ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಶಶಿಕಲಾ ದಂಡದ ಮೊತ್ತವಾಗಿರುವ 10 ಕೋಟಿ ರೂ. ಹಣವನ್ನು ಪಾವತಿಸದೇ ಇದ್ದರೆ 13 ತಿಂಗಳ ಕಾಲ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಜೈಲಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಹೇಳಿಕೆಯೊಂದನ್ನು ಪ್ರಕಟಿಸಿದ್ದು, ಸುಪ್ರೀಂ ಕೋರ್ಟ್ ತೀರ್ಪಿನಂತೆ 10 ಕೋಟಿ ರೂ. ದಂಡ ಪಾವತಿಸದೇ ಇದ್ದರೆ ಶಶಿಕಲಾ 13 ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
Advertisement
ಫೆಬ್ರವರಿ 14ರಂದು ಸುಪ್ರೀಂ ಕೋರ್ಟ್ ಶಶಿಕಲಾ ದೋಷಿ ಎಂದು ತೀರ್ಪು ನೀಡಿ, 10 ಕೋಟಿ ರೂ. ದಂಡ, 4 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ 2014ರ ಸೆಪ್ಟೆಂಬರ್‍ನಲ್ಲಿ ಪರಪ್ಪನ ಅಗ್ರಹಾರದಲ್ಲಿ 21 ದಿನಗಳ ಕಾಲ ಕಳೆದ ಹಿನ್ನೆಲೆಯಲ್ಲಿ ಶಶಿಕಲಾ ಒಟ್ಟು 3 ವರ್ಷ, 11 ತಿಂಗಳು ಜೈಲಿನಲ್ಲಿ ಇರಬೇಕಾಗುತ್ತದೆ
Advertisement
ಜೈಲಿನಲ್ಲಿ ಹೇಗಿದ್ದಾರೆ?
ಸಾಧಾರಣ ಶಿಕ್ಷೆಯಲ್ಲಿ ಬಂಧನಕ್ಕೆ ಒಳಗಾದ ಜೈಲು ನಿಯಮಾವಳಿಗಳ ಪ್ರಕಾರ ಸಮವಸ್ತ್ರ ಮತ್ತು ಇತರೇ ಊಟದ ತಟ್ಟೆಗಳನ್ನು ನೀಡಲಾಗಿದೆ. ಭದ್ರತಾ ದೃಷ್ಟಿಯಿಂದ ಪ್ರತ್ಯೇಕವಾದ ಕೊಠಡಿಯಲ್ಲಿ ಮಹಿಳಾ ಬಂಧಿಗಳನ್ನು ಇಡಲಾಗಿದ್ದು, ಭದ್ರತೆಗೆ ಮಹಿಳಾ ಅಧೀಕ್ಷಕರನ್ನು ನೇಮಿಸಲಾಗಿದೆ. ವಿ.ಎನ್. ಸುಧಾಕರನ್ ಪುರುಷ ವಿಭಾಗದಲ್ಲಿದ್ದು, ಭದ್ರತೆಗೆ ವಿಶೇಷ ಪಹರೆ ನೇಮಿಸಿದೆ.
Advertisement
ಜೈಲಿನ ಊಟವನ್ನು ಇತರೇ ಬಂಧಿಗಳಿಗೆ ನೀಡುವಂತೆ ಇವರಿಗೂ ಅದೇ ಆಹಾರವನ್ನು ನೀಡಲಾಗುತ್ತಿದೆ. ಕಾರಾಗೃಹದ ವೈದ್ಯಾಧಿಕಾರಿಗಳಿಂದ ಆರೋಗ್ಯದ ತಪಾಸಣೆ ಮಾಡಿಸಿ ಸಂಬಂಧಿಸಿದ ಔಷಧಿಗಳನ್ನು ನೀಡಲಾಗಿದೆ. ಮನೋರಂಜನೆಗಾಗಿ ಇತರೇ ಬಂಧಿಗಳಂತೆ ಟಿವಿ ನೀಡಲಾಗಿದೆ.