ಲಕ್ನೋ: ಟೀಂ ಇಂಡಿಯಾ ಕ್ರಿಕೆಟಿಗ ಸರ್ಫರಾಜ್ ಖಾನ್ ಅವರ ಸಹೋದರ ಮುಶೀರ್ ಖಾನ್ (Musheer Khan) ಅವರು ಉತ್ತರ ಪ್ರದೇಶದಲ್ಲಿ ರಸ್ತೆ ಅಪಘಾತಕ್ಕೀಡಾಗಿ (Road Accident) ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮುಂಬೈ ಮೂಲದ ಆಟಗಾರನಾದ ಮುಶೀರ್ ಖಾನ್ ಇರಾನಿ ಕಪ್ ಟೈ (Irani Cup tie) ಪರವಾಗಿ ಆಡಲು ಕಾನ್ಪುರದಿಂದ ಲಕ್ನೋಗೆ ತನ್ನ ಕೋಚ್ ಆಗಿರುವ ತಂದೆ ನೌಶಾದ್ ಖಾನ್ ಅವರೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ರಸ್ತೆ ಅಪಘಾತಕ್ಕೀಡಾಗಿ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: IPL 2025 Auction: ಮೆಗಾ ಹರಾಜಿಗೂ ಮುನ್ನ ಬಿಸಿಸಿಐನಿಂದ ಆಗುತ್ತಾ ಪ್ರಮುಖ ಬದಲಾವಣೆ?
ಪ್ರತಿಭಾನ್ವಿತ ರಣಜಿ ಪ್ಲೇಯರ್ ಆಗಿರುವ 19 ವರ್ಷದ ಮುಶೀರ್ ಖಾನ್ ಈವರೆಗೆ 9 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದಾರೆ. ಇತ್ತೀಚೆಗೆ ದುಲೀಪ್ ಟ್ರೋಫಿಯಲ್ಲಿ ಭಾರತ – ಎ (India-A) ತಂಡದ ವಿರುದ್ಧ 181 ರನ್ ಗಳಿಸಿ ಮಿಂಚಿದ್ದರು. ಇದನ್ನೂ ಓದಿ: ಭಾರತ-ಬಾಂಗ್ಲಾ 2ನೇ ಟೆಸ್ಟ್ ಪಂದ್ಯಕ್ಕೆ ಮಳೆ ಕಾಟ – ಮೊದಲ ದಿನದಂತ್ಯಕ್ಕೆ ಬಾಂಗ್ಲಾದೇಶ 107ಕ್ಕೆ 3 ವಿಕೆಟ್
ಮುಂದಿನ ಅಕ್ಟೋಬರ್ 1 ರಿಂದ 5ರ ವರೆಗೆ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಮುಂಬೈನ ಇರಾನಿ ಕಪ್ ಟೈ ವಿರುದ್ಧ ರಣಜಿ (Ranji Trophy) ನಡೆಯಲಿದೆ. ಅಪಘಾತಕ್ಕೀಡಾಗಿರುವ ಮುಶೀರ್ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಮತ್ತೊಂದು ವರದಿಯ ಪ್ರಕಾರ, ಕುತ್ತಿಗೆಗೆ ಭಾಗಕ್ಕೆ ಗಾಯವಾಗಿರುವುದರಿಂದ ಮೂರು ತಿಂಗಳ ಕಾಲ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಇದನ್ನೂ ಓದಿ: IPL 2025 | ಮುಂಬೈ, ಆರ್‌ಸಿಬಿಗೆ ಬಿಗ್ ಶಾಕ್ – ದೈತ್ಯ ಆಟಗಾರರನ್ನೇ ಹೊರದಬ್ಬಿದ ಫ್ರಾಂಚೈಸಿ