ನವದೆಹಲಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ `ರನ್ ಫಾರ್ ಯುನಿಟಿ’ ಹೆಸರಿನಲ್ಲಿ ಬೃಹತ್ ಮ್ಯಾರಥಾನ್ ಆಯೋಜಿಸಿದೆ.
ಮಂಗಳವಾರ ಭಾರತದ ಉಕ್ಕಿನ ಮನುಷ್ಯ ಅಂತಲೇ ಖ್ಯಾತಿಗಳಿಸಿರುವ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನವಾಗಿದ್ದು, ಧೀಮಂತ ನಾಯಕನ ಸ್ಮರಣೆಯನ್ನು ಇಡೀ ದೇಶ ಮಾಡಬೇಕಿದೆ ಅಂತಾ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ನಲ್ಲಿ ಕರೆ ನೀಡಿದ್ದಾರೆ.
Advertisement
Advertisement
ಈ ಹಿನ್ನಲೆಯಲ್ಲಿ ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬೃಹತ್ ಮ್ಯಾರಥಾನ್ ಆಯೋಜಿಸಲಾಗಿದ್ದು, ಸ್ವಯಂಪ್ರೇರಿತವಾಗಿ ಭಾಗವಹಿಸುವಂತೆ ಕೇಂದ್ರದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೂ ಸೂಚಿಸಲಾಗಿದೆ.
Advertisement
ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದು, ಜೊತೆಗೆ ಕೇಂದ್ರದ ಹಲವು ಮಂತ್ರಿಗಳು ಸಾಕ್ಷಿಯಾಗಲಿದ್ದಾರೆ. ಬೆಳಗ್ಗೆ ಏಳು ಗಂಟೆ ಯಿಂದ ಮ್ಯಾರಥಾನ್ ಆರಂಭವಾಗಲಿದ್ದು ಸಮಾರು ಇಪ್ಪತ್ತು ಸಾವಿರ ಜನರು ದೆಹಲಿಯಲ್ಲಿ ಸೇರುವ ನಿರೀಕ್ಷೆ ಮಾಡಲಾಗಿದೆ. ದೇಶದೆಲ್ಲೆಡೆ ರನ್ ಫಾರ್ ಯೂನಿಟಿ ಮ್ಯಾರಥಾನ್ ನಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.