– ಕಮರ್ಷಿಯಲ್ ಅಲೆಗೆದುರಾದ ಕಲಾತ್ಮಕ ಹಾದಿ!
ಬೆಂಗಳೂರು: ಕಮರ್ಷಿಯಲ್ ಸ್ವರೂಪದ ಸಿನಿಮಾಗಳಲ್ಲಿ ಗೆದ್ದ ನಂತರವೂ ಕಲಾತ್ಮಕ ಸಿನಿಮಾಗಳತ್ತ ಹೊರಳಿಕೊಳ್ಳುವುದು ಕನ್ನಡದ ಮಟ್ಟಿಗೆ ಅಪರೂಪದ ಬೆಳವಣಿಗೆ. ಅಂಥಾ ಹೊಸಾ ಥರದ ಬೆಳವಣಿಗೆಯೊಂದಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಡಿಗಲ್ಲು ಹಾಕಿದ್ದಾರೆ. ಅದರ ಭಾಗವಾಗಿಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ ಎಂಬ ಚಿತ್ರವೀಗ ತೆರೆಗಾಣಲು ಅಣಿಗೊಂಡಿದೆ!
ಇದೀಗ ಬೆಲ್ ಬಾಟಮ್ ಚಿತ್ರದಲ್ಲಿ ಹೀರೋ ಆಗಿಯೂ ನಟಿಸುತ್ತಿರುವ ರಿಷಬ್ ಶೆಟ್ಟಿ ಅದಾಗಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರವನ್ನೂ ನಿರ್ದೇಶನ ಮಾಡಿ ಮುಗಿಸಿದ್ದಾರೆ. ಈ ಚಿತ್ರಕ್ಕೆ ಸಿಗುತ್ತಿರೋ ವ್ಯಾಪಕ ಪ್ರಚಾರ, ಅದರ ಬಗ್ಗೆ ಮೂಡಿಕೊಂಡಿರೋ ನಿರೀಕ್ಷೆಗಳನ್ನು ನೋಡಿದರೆ ಭಿನ್ನ ಬಗೆಯ ಪ್ರಯೋಗಗಳಿಗೆ ಕನ್ನಡ ಚಿತ್ರ ರಂಗದಲ್ಲೊಂದು ಸುವರ್ಣ ಯುಗ ಆರಂಭಗೊಂಡಿದೆ ಅಂತಲೂ ಅನ್ನಿಸುತ್ತದೆ.
Advertisement
Advertisement
ಕಾಸರಗೋಡು ಗಡಿನಾಡು. ಸಂಪನ್ನವಾದ ಸಾಂಸ್ಕೃತಿಕ ಹಿನ್ನೆಲೆ, ಪ್ರಾಕೃತಿಕ ಶ್ರೀಮಂತಿಕೆ ಹೊಂದಿದ್ದರೂ ಅಲ್ಲಿನ ಜನರನ್ನು ಕಾಲಾಂತರಗಳಿಂದಲೂ ನಾನಾ ಸಂಕಷ್ಟಗಳು ಕಾಡುತ್ತಲೇ ಬಂದಿವೆ. ಇದನ್ನು ಸರ್ಕಾರಿ ಶಾಲೆಯೊಂದರ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗೆ ತಲುಪಿಸುವ ಸದುದ್ದೇಶದೊಂದಿಗೇ ರಿಷಬ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ.
Advertisement
ಈಗಾಗಲೇ ದಡ್ಡ ದಡ್ಡ ಸೇರಿದಂತೆ ನಾನಾ ಹಾಡುಗಳ ಮೂಲಕವೂ ಈ ಚಿತ್ರ ಕಮರ್ಷಿಯಲ್ ಸಿನಿಮಾಗಳನ್ನೇ ಮೀರಿಸುವಂತೆ ಪ್ರಚಲಿತಕ್ಕೆ ಬರುತ್ತಿದೆ. ಅನಂತ್ ನಾಗ್ ಅವರು ಬಹು ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿರೋ ಈ ಚಿತ್ರ ವಾಸ್ತವದಲ್ಲಿ ಮಕ್ಕಳ ಚಿತ್ರವಾದರೂ ಕೂಡಾ ಅದನ್ನೊಂದು ಜಾನರಿಗೆ ಸೀಮಿತ ಮಾಡುವಂತಿಲ್ಲವಂತೆ. ಯಾಕೆಂದರೆ ಇಲ್ಲಿ ಮಕ್ಕಳ ಮೂಲಕ ಘನ ಗಂಭೀರವಾದ ವಿಚಾರಗಳನ್ನೂ ಕೂಡಾ ತಣ್ಣಗೆ ನಿರೂಪಿಸಲಾಗಿದೆಯಂತೆ.
Advertisement
ಇದೆಲ್ಲ ಏನೇ ಇದ್ದರೂ ಕಲಾತ್ಮಕ ಜಾನರಿನದ್ದೆಂದೇ ಹೇಳಲಾಗುತ್ತಿರೋ ಈ ಚಿತ್ರ ಅಲೆಯೆಬ್ಬಿಸುತ್ತಿರುವ ರೀತಿ ನಿಜಕ್ಕೂ ಅಚ್ಚರಿದಾಯಕವಾಗಿದೆ.