ಕನ್ನಡ ಚಿತ್ರರಣಂಗದಲ್ಲೀಗ ಯಾವ ಸಿನಿಮಾ ರೂಪುಗೊಂಡರೂ ಅದರ ಮೂಲ ಮಂತ್ರ ಹೊಸತನವೇ ಆಗಿರುತ್ತದೆಯೆಂಬಂಥಾ ವಾತಾವರಣವಿದೆ. ಶೀರ್ಷಿಕೆಯಲ್ಲಿಯೇ ಆರಂಭಿಕವಾಗಿ ಸೆನ್ಸೇಷನ್ ಕ್ರಿಯೇಟ್ ಮಾಡುವಂಥಾ ಪೈಪೋಟಿಯೂ ಚಾಲ್ತಿಯಲ್ಲಿದೆ. ಇದೇ ಹಾದಿಯಲ್ಲಿ ಹೊಸ ಬಗೆಯ ನಿರೂಪಣೆ, ತೀರಾ ಹೊಸತಾದ ಕಥೆಯೊಂದಿಗೆ ಈ ವಾರ ತೆರೆಗಾಣಲು ರೆಡಿಯಾಗಿರುವ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ಅನೂಪ್ ರಾಮಸ್ವಾಮಿ ನಿರ್ದೇಶನದ ಈ ಸಿನಿಮಾ ಅದೆಷ್ಟು ಸೊಗಸಾಗಿ ಮೂಡಿ ಬಂದಿದೆಯೆಂಬ ವಿಚಾರ ಈಗಾಗಲೇ ಟ್ರೇಲರ್‌ನೊಂದಿಗೆ ಅನಾವರಣವಾಗಿದೆ. ಅದರಲ್ಲಿ ಈ ಸಿನಿಮಾದಲ್ಲಿರೋ ಪಾತ್ರಗಳ ಪರಿಚಯವಾಗಿದ್ದರಿಂದಲೇ ಪ್ರೇಕ್ಷಕರು ಮತ್ತಷ್ಟು ತೀವ್ರವಾದ ಕುತೂಹಲದೊಂದಿಗೆ ಈ ಚಿತ್ರ ತೆರೆಗಾಣೋದನ್ನು ಎದುರು ನೋಡುವಂತಾಗಿದೆ.
Advertisement
ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಬಲು ಮಹತ್ವಾಕಾಂಕ್ಷೆಯಿಂದ ನಿರ್ಮಾಣ ಮಾಡಿರುವ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ನಿರ್ದೇಶಕ ಅನೂಪ್ ರಾಮಸ್ವಾಮಿ ಇಲ್ಲಿ ಪ್ರತಿಯೊಂದು ಪಾತ್ರಗಳನ್ನೂ ಕೂಡಾ ಪ್ರೇಕ್ಷಕರು ಸಿನಿಮಾ ಮಂದಿರಗಳಿದ ಹೊರ ಬಂದಾದ ಮೇಲು ಮನಸಲ್ಲೇ ಕೂತು ಕಾಡುವಂತೆ ರೂಪಿಸಿದ್ದಾರಂತೆ. ನಾಯಕ ರಿಷಿಯಂತೂ ಈವರೆಗಿನ ಎಲ್ಲ ಪಾತ್ರಗಳಿಗಿಂತಲೂ ಬೇರೆಯದ್ದೇ ಸ್ವರೂಪದ ಪಾತ್ರದ ಮೂಲಕ ಪ್ರೇಕ್ಷಕರನ್ನು ತಲುಪಿಕೊಳ್ಳಲಿದ್ದಾರೆ. ನಾಯಕಿ ಧನ್ಯಾ ಪಾತ್ರವೂ ಅದೇ ಹಾದಿಯಲ್ಲಿದೆ. ಇತರೆ ಪಾತ್ರಗಳೂ ಕೂಡಾ ಅಂಥಾದ್ದೇ ಗುಣ ಲಕ್ಷಣಗಳನ್ನು ಹೊಂದಿವೆಯಂತೆ.
Advertisement
Advertisement
ಈ ಚಿತ್ರದಲ್ಲಿ ರಿಷಿ ಮತ್ತು ಧನ್ಯಾ ಬಾಲಕೃಷ್ಣಗೆ ಹಿರಿಯ ನಟ ದತ್ತಣ್ಣ, ರಂಗಾಯಣ ರಘು ಮತ್ತು ಮಿತ್ರಾ ಮುಖ್ಯವಾದ ಪಾತ್ರಗಳ ಮೂಲಕ ಸಾಥ್ ನೀಡಿದ್ದಾರೆ. ಅವರ ಪಾತ್ರಗಳ ಸ್ಪಷ್ಟ ಚಹರೆಗಳನ್ನು ಟ್ರೇಲರ್‍ನಲ್ಲಿ ಕಾಣಿಸಿರುವ ಚಿತ್ರತಂಡ ಅವುಗಳ ಮೂಲಕವೇ ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ಮೂಡಿಕೊಳ್ಳುವಂತೆ ಮಾಡಿದ್ದಾರೆ. ಈ ಮೂವರೂ ನಟರನ್ನು ಪ್ರೇಕ್ಷಕರು ಇದುವರೆಗೂ ಹತ್ತಾರು ಸಿನಿಮಾಗಳಲ್ಲಿ ಬಗೆ ಬಗೆಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈ ಹಿಂದೆ ಎಲ್ಲಿಯೂ ನಿರ್ವಹಿಸದಂಥಾ ಪಾತ್ರಗಳು ಅವರಿಗಾಗಿ ಸೃಷ್ಟಿಯಾಗಿವೆಯಂತೆ. ದತ್ತಣ್ಣನ ಪಾತ್ರವಂತೂ ನಗಿಸುತ್ತಲೇ ಪ್ರೇಕ್ಷಕರ ಕಣ್ಣಾಲಿಗಳು ತುಂಬಿ ಬರುವಂತೆಯೂ ಮಾಡಲಿವೆಯಂತೆ. ಇದೆಲ್ಲದರ ಅಸಲಿ ಮೋದ ಈ ವಾರವೇ ನಿಮ್ಮೆದುರು ಅನಾವರಣಗೊಳ್ಳಲಿದೆ.