೇ ಇರುತ್ತಾರೆ. ತೆರೆ ಮೇಲೆ ಬರುವುದಕ್ಕೂ ಮುನ್ನವೇ ಈ ನಟಿ ಹೆಚ್ಚು ಗಾಸಿಪ್ ಒಳಗಾಗುತ್ತಿರುವುದು ಮತ್ತು ಸಿನಿಮಾ ಲೋಕಕ್ಕೆ ಬಂದ ಮೇಲೆ ದಿನಕ್ಕೊಂದು ವಿಷಯಕ್ಕೆ ಸುದ್ದಿಯುತ್ತಿರುವುದು ಜಾನ್ವಿಯ ವಿಶೇಷತೆ ಆಗಿದೆ. ಈಗ ಮತ್ತೆ ತಮ್ಮ ಡ್ರೆಸ್‌ಗೆ ಸಂಬಂಧಿಸಿದಂತೆ ಜಾನ್ವಿ ಟ್ರೋಲ್ ಆಗುತ್ತಿದ್ದಾರೆ.
ಜಾನ್ವಿ ಎಲ್ಲೇ ಹೋದರೂ ಅವರು ಧರಿಸುವ ಡ್ರೆಸ್ ಮೇಲೆ ಕ್ಯಾಮರಾ ಕಣ್ಣು ಬೀಳತ್ತೆ. ಅವರ ಪ್ರತಿಯೊಂದು ಚಲನೆಯನ್ನು ಪಾಪರಾಜಿಗಳು ಗಮನಿಸುತ್ತಿರುತ್ತವೆ. ಈ ನಟಿಯು ಸಿನಿಮಾಗಿಂತಲೂ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿ ಆಗುತ್ತಾರೆ. ಸದ್ಯ ಅನನ್ಯಾ ಪಾಂಡೆ ಜೊತೆ ಕ್ಲೋಸ್ ಆಗಿರುವ ಜಾನ್ವಿ, ಮುಂಬೈನಲ್ಲಿ ಇಬ್ಬರೂ ಸುತ್ತಾಡುತ್ತಲೇ ಇರುತ್ತಾರೆ. ಈ ವೇಳೆ ಜಾನ್ವಿ ಬ್ಯಾಕ್‍ಲೆಸ್ ಡ್ರೆಸ್ ಹಾಕಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ.
View this post on Instagram
ಬ್ಯಾಕ್‍ಲೆಸ್ ಡ್ರೆಸ್‌ನಲ್ಲಿ ಜಾನ್ವಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ಟ್ರೋಲ್‌ಗೆ ಗುರಿಯಾಗಿದ್ದಾರೆ. ಇವರ ಫೋಟೋ ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಜಾನ್ವಿ ತಿಳಿ ನೀಲಿ ಬಣ್ಣದ ಡ್ರೆಸ್ ಧರಿಸಿದ್ದು, ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಈ ಡ್ರೆಸ್ನಲ್ಲಿ ಜಾನ್ವಿ ಫುಲ್ ಹಾಟ್ ಆಗಿ ಕಾಣಿಸುತ್ತಿದ್ದು ಟ್ರೋಲ್‌ನಲ್ಲಿ ದಿನದಿಂದ ದಿನಕ್ಕೆ ಜಾನ್ವಿ ಕಪೂರ್ ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ. ಇದನ್ನೂ ಓದಿ: ‘ಅಂದೊಂದಿತ್ತು ಕಾಲ’ ಚಿತ್ರದಲ್ಲಿ ರವಿಚಂದ್ರನ್ ಪಾತ್ರ ರಿವಿಲ್
ಈ ಟ್ರೋಲ್ ಸಖತ್ ಸುದ್ದಿಯಾಗಿದ್ದು ಕಾಮೆಂಟ್‌ನಲ್ಲಿ ಜಾನ್ವಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸುವ ಎಮೋಜಿ ಹಾಕುತ್ತಿದ್ದಾರೆ. ಈ ಫೋಟೋ ಬಗ್ಗೆ ಪಾಸಿಟಿವ್ ಹೇಳಿಕೆಗಳು ಬರುತ್ತಿವೆ. ಆದರೆ ಈ ಹಿಂದೆ ನಟಿ ವಿರುದ್ಧ ಹಲವು ನೆಗೆಟಿವ್ ಗಾಸಿಪ್ ಕೇಳಿಬರುತ್ತಿತ್ತು. ಏನೇ ಆದರೂ, ಜಾನ್ವಿ ಈ ಯಾವುದೇ ಗಾಸಿಪ್‌ಗಳಿಗೆ ತಲೆ ಕೆಡಿಸಿಕೊಂಡಿಲ್ಲ. ತಮಗೆ ಯಾವುದು ಸರಿ ಅದನ್ನೆ ಈ ನಟಿ ಮಾಡುತ್ತಿರುತ್ತಾರೆ. ಇವರಿಗೆ ಹಲವು ಸಿನಿಮಾಗಳ ಆಫರ್ ಬರುತ್ತಿದ್ದರೂ ಸಹ ಯಶಸ್ಸು ತಂದುಕೊಡುವ ಯಾವುದೇ ಸಿನಿಮಾಗಳು ಇವರಿಗೆ ಇನ್ನೂ ಸಿಕ್ಕಿಲ್ಲ.