ಹೈದರಾಬಾದ್: ತಾಳಿ ಕಟ್ಟಲು ಕೆಲವು ಗಂಟೆ ಬಾಕಿ ಇರುವಾಗ ವಧು ವರನಿಗೆ ಕೈ ಕೊಟ್ಟು ತನ್ನ ಪ್ರಿಯಕರನ ಜೊತೆಗೆ ಹೋಗಿರುವ ಘಟನೆ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ.
ಮದನಪಲ್ಲಿ ವಲಯದ ತಟ್ಟಿವರಿಪಲ್ಲಿ ನಿವಾಸಿಯಾದ ರಾಮಕೃಷ್ಣ ಮತ್ತು ಮಲ್ಲಿಕಾ ದಂಪತಿ ಪುತ್ರಿ ಸೋನಿಕಾ ಮತ್ತು ಮದನಪಲ್ಲಿ ಪಟ್ಟಣದ ಕಾಲನಿಯೊಂದರ ಯುವಕನಿಗೂ ಮದುವೆ ನಿಶ್ಚಯವಾಗಿತ್ತು. ಇಬ್ಬರ ಕುಟುಂಬಸ್ಥರು ಒಟ್ಟಿಗೆ ಕುಳಿತು ಜಾತಕಫಲವನ್ನು ನೋಡಿ ಒಂದು ತಿಂಗಳ ಹಿಂದೆಯೇ ಮದುವೆಗೆ ನಿಶ್ಚಯ ಮಾಡಿದ್ದರು. ಇದನ್ನೂ ಓದಿ: ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್
ವರ ಮತ್ತು ವಧುವಿನ ಕಡೆಯ ಸಂಬಂಧಿಕರು ಮತ್ತು ಆಪ್ತರು ಮದುವೆಗೆ ಆಗಮಿಸಿದ್ದರು. ಭಾನುವಾರ ಮದುವೆಯಾಗಬೇಕಿತ್ತು. ಶನಿವಾರ ರಾತ್ರಿ ರಿಸೆಪ್ಷನ್‍ಗೆಂದು ಸೀರೆ ಧರಿಸಿ ಬರುವುದಾಗಿ ಹೇಳಿ ವಧುವಿನ ಕೊಠಡಿಗೆ ತೆರಳಿದ್ದ ಸೋನಿಕಾ ಮರಳಿ ಬರಲೇ ಇಲ್ಲ. ಎಲ್ಲಿ ಹೋದಳು ಎಂದು ವಿಚಾರಿಸುತ್ತಲೇ ಇಡೀ ರಾತ್ರಿ ಕಳೆದಿದೆ. ಆದರೆ ಇತ್ತ ಮನೆಯವರು ಹುಡುಕುತ್ತಿದ್ದರೆ ಸೋನಿಕಾ ತನ್ನ ಪ್ರಿಯಕರ ಚರಣ್ ಜೊತೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ.ಇದನ್ನೂ ಓದಿ: ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣ: ಮೋದಿ
ವರನ ಕಡೆಯವರು ಈ ವಿಚಾರವಾಗಿ ಮದನಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮದುವೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇವೆ, ಸಬಂಧಿಕರು ಮುಂದೆ ನಮಗೆ ಅವಮಾನವಾಗಿದೆ ಎಂದೂ ದೂರು ನೀಡಿದ್ದಾರೆ. ಸದ್ಯ ಪ್ರಕರಣ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೋನಿಕಾ ಎಂಬಿಎ ಓದಿದ್ದು, ಸ್ಥಳೀಯ ಗುರುಕುಲ ಶಾಳೆಯಲ್ಲಿ ಸೂಪರ್‍ವೈಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ನನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಲು ಮುಂದಾಗಿದ್ದರು. ನನ್ನನ್ನು ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆಕೆಯೂ ಅವಳ ಕುಟುಂಬಸ್ಥರ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾಳೆ.