ಮೈಸೂರು: ಚಾಮುಂಡಿ ಬೆಟ್ಟದಲ್ಲಿ (Chamundi Hill) ಚಾಮುಂಡೇಶ್ವರಿಯ ಹರಕೆ ಸೀರೆ ಕಳ್ಳತನ ಆರೋಪ ಮಾಡಿದ್ದ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ವಿರುದ್ಧವೇ ಎಫ್‌ಐಆರ್ ದಾಖಲಿಸಲಾಗಿದೆ.
ಸ್ನೇಹಮಯಿ ಕೃಷ್ಣ ಅವರ ವಿರುದ್ಧ ಕೃಷ್ಣರಾಜ ಪೊಲೀಸ್ ಠಾಣೆಗೆ ಚಾಮುಂಡೇಶ್ವರಿ ದೇವಾಲಯದ ಕಾರ್ಯದರ್ಶಿ ರೂಪಾ ದೂರು ನೀಡಿದ್ದಾರೆ. ಇದನ್ನೂ ಓದಿ: ಹರಕೆ ಸೀರೆ ಮಾರಾಟ ಆರೋಪ – ಅದು ಸೀರೆಯಲ್ಲ, ಸೀರೆಯಲ್ಲಿ ಕಟ್ಟಿದ ಕಡತ: ಕಾರ್ಯದರ್ಶಿ ರೂಪಾ
Advertisement
Advertisement
ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪ ಹೊರಿಸಿ ರೂಪಾ ಅವರು ದೂರು ನೀಡಿದ್ದರು. ದೂರಿನ ಹಿನ್ನೆಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Advertisement
ಚಾಮುಂಡೇಶ್ವರಿ ದೇವಿಯ ಹರಕೆ ಸೀರೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಸ್ನೇಹಮಯಿ ಕೃಷ್ಣ ದೂರಿದ್ದರು. ಈ ಸಂಬಂಧ ವೀಡಿಯೋ ಕೂಡ ಹರಿಬಿಟ್ಟಿದ್ದರು. ವ್ಯಕ್ತಿಯೊಬ್ಬರು ಬೆಟ್ಟದಲ್ಲಿ ಗಂಟೊಂದರಲ್ಲಿ ಸೀರೆಗಳನ್ನು ತುಂಬಿಕೊಂಡು ಸಾಗಿಸಿದ್ದಾರೆಂದು ಆರೋಪಿಸಲಾಗಿತ್ತು. ಇದನ್ನೂ ಓದಿ: ಚಾಮುಂಡಿ ದೇವಿಗೆ ಕೊಟ್ಟ ಹರಕೆ ಸೀರೆ ಕಾಳಸಂತೆಯಲ್ಲಿ ಮಾರಾಟ ಆರೋಪ – ಸ್ನೇಹಮಯಿ ಕಷ್ಣ ದೂರು
Advertisement
ಇದಕ್ಕೆ ಪ್ರತಿಕ್ರಿಯಿಸಿದ ರೂಪಾ ಅವರು ಆರೋಪವನ್ನು ಅಲ್ಲಗಳೆದಿದ್ದಾರೆ. ಅದು ಸೀರೆಗಳಲ್ಲ. ಕಡತಗಳನ್ನು ಗಂಟು ಹಾಕಿ ಸಾಗಿಸಿರುವುದು ಎಂದು ಸ್ಪಷ್ಟಪಡಿಸಿದ್ದರು.