ಶರತ್ ಬಾಬು ನಿಧನ ಸುಳ್ಳು- ಆರೋಗ್ಯದ ಬಗ್ಗೆ ನಟನ ಕುಟುಂಬ ಹೇಳಿದ್ದೇನು..?

Public TV
1 Min Read
SHARATH BABU 1

ಬೆಂಗಳೂರು: ಹಿರಿಯ ನಟ ಶರತ್ ಬಾಬು (Sarath Babu) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಶರತ್ ಬಾಬು ನಿಧರಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ. ಆದರೆ ಇದು ಸುಳ್ಳು ಸುದ್ದಿ ಎಂದು ಅವರ ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿರುವ ನಟನ ಆರೋಗ್ಯ ಸದ್ಯ ಚೇತರಿಸಿಕೊಂಡಿದೆ. ಶೀಘ್ರವೇ ಶರತ್ ಬಾಬು ಗುಣಮುಖರಾಗಲಿದ್ದಾರೆ ಎಂದು ಶರತ್ ಬಾಬು ಅವರ ಅಕ್ಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

SHARATH BABU

ಇತ್ತೀಚಿಗೆ ನಟ ದಿಢೀರ್ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರ ಆರೋಗ್ಯ ಸುಧಾರಿಸಿದ ಕಾರಣ ಅವರನ್ನು ಬೆಂಗಳೂರಿನಿಂದ ಹೈದರಾಬಾದ್‍ನ ಆಸ್ಪತ್ರೆ (Hyderabad Hospital) ಗೆ ಶಿಫ್ಟ್ ಮಾಡಲಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಟನಿಗೆ ಉಸಿರಾಡಲು ಕಷ್ಟವಾಗಿತ್ತು. ಹೀಗಾಗಿ ವೆಂಟಿಲೇಟರ್‍ನಲ್ಲಿ ಇಡಲಾಗಿತ್ತು. ಇದನ್ನೂ ಓದಿ: ಖ್ಯಾತ ನಟ, ನಿರ್ದೇಶಕ ಮನೋಬಾಲಾ ನಿಧನ

Sharath Babu 1

ದಕ್ಷಿಣದ ಹಿರಿಯ ನಟ ಶರತ್ ಬಾಬು ಸುಮಾರು 4 ದಶಕಗಳಿಂದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಚಿರಪರಿಚಿತರಾಗಿದ್ದರು. ಕನ್ನಡದಲ್ಲಿ ಅವರು ನಟಿಸಿದ ಅಮೃತವರ್ಷಿಣಿ (mruthaVarshini) ಸಿನಿಮಾ ಸೂಪರ್ ಹಿಟ್ ಆಗಿತ್ತು.

Share This Article