ಮುಂಬೈ: ಸಿನಿಮಾ ಉದ್ಯಮದಲ್ಲಿ ಕೆಲವು ದಿನಗಳಿಂದ ‘ಕಾಸ್ಟಿಂಗ್ ಕೌಚ್’ ಕುರಿತಾಗಿ ಭಾರೀ ಚರ್ಚೆಗಳು ನಡೆಯುತ್ತಿವೆ. ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಕಾಸ್ಟಿಂಗ್ ಕೌಚ್ ಪರ ಹೇಳಿಕೆ ನೀಡುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದಾರೆ.
ಬಾಲಿವುಡ್ ಕಾಸ್ಟಿಂಗ್ ಕೌಚ್ ನೆಪದಲ್ಲಿ ನಡೆಸುವ ರೇಪ್‍ಗೆ ಬದಲಾಗಿ ನಟಿಗೆ ಅನ್ನವನ್ನು ನೀಡುತ್ತದೆ ಅಂತಾ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ ವೇಳೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
ಕಾಸ್ಟಿಂಗ್ ಕೌಚ್ ಕಿರುಕುಳ ಬಾಬಾ ಅಝಮ್ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸಿನಿಮಾ ಅಂಗಳದಲ್ಲಿರುವ ಪ್ರತಿಯೊಬ್ಬ ಹುಡುಗಿಯ ಮೇಲೆ ಒಬ್ಬರಾದ್ರೂ ಕೈ ಹಾಕುವ ಪ್ರಯತ್ನ ಮಾಡ್ತಾರೆ. ಇಂತಹ ಪ್ರಕರಣದಲ್ಲಿ ಸರ್ಕಾರದ ಪ್ರತಿನಿಧಿಗಳು ಸಹ ಇರ್ತಾರೆ. ಸರ್ಕಾರದ ಪ್ರತಿನಿಧಿಗಳು ಫಿಲ್ಮ್ ಇಂಡಸ್ಟ್ರಿಯ ಹಿಂದೆ ಯಾಕೆ ಬೀಳುತ್ತಾರೋ ಗೊತ್ತಾಗುತ್ತಿಲ್ಲ. ಕೊನೆ ಪಕ್ಷದಲ್ಲಿ ಸಿನಿಮಾದವರು ರೇಪ್ ಬದಲಾಗಿ ನಟಿಗೆ ತುತ್ತು ಅನ್ನವಾದ್ರೂ ನೀಡ್ತಾರೆ ಅಂತಾ ಹೇಳಿದ್ದಾರೆ.
Advertisement
Defending the practice of casting couch, veteran #choreographer #SarojKhan said it's done with consent and at least provides livelihood.
Read @ANI story | https://t.co/n5A8tFktn5 pic.twitter.com/Rt77bE9ehs
— ANI Digital (@ani_digital) April 24, 2018
Advertisement
ಈ ಎಲ್ಲ ವಿಷಯಗಳು ನಟಿಯ ಮೇಲೆ ನಿರ್ಧರಿಸಲ್ಪಡುತ್ತವೆ. ನಟಿ ಲೈಂಗಿಕ ಕಿರುಕುಳಕ್ಕೆ ಒಳಗಾಗಲು ಇಷ್ಟ ಪಡದೇ ಇದ್ದರೆ ದೂರ ಉಳಿಯುವ ಸ್ವಾತಂತ್ರ್ಯ ಆಕೆಗಿದೆ. ಅವಳಲ್ಲಿ ನಟನೆಯ ಕಲೆ ಇದ್ರೆ, ಆಕೆ ಎಲ್ಲಿಯಾದ್ರೂ ಬದುಕಬಹುದು. ಆದ್ರೆ ಫಿಲ್ಮ್ ಇಂಡಸ್ಟ್ರಿಗೆ ಅವಮಾನಿಸುವಂತಹ ಹೇಳಿಕೆಗಳನ್ನು ನೀಡಬಾರದು. ಫಿಲ್ಮ್ ಇಂಡಸ್ಟ್ರಿ ನಮಗೆ ತಂದೆ-ತಾಯಿ. ಹೀಗಾಗಿ ಅನಾವಶ್ಯಕ ಹೇಳಿಕೆಗಳನ್ನು ನೀಡಬಾರದು ಅಂತಾ ಸರೋಜ್ ಖಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆ ಮೆಟ್ಟಿಲೇರಿದ್ರು ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಸ್ಯಾಂಡಲ್ ವುಡ್ ನಟಿ
Advertisement
ಸರೋಜ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟಾಲಿವುಡ್ ನಟಿ ಶ್ರೀರೆಡ್ಡಿ, ಇದೂವರೆಗೂ ಸರೋಜ್ ಖಾನ್ ಮೇಡಂ ಮೇಲಿದ್ದ ಗೌರವವೆಲ್ಲಾ ಕಡಿಮೆಯಾಗಿದೆ. ಸಿನಿಮಾ ರಂಗದಲ್ಲಿರುವ ಒಬ್ಬ ಹಿರಿಯ ಕಲಾವಿದೆಯಾಗಿ, ಯುವ ನಟಿಯರಿಗೆ ಒಳ್ಳೆಯ ದಾರಿಯನ್ನು ತೋರಿಸಬೇಕು. ಅದರ ಬದಲಾಗಿ ನಟಿಯರು ನಿರ್ಮಾಪಕರ ಗುಲಾಮರು ಇದ್ದಂತೆ ನಿಮ್ಮ ಹೇಳಿಕೆ ಇದೆ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಕನ್ನಡದ ನಟಿ ಕವಿತಾ!
Yeh chala aa raha hai Baba azam ke zamaane se. Har ladki ke upar koi na koi haath saaf karne ki koshish karta hai. Govt ke log bhi karte hain. Tum film industry ke peeche kyun pade ho? Woh kam se kam roti toh deti hai. Rape karke chhod toh nahi deti: Saroj Khan on Casting Couch. pic.twitter.com/xvHxSbvhzg
— ANI (@ANI) April 24, 2018
I lost respect for you Saroj ma'am. Being an elder you should give a good path to young actresses. It is giving a wrong indication that you have to be a slave to producers: Sri Reddy (actress who alleged that women are sexual exploited by producers) on Saroj Khan's remark. pic.twitter.com/I9TWmLahrX
— ANI (@ANI) April 24, 2018