ಇಂದು ನಿಧನರಾಗಿರುವ (death) ದಕ್ಷಿಣದ ಖ್ಯಾತ ಹಿರಿಯ ನಟ ಶರತ್ ಬಾಬು ಅವರು ಸುಮಲತಾ (Sumalatha Ambarish) ಜೊತೆ ಹತ್ತು ಸಿನಿಮಾಗಳಲ್ಲಿ ನಟಿಸಿದ್ದಾರಂತೆ. ತಮಿಳಿನ ಚೊಚ್ಚಲ ಚಿತ್ರದಲ್ಲೂ ಶರತ್ ಬಾಬು ನಟಿಸಿದ್ದರು ಎಂದು ಸುಮಲತಾ ಅಂಬರೀಶ್ ನೆನಪಿಸಿಕೊಂಡಿದ್ದಾರೆ. ಅಲ್ಲದೇ, ಶರತ್ ಬಾಬು (Sharat Babu) ನಟಿಸಿದ ಕನ್ನಡದ ಕೊನೆಯ ಚಿತ್ರದಲ್ಲೂ ಸುಮಲತಾ ನಟಿಸಿದ್ದರು ಎನ್ನುವುದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಗಲಿದ ನಟನಿಗೆ ಸಂತಾಪಗಳನ್ನು ಸೂಚಿಸಿರುವ ಸುಮಲತಾ, ‘ಹಿರಿಯ ನಟ ಶರತ್ ಬಾಬು ಅವರ ನಿಧನದ ಸುದ್ದಿ ಅಪಾರ ನೋವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬಕ್ಕೆ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಶರತ್ ಬಾಬು ಅವರೊಂದಿಗೆ ನಾನು ಹತ್ತು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅಲ್ಲದೇ, ನಾನು ತಮಿಳಿನಲ್ಲಿ ನಟಿಸಿದ್ದ ಮೊದಲ ಚಿತ್ರ ಹಾಗೂ ಕನ್ನಡದಲ್ಲಿ ಅವರ ಕೊನೆ ಚಿತ್ರ ಎ.ಕೆ 56 ಚಿತ್ರದಲ್ಲೂ ತೆರೆ ಹಂಚಿಕೊಂಡ ನೆನಪು ಇನ್ನೂ ಕಣ್ಮುಂದಿದೆ. ಇದನ್ನೂ ಓದಿ:ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ
ಅಮೃತವರ್ಷಿಣಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಅವರು ಐದು ದಶಕಗಳ ಕಾಲ ನಟರಾಗಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆ ಎಲ್ಲ ಚಿತ್ರಗಳ ಮೂಲಕ ಸದಾ ನಮ್ಮೊಂದಿಗೆ ಜೀವಂತವಾಗಿ ಇರುತ್ತಾರೆ ಎಂದು ನೆನಪಿಸಿಕೊಂಡಿದ್ದಾರೆ.