Connect with us

Cinema

ಓದಿಲ್ಲ, ಸಂಗೀತ ತರಬೇತಿ ಪಡೆದಿಲ್ಲ, ಕುರಿ ಮೇಯಿಸುತ್ತಾ ಸರಿಗಮಪ ವೇದಿಕೆಯೇರಿದ ಹನುಮಂತನ ಕಥೆ

Published

on

ಹಾವೇರಿ: ಯಾವುದೇ ಸಂಗೀತ ತರಬೇತಿಯನ್ನು ಪಡೆಯದೆ, ಕುರಿ ಮೇಯಿಸುತ್ತಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಸೀಸನ್ 15’ ಕಾರ್ಯಕ್ರಮಕ್ಕೆ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ತಾಂಡಾದ ನಿವಾಸಿ ಹನುಮಂತ ಆಯ್ಕೆಯಾಗಿದ್ದು, ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಇಂದು ಹಾಡು ಹೇಳುವ ಮೂಲಕ ಹನುಮಂತ ಪ್ರಸಿದ್ಧಿಯಾಗಿದ್ದಾರೆ. ಬಾಲ್ಯದಿಂದಲೂ ಹನುಮಂತ ಕುರಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಓದಿದ್ದು ಕೇವಲ ಐದನೇ ತರಗತಿ. ಸಂಗೀತ ಕಲಿಯಲು ಯಾವುದೇ ಸಂಗೀತ ಶಾಲೆಗೂ ಹೋಗಿಲ್ಲ. ಕುರಿಗಳನ್ನ ಮೇಯಿಸುತ್ತಾ ಮೊಬೈಲಿನಲ್ಲಿ ಹಾಡು ಕೇಳುತ್ತಾ ಇಂಪಾಗಿ ಹಾಡುಗಳನ್ನ ಹಾಡುವುದನ್ನು ಕಲಿಯುತ್ತಿದ್ದಾರೆ.

ಹಾಡು ಕಲಿತ್ತಿದ್ದು ಹೇಗೆ?
ಶೀಲವ್ವ ಮತ್ತು ಮೇಘಪ್ಪ ದಂಪತಿಗೆ ಒಟ್ಟು ಆರು ಜನ ಮಕ್ಕಳು. ಅವರಲ್ಲಿ ಹನುಮಂತ ಐದನೇಯ ಪುತ್ರ. ಶರೀಫರ ತತ್ವಪದಗಳು, ಭಜನಾ ಪದಗಳನ್ನ ಮೊಬೈಲಿನಲ್ಲಿ ಕೇಳಿ ಹಾಡು ಹಾಡುವ ಹವ್ಯಾಸವನ್ನ ಬೆಳೆಸಿಕೊಂಡಿದ್ದಾರೆ. ಕೇಳೋ ಜಾಣ, ತರವಲ್ಲ ತಗಿ ನಿನ್ ತಂಬೂರಿ, ಉಳ್ಳವರು ಶಿವಾಲಯ ಮಾಡುವರು, ಎಂಥಾ ಮೋಜಿನ ಕುದುರೆ ಹೀಗೆ ಕೆಲವೊಂದು ಹಾಡುಗಳನ್ನ ಕುರಿಗಾಯಿ ಹನುಮಂತ ಅತ್ಯಂತ ಪ್ರಾಸ ಮತ್ತು ಲಯಬದ್ಧವಾಗಿ ಹಾಡುತ್ತಾರೆ. ಕುರಿ ಕಾಯುತ್ತಾ ಹಾಡುಗಳನ್ನ ಹೇಳುತ್ತಿದ್ದ ಕುರಿಗಾಯಿ ಈಗ ಖಾಸಗಿ ವಾಹಿನಿಯೊಂದರ ಸರಿಗಮಪ ಸೀಸನ್ 15ಕ್ಕೆ ಆಯ್ಕೆ ಆಗಿ ಸೈ ಎನಿಸಿಕೊಂಡಿದ್ದಾರೆ.

ಕುಟುಂಬದವರು ಹೇಳಿದ್ದೇನು?
ಕುರಿಗಾಯಿ ಹನುಮಂತ ಹಾಡುವ ಹಾಡು ಎಂಥವರನ್ನೂ ಮೂಕವಿಸ್ಮಿತರನ್ನಾಗಿಸುತ್ತೆ. ಕುರಿ ಮೇಯಿಸುತ್ತಾ ಮೊಬೈಲಿನಲ್ಲೇ ಭಜನಾ ಪದಗಳು, ಶಿಶುನಾಳ ಶರೀಫರ ತತ್ವ ಪದಗಳು, ಬಸವಣ್ಣನವರ ಹಾಡುಗಳು ಸೇರಿದಂತೆ ಅನೇಕ ಜಾನಪದ ಹಾಡುಗಳನ್ನ ಹಾಡೋದನ್ನ ಕಲಿತಿದ್ದಾನೆ. ಅದರಲ್ಲೂ ನಾಲ್ಕು ಹಾಡುಗಳನ್ನ ಕೇಳಿದರೆ ಮಾತ್ರ ಎಂತೆಂಥ ಕಲಾವಿದರೂ ಸಹ ತಲೆದೂಗುತ್ತಾರೆ. ಈಗಾಗಲೇ ಹನುಮಂತನ ಹಾಡು ಕೇಳಿ ಹಂಸಲೇಖ, ಅರ್ಜುನ್ ಜನ್ಯಾ ಸೇರಿದಂತೆ ಅನೇಕ ಖ್ಯಾತನಾಮರು ಸೈ ಅಂದಿದ್ದಾರೆ. ಸಂಗೀತವನ್ನೆ ಕಲಿಯದೆ, ಶಾಲೆಯನ್ನ ಅಷ್ಟಾಗಿ ಕಲಿಯದಿದ್ದರೂ ಹಾಡ್ತಾ ಹಾಡ್ತಾ ರಾಗ ಅನ್ನುವಂತೆ ಹನುಮಂತ ಸುಮಧುರವಾಗಿ ಹಾಡು ಹೇಳೋದನ್ನ ಕರಗತ ಮಾಡಿಕೊಂಡಿದ್ದಾನೆ ಎಂದು ಹನುಮಂತ ಅವರ ಕುಟುಂಬದವರು ಹೇಳಿದ್ದಾರೆ.

ಕುರಿ ಕಾಯುತ್ತಾ ಎಂಥ ಸಿಂಗರ್ ಗಳನ್ನೂ ಮೀರಿಸುವಂತೆ ಹಾಡು ಹೇಳುವ ಹನುಮಂತನಿಗೆ ಇನ್ನು ಅವಕಾಶಗಳು ಸಿಗಬೇಕಿದೆ. ಈಗಾಗಲೇ ಖಾಸಗಿ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಹಾಡು ಹೇಳುತ್ತಿರುವ ಹನುಮಂತ ಅವರಿಗೆ ಸಂಗೀತ ಸರಸ್ವತಿ ತಾನಾಗೆ ಒಲಿದು ಬಂದಂತಾಗಿದೆ. ಅವನಿಗೆ ಹೆಚ್ಚಿನ ಅವಕಾಶಗಳು ಒದಗಿ ಬಂದಿದ್ದೆ ಆದರೆ ಹನುಮಂತ ಅದ್ಭುತ ಗಾಯಕ ಆಗುದರಲ್ಲಿ ಎರಡು ಮಾತಿಲ್ಲ ಅಂತ ಸ್ಥಳೀಯರು ಹೇಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *