`ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ’ ಈ ಹಾಡನ್ನು ಬಾಲನಟನಾಗಿದ್ದ ಪುನೀತ್ ರಾಜಕುಮಾರ್ ಹಾಡಿದ್ದರು. ಆಗಲೇ ಪುನೀತ್ ತನ್ನ ಮಗನಾಗಿದ್ದರೆ ಚೆನ್ನಾಗಿತ್ತು ಎಂದುಕೊಂಡಿದ್ದರಂತೆ ಬಿ.ಸರೋಜಾದೇವಿಯವರು.
ಸರೋಜಾದೇವಿಯವರು ಅಮ್ಮನಾಗಿ, ಪುನೀತ್ ಮಗನಾಗಿ ನಟಿಸಿದ `ಯಾರಿವನು’ ಸಿನಿಮಾದ `ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ’ ಹಾಡು ಜನಮನದಲ್ಲಿ ಇಂದಿಗೂ ಹಸಿರಾಗಿದೆ. ಸಿನಿಮಾದಲ್ಲಿ ಬಾಲನಟನಾಗಿದ್ದ ಪುನೀತ್ ಸ್ವತಃ ಈ ಹಾಡನ್ನು ಹಾಡಿದ್ದರು. ಆಗಲೇ ಸರೋಜಾದೇವಿಯವರು ಪುನೀತ್ ತನ್ನ ಮಗನಾಗಿದ್ದರೆ ಚೆನ್ನಾಗಿತ್ತು ಅಂದುಕೊಂಡಿದ್ದರಂತೆ.ಇದನ್ನೂ ಓದಿ: 65 ಕೋಟಿ ವಹಿವಾಟು – ವೀಸಾ ಹಿಂದಿಕ್ಕಿ ವಿಶ್ವದಲ್ಲೇ ಈಗ UPI ನಂಬರ್ 1
ಯಾವಾಗಲೂ ಪುನೀತ್ ರಾಜ್‌ಕುಮಾರ್ ಕಂಡರೆ ಮಗನಂತಹ ಭಾವ. ಅಲ್ಲದೇ ಪುನೀತ್ ನಟನೆಯ `ನಟ ಸಾರ್ವಭೌಮ’ ಚಿತ್ರದಲ್ಲಿ ಸರೋಜಾದೇವಿಯವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದು ಅವರ ಕೊನೆಯ ಸಿನಿಮಾ ಆಗಿತ್ತು.
1938ರ ಜ.7ರಂದು ಜನಿಸಿದ್ದ ಸರೋಜಾದೇವಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ (ಜು.14) ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ನಿಧನರಾದರು.
ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.ಇದನ್ನೂ ಓದಿ: ಬಳ್ಳಾರಿ | ಶಾಲೆಗೆ ತೆರಳುತ್ತಿದ್ದ ಬಾಲಕಿ ಹಠಾತ್ ಕುಸಿದು ಬಿದ್ದು ಸಾವು