ಸ್ಯಾಂಡಲ್‍ವುಡ್‍ನ (Sandalwood) ಹಿರಿಯ ನಟಿ, ಅಭಿನಯ ಸರಸ್ವತಿ ಎಂದೇ ಖ್ಯಾತಿ ಹೊಂದಿದ್ದ ನಟಿ ಸರೋಜಾದೇವಿ (B.Saroja Devi) ಅಗಲಿಕೆಗೆ 11 ದಿನಗಳು. ಈ ಹಿನ್ನೆಲೆ ವೈಕುಂಠ ಸಮಾರಾಧನೆ (Vaikuntha Samaradhane) ಕಾರ್ಯವನ್ನು ಶುಕ್ರವಾರ (ಜು.25)ರಂದು ಕುಟುಂಬಸ್ಥರು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‍ವುಡ್‍ನ ನಟರು-ನಟಿಯರು ಹಾಗೂ ಕುಟುಂಬಸ್ಥರು, ಕುಟುಂಬದ ಆಪ್ತರು ಭಾಗಿಯಾಗಿದ್ದರು.
ಸರೋಜಾದೇವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಟ-ನಟಿಯರು ಭಾವುಕರಾದರು. ಸಮಾರಾಧನೆಯಲ್ಲಿ ಭಾಗಿಯಾದ ನಟ ಉಪೇಂದ್ರ ಬಳಿಕ ಮಾತನಾಡಿದರು. “ವಿಷ್ಣುವರ್ಧನ್ ಪ್ರಶಸ್ತಿ, ಡಾ.ರಾಜ್‍ಕುಮಾರ್ ಪ್ರಶಸ್ತಿ ಹಾಗೆ ಬಿ.ಸರೋಜಾದೇವಿ ಅವ್ರ ಹೆಸರಲ್ಲಿ ಪ್ರಶಸ್ತಿ ಆಗಬೇಕು. `ಎ’ ಸಿನಿಮಾ ಸೆನ್ಸಾರ್ ಆಗೋದಿಲ್ಲ ಅನ್ನೋ ಟೈಂನಲ್ಲಿ ಸಪೋರ್ಟ್ ನನಗೆ ಮಾಡಿದವರು. `ಎ’ ಸಿನಿಮಾವನ್ನ ಮೆಚ್ಚಿ ಹೊಗಳಿದ ಮೊದಲಿಗರು ಸರೋಜಮ್ಮ. `ಎ’ ಪಿಚ್ಚರ್‍ಗೆ ಪ್ರೊತ್ಸಾಹ ನೀಡದೇ ಇದ್ದಿದ್ದರೆ ಇವತ್ತು ನಾನು ಹೀರೋ ಆಗಿರೋಕೆ ಅವಕಾಶ ಇರ್ತಿರಲಿಲ್ಲ”. ಎಂದು ಈ ವೇಳೆ ನೆನಪಿಸಿಕೊಂಡರು. ಇದನ್ನೂ ಓದಿ: ಸರೋಜಾದೇವಿ ನನಗೂ ಸಿನಿಮಾದಲ್ಲಿ ನಟಿಸುವಂತೆ ಹೇಳಿದ್ದರು: ಡಿಕೆಶಿ
ಸರೋಜಾ ದೇವಿ ಅವರ ಪುತ್ರ ಗೌತಮ್ ಮಾತನಾಡಿ “ಸರೋಜಮ್ಮ ಅವ್ರಿಗೆ ಇಂಡಸ್ಟ್ರಿ ಬಗ್ಗೆ ಯಾವಾಗಲೂ ಗೌರವವಿತ್ತು. ಕೊನೆ ಘಳಿಗೆಯಲ್ಲಿ ಅವ್ರಿಗೆ ಆರೋಗ್ಯ ಸರಿಯಿರಲಿಲ್ಲ. ಮಲ್ಲೇಶ್ವರಂ ರಸ್ತೆಗೆ ಹೆಸರು ಇಡೋಕೆ ಚರ್ಚೆ ನಡಿತಾ ಇದೆ. ಈ ನಿರ್ಧಾರಕ್ಕೆ ಕುಟುಂಬದ ಸ್ವಾಗತವಿದೆ. ಮ್ಯೂಸಿಯಂ ಮಾಡುವ ಬಗ್ಗೆ ಯಾವಥರದ ಚಿಂತನೆ ಮಾಡಿಲ್ಲ. ಮಣ್ಣು ಮಾಡಿದ ಜಾಗದಲ್ಲಿ ಮೆಮೊರಿಯಲ್ ಮಾಡೋದಕ್ಕೆ ಚಿಂತನೆ ನಡಿತಿದೆ” ಎಂದರು.
ಸರೋಜಾ ದೇವಿ ಅವರ ವೈಕುಂಠ ಸಮಾರಾಧನೆಯಲ್ಲಿ ಹಿರಿಯ ನಟಿಯರಾದ ಸುಮಲತಾ ಅಂಬರೀಷ್, ಜಯಮಾಲಾ, ಶ್ರುತಿ, ಹೇಮಾ ಚೌಧರಿ, ಮಾಳವಿಕಾ ಅವಿನಾಶ್ ಮುಂತಾದ ನಟಿಯರು ಹಾಗೂ ನಟ ರವಿಶಂಕರ್ ಗೌಡ, ರಾಕ್‍ಲೈನ್ ವೆಂಕಟೇಶ್ ಭಾಗಿಯಾಗಿದ್ದರು. ಇದನ್ನೂ ಓದಿ: ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಸರೋಜಾದೇವಿ ಅಂತ್ಯಸಂಸ್ಕಾರ