– ಎಲ್ಲಾ ಸ್ಟಾರ್ ನಟರಿಗೆ ಹಾಟ್ ಫೇವರೆಟ್ ಆಗಿದ್ರು ಸರೋಜಾದೇವಿಯವರು
ಕನ್ನಡದಲ್ಲಿ ಮಾತ್ರವಲ್ಲ, ಎಲ್ಲ ನಟರಿಗೆ ಹಾಟ್ ಫೇವರೆಟ್ ಆಗಿದ್ದರು ಬಿ.ಸರೋಜಾದೇವಿಯವರು (B.Sarojadevi) ಎಂದು ಕನ್ನಡದ ಹಿರಿಯ ನಟಿ ಗಿರಿಜಾ ಲೋಕೇಶ್ (Girija Lokesh) ಅವರು ತಿಳಿಸಿದರು.
ನಟಿ ಸರೋಜಾದೇವಿ ಅವರೊಂದಿಗಿನ ಒಡನಾಟದ ಬಗ್ಗೆ `ಪಬ್ಲಿಕ್ ಟಿವಿ’ ಜೊತೆ ಮಾತನಡಿದ ಅವರು, ಅವರ ಚಿತ್ರಗಳನ್ನು ನೋಡಿದಾಗ ನಮ್ಮ ಕನಸಿನ ಕನ್ಯೆ ಅಂತ ಅನಿಸುತ್ತಿದ್ದರು. ಅವರ ಹತ್ತಿರ ಹೋಗೋ ಯೋಗ್ಯತೆಯೂ ನಮಗಿರಲಿಲ್ಲ. ಅವರನ್ನು ನೋಡೋದೇ ನಮ್ಮ ಭಾಗ್ಯವಾಗಿತ್ತು. ಲೋಕೇಶ್ ಅವರೊಟ್ಟಿಗೆ ತುಂಬಾ ಚೆನ್ನಾಗಿ ಮಾತಾಡುತ್ತಿದ್ದರು ಎಂದರು.ಇದನ್ನೂ ಓದಿ: ಶಕ್ತಿಗೆ ಇಂದು 500 ಕೋಟಿ ಟಿಕೆಟ್ ಸಂಭ್ರಮ- ಕಂಡಕ್ಟರ್ ಆಗಿ ಟಿಕೆಟ್ ಹಂಚಿದ ಸಿಎಂ
ಪ್ರತಿ ವರ್ಷ ನವೆಂಬರ್ 1 ಎಲ್ಲ ಕಲಾವಿದರು ಭೇಟಿಯಾಗುತ್ತಿದ್ದೆವು. ಆಗ ಒಂದು ಕಾರ್ಯಕ್ರಮ ಮಾಡಿ, ಕಲಾವಿದರನ್ನು ಸನ್ಮಾನ ಮಾಡುತ್ತಿದ್ದರು. ಆಗ ಅವರಿಗೆ ತಮ್ಮ ಸ್ವಂತ ಹಣದಿಂದ ಉಂಗುರ ನೀಡುತ್ತಿದ್ದರು. ಜೊತೆಗೆ ತಮ್ಮದೇ ಒಂದು ಟ್ರಸ್ಟ್ ಮಾಡಿಕೊಂಡು, ರಾಷ್ಟ್ರೀಯ ಪ್ರಶಸ್ತಿ ನೀಡಿ, ಒಂದು ಲಕ್ಷ ರೂ. ನೀಡುತ್ತಿದ್ದರು. ಆದರೆ ಇದನ್ನು ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ. ಇನ್ನೂ ನಾನು ಅಭಿನಯಕ್ಕೆ ಬಂದ ಮೇಲೆ ಜಯಂತಿ ಅವರೊಟ್ಟಿಗೆ ಸೇರಿ, ಸರೋಜಾದೇವಿ ಅವರ ಮನೆಗೆ ಹೋಗಿ ಅವರನ್ನು ಭೇಟಿಯಾಗುವ ಭಾಗ್ಯ ಸಿಕ್ಕಿತ್ತು. ಕಲಾವಿದರನ್ನ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು.
ಚಿಕ್ಕ ಮಕ್ಕಳ ಮನಸ್ಸಿನವರು. ತುಂಬಾ ಮುಗ್ಧ ಸ್ವಭಾವದವರು. ಆದರೆ ಚಿತ್ರರಂಗದ ಹೊರಗೆ ತುಂಬಾ ಗಾಂಭೀರ್ಯತೆಯಿಂದ ಇರುತ್ತಿದ್ದರು. ಪರಿಪೂರ್ಣ ಜೀವನವನ್ನು ಅನುಭವಿಸಿದರು. ಆದರೆ ವೈವಾಹಿಕ ಜೀವನವನ್ನು ಬಹಳ ದಿನ ಅನುಭವಿಸುವ ಭಾಗ್ಯ ಅವರಿಗೆ ಸಿಗಲಿಲ್ಲ. ಇನ್ನೂ ಕನ್ನಡ ಸೇರಿ ಬೇರೆ ಭಾಷೆಯ ನಟರು ಕೂಡ ಅವರ ಜೊತೆ ನಟಿಸಲು ಕಾಯುತ್ತಿದ್ದರು. ದಿಲೀಪ್ ಕುಮಾರ್, ಶಿವಾಜಿ ಗಣೇಶನ್ ಸೇರಿ ಹಿರಿಯ ನಟರು ಇವರ ಜೊತೆ ನಟನೆಗಾಗಿ ಕಾಯುತ್ತಿದ್ದರು. ಆಗ ಎಲ್ಲಾ ಸ್ಟಾರ್ ನಟರಿಗೆ ಹಾಟ್ ಫೇವರೆಟ್ ನಟಿ ಆಗಿದ್ದರು. ಸರೋಜಾದೇವಿ ನಮ್ಮ ಸಿನಿಮಾದಲ್ಲಿ ಇರಬೇಕು ಎಂದು ಹಾತೊರೆಯುತ್ತಿದ್ದರು ಎಂದರು.
ತಿಂಗಳಿಗೆ ಒಂದು ಬಾರಿಯಾದ್ರೂ ಭೇಟಿಯಾಗಿ ಮಾತನಾಡ್ತಿದ್ದೆ. ಆದರೆ ಕಳೆದ ಎರಡು ತಿಂಗಳಿಂದ ನಾನು ಅವರೊಂದಿಗೆ ಮಾತನಾಡಿರಲಿಲ್ಲ. ಅದೇ ಬೇಜಾರು. ಎಲ್ಲಾ ವಿಚಾರದಲ್ಲೂ ಶಿಸ್ತು. ಎಲ್ಲವನ್ನೂ ನಮಗೆ ಹೇಳಿ ಕೊಡುತ್ತಿದ್ದರು ಎಂದು ಸಂತಾಪ ಸೂಚಿಸಿದರು.ಇದನ್ನೂ ಓದಿ: ಉತ್ತರಾಖಂಡ ಸರ್ಕಾರದಿಂದ ‘ಆಪರೇಷನ್ ಕಾಲನೇಮಿ’ ಕಾರ್ಯಾಚರಣೆ – 82 ನಕಲಿ ಬಾಬಾಗಳ ಬಂಧನ