ಮೈಸೂರು: ಸಂದೇಶ್ ನಾಗರಾಜ್ ಕುಟುಂಬಕ್ಕೆ ಜೆಡಿಎಸ್ ಯಾವುದೇ ಮೋಸ ಮಾಡಿಲ್ಲ. ಅವರು ಯಾಕೆ ನಮ್ಮ ಪಕ್ಷವನ್ನು ದೂರುತ್ತಿದ್ದಾರೆ ಗೊತ್ತಿಲ್ಲ ಎಂದು ಜೆಡಿಎಸ್‌ನ ಮಾಜಿ ಸಚಿವ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ಗೆ ಯಾರೂ ಅನಿವಾರ್ಯವಲ್ಲ. ಜೆಡಿಎಸ್ ನಮಗೆ ಅನಿವಾರ್ಯ. ಹಾಗೆಯೇ ನಮಗೇ ಹೆಚ್.ಡಿ ದೇವೆಗೌಡರೇ ಯಾವತ್ತಿದ್ದರೂ ನಾಯಕ. ನೀವು ನೆನಪಿಟ್ಟುಕೊಳ್ಳಿ ಪಕ್ಷದ ಕಾರ್ಯಕರ್ತರ ದುಡಿಮೆಯಿಂದ ನೀವು ಶಾಸಕರಾಗಿರುವುದು. ನಿಮ್ಮ ಅವಧಿ ಮುಗಿಯೋವರೆಗೂ ನೀವು ಪಕ್ಷದ ಪರವಾಗಿ ಇರಿ ಎಂದು ಜಿ.ಟಿ ದೇವೆಗೌಡರಿಗೆ ಸಾರಾ ಮಹೇಶ್ ತಿರುಗೇಟು ಕೊಟ್ಟಿದ್ದಾರೆ.
Advertisement
Advertisement
ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು ಮತದಾನದಿಂದ ವಂಚಿತರಾಗಿದ್ದಾರೆ ನಿಜ. ಆದರೆ ಕೆಲ ವ್ಯಕ್ತಿಗಳಿಂದ ನಮಗೆ ಗೆಲುವು ಕಷ್ಠ ಆಯಿತು ಎಂಬುವುದು ಸುಳ್ಳು. ಜೆಡಿಎಸ್ ಶಕ್ತಿ ಹಳೆ ಮೈಸೂರು ಭಾಗದಲ್ಲಿ ಇನ್ನೂ ಇದೇ. ಮುಂದಿನ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಂದ ದೂರ ಇರಬೇಕೋ ಅಥವಾ ಯಾರ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂಬುವುದು ಹೆಚ್.ಡಿ ದೇವೇಗೌಡ ಮಾಡುತ್ತಾರೆ. ಆದರೆ ಎರಡು ಪಕ್ಷಗಳಿಂದ ದೂರ ಇರಬೇಕು ಎಂಬುವುದು ನನ್ನ ವೈಯುಕ್ತಿಕ ತೀರ್ಮಾನ ಎಂದು ತಿಳಿಸಿದರು. ಇದನ್ನೂ ಓದಿ: ನಾಳೆ ಹೆಚ್‍ಡಿಕೆ ಹುಟ್ಟುಹಬ್ಬ- ಕಾರ್ಯಕರ್ತರಲ್ಲಿ ಮಾಜಿ ಸಿಎಂ ಮನವಿ
Advertisement
Advertisement
ವಿಧಾನ ಪರಿಷತ್‌ನಲ್ಲಿ ಗೆದ್ದ ಅಭ್ಯರ್ಥಿಯು ಜೆಡಿಎಸ್ ವರಿಷ್ಠಿಗೆ ವರದಿ ಕೊಡುತ್ತಾರೆ. ಬಳಿಕ ವರದಿಯ ಅನುಸಾರವಾಗಿ ನಮ್ಮ ಪಕ್ಷದ ಶಾಸಕರಿಂದಲೇ ಆದ ತೊಂದರೆ ಬಗ್ಗೆಯೂ ವಿವರಿಸಿ ಜೆಡಿಎಸ್ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ ಎಂದು ಸಾರಾ ಮಹೇಶ್ ಹೇಳಿದ್ದಾರೆ. ಇದನ್ನೂ ಓದಿ: ಸುಧಾಕರ್ ನಮ್ಮ ಲೀಡರ್ ಅಲ್ಲ, ಮಂಡ್ಯದ ಬಗ್ಗೆ ಅವರಿಗೇನ್ ಮಾಹಿತಿ ಇದೆ?: ನಾರಾಯಣ ಗೌಡ