ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ನಾಯಕನಾಗಿ ನಟಿಸಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಇತ್ತೀಚಿನ ದಿನಗಳಲ್ಲಿ ಭಿನ್ನಾತಿ ಭಿನ್ನ ಶೀರ್ಷಿಕೆಗಳ ಜಮಾನವೊಂದು ಶುರುವಾಗಿದೆಯಲ್ಲಾ? ಅದನ್ನು ಮತ್ತಷ್ಟು ಮಿರುಗಿಸುವಂಥಾ ಗುಣ ಲಕ್ಷಣಗಳನ್ನು ಈ ಚಿತ್ರ ದಟ್ಟವಾಗಿಯೇ ಹೊಮ್ಮಿಸುತ್ತಿದೆ. ಈಗಾಗಲೇ ಎಲ್ಲಾ ರೀತಿಯಿಂದಲೂ ಟಾಕ್ ಕ್ರಿಯೇಟ್ ಮಾಡಿರೋ ಈ ಸಿನಿಮಾ ತಂಡ ಇದೀಗ ಟ್ರೇಲರ್ ಲಾಂಚ್ ಮಾಡಿದೆ. ಈ ಮೂಲಕ ಮಜವಾದ ಟ್ರೇಲರ್ ಒಂದನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಸಾರ್ವಜನಿಕರಿಗೆ ಸಿಕ್ಕಂತಾಗಿದೆ.
Advertisement
ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನ ಮಾಡಿರೋ ಈ ಸಿನಿಮಾದ ಟ್ರೇಲರ್ ನಿಜಕ್ಕೂ ಮಜವಾಗಿದೆ. ಅದಕ್ಕೆ ತಕ್ಕುದಾದ ಕಥಾ ಹಂದರದ ಸುಳಿವಿನೊಂದಿಗೆ ಪ್ರೇಕ್ಷಕರನ್ನೆಲ್ಲ ಖುಷಿಗೊಳಿಸಿದೆ. ಪ್ರೀತಿ, ಪ್ರೇಮ, ಭರ್ಜರಿ ಮನೋರಂಜನೆ, ಒಂದು ಕಾಯಿಲೆ, ಮತ್ಯಾವುದೋ ನಿಗೂಢ ಮತ್ತು ಖದರ್ ಹೊಂದಿರುವಂಥಾ ಮಾಸ್ ಸನ್ನಿವೇಶ. ಇಷ್ಟಿದ್ದು ಬಿಟ್ಟರೆ ಯಾವುದೇ ಸಿನಿಮಾವಾದರೂ ಪ್ರೇಕ್ಷಕರಿಗೆ ಇಷ್ಟವಾಗಲು ಮತ್ತೇನು ಬೇಕಿದ್ದೀತು? ಈಗ ಹೊರ ಬಂದಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಟ್ರೇಲರಿನಲ್ಲಿ ಅಷ್ಟೆಲ್ಲ ಅಂಶಗಳಿವೆ. ಈ ಕಾರಣದಿಂದಲೇ ಅದು ಪ್ರೇಕ್ಷಕರಿಗೆಲ್ಲ ಇಷ್ಟವಾಗಿದೆ.
Advertisement
Advertisement
ಈ ಚಿತ್ರವನ್ನು ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಣ ಮಾಡಿದ್ದಾರೆ. ಇದನ್ನು ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನ ಮಾಡಿದ್ದಾರೆ. ಇದು ಹೊಸ ಅಲೆಯ ಚಿತ್ರಗಳ ಸಾಲಿನಲ್ಲಿಯೇ ಹೊಸಾ ಛಾಪು ಮೂಡಿಸುವಂಥಾ ಗುಣಲಕ್ಷಣಗಳನ್ನು ಒಳಗೊಂಡಿರುವ ಚಿತ್ರ. ಆರಂಭದಿಂದಲೇ ಸುದ್ದಿ ಮಾಡುತ್ತಾ ಬಂದಿದ್ದ ಈ ಸಿನಿಮಾದತ್ತ ಈಗಂತೂ ಎಲ್ಲರೂ ಆಕರ್ಷಿತರಾಗಿದ್ದಾರೆ. ಈ ಟ್ರೇಲರ್ ನೋಡಿದ ಮೇಲಂತೂ ಯಾರಿಗೇ ಆದರೂ ಆದಷ್ಟು ಬೇಗನೆ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಕಾತರ ಮೂಡಿಕೊಳ್ಳದಿರುವುದಿಲ್ಲ. ಪ್ರೇಕ್ಷಕರಲ್ಲಿಯೂ ಕೂಡಾ ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಗಾಢವಾದ ನಂಬಿಕೆ ಹುಟ್ಟಿಕೊಂಡಿದೆ. ದತ್ತಣ್ಣ, ರಿಷಿ, ರಂಗಾಯಣ ರಘು, ಮಿತ್ರಾ ಸೇರಿದಂತೆ ಹಲವರ ಪಾತ್ರ ಪರಿಚಯ ಮಾಡಿಸುತ್ತಲೇ ಈ ಟ್ರೇಲರ್ ಸಖತ್ ಕ್ರೇಜ್ ಹುಟ್ಟುಹಾಕಿದೆ.