ಮೈಸೂರು: ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ 6 ಕೋಟಿ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಟ್ಟೆ ಬ್ಯಾಗ್ ಖರೀದಿಯಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ. ಸುಮಾರು 6 ಕೋಟಿ ರೂ. ಅಕ್ರಮ ನಡೆದಿದೆ. ಸುಮಾರು 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಆದರೆ ಇದರ ವಾಸ್ತವ ಬೆಲೆ 1,47,15,000 ಆಗಿದೆ. ಅವರು ಖರೀದಿ ಮಾಡಿರುವುದು 7 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ. ಅವರು ಬ್ಯಾಗ್‍ನಲ್ಲೇ 6 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ:ಸೆ.5ರಂದು ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲಿದೆ ಕೆನಡಾದ ಬರ್ನಾಬಿ ನಗರ
Advertisement
Advertisement
ಈಜುಕೊಳ, ಜಿಮ್, ಕಟ್ಟಡ ನವೀಕರಣದ ಹಣವನ್ನು ಅವರಿಂದಲೇ ವಸೂಲಿ ಮಾಡಿ. ಸರ್ಕಾರದ ತನಿಖಾ ವರದಿಗಳ ಮೂಲಕ ಅವರ ತಪ್ಪು ಸಾಬೀತಾಗಿದೆ. ಅವರ 12 ವರ್ಷದ ಅವಧಿಯನ್ನು ಸೂಕ್ಷ್ಮವಾಗಿ ನಾನು ಗಮನಿಸಿದ್ದೇನೆ. ಅದಕ್ಕೆ ರೋಹಿಣಿ ಅವರು ಮೈಸೂರಿಗೆ ಬಂದಾಗ ವಿರೋಧಿಸಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
8 ಆರೋಪಗಳನ್ನು ಮಾಡಿದ ಸಾ.ರಾ!
ನನ್ನ 8 ಆರೋಪಗಳ ಬಗ್ಗೆ ಅಧಿಕಾರಿಗಳೇ ವರದಿ ಕೊಟ್ಟಿದ್ದಾರೆ. ನಾನು ಸಿಎಂ ಹಾಗೂ ಸಿಎಸ್‍ರನ್ನು ಭೇಟಿ ಮಾಡಿದ್ದೇನೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಮುಂದೆ ದಕ್ಷತೆ ಇಲ್ಲದ ಅಪ್ರಾಮಾಣಿಕ ಅಧಿಕಾರಿ ನೇಮಕ ಮಾಡದಂತೆ ಮನವಿ ಮಾಡಿಕೊಂಡಿದ್ದೇನೆ. ಕಟ್ಟಡ ಕಾಮಗಾರಿಯಲ್ಲಿ ಸರ್ಕಾರಿ ಹಣ ದುರುಪಯೋಗ ಮಾಡಿಕೊಂಡಿರುವುದು. ಪಾರಂಪರಿಕ ಕಟ್ಟಡದ ಆದೇಶವನ್ನು ಗಾಳಿಗೆ ತೂರಿರುವುದು. ಈ ಬಗ್ಗೆ ಅಧಿಕಾರಿಗಳೇ ವರದಿ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ:ಸುಧಾಮೂರ್ತಿ, ನಾರಾಯಣಮೂರ್ತಿಯನ್ನು ಶಾಲೆಯ ಉದ್ಘಾಟಕರಾಗಿ ಕರೆತರಬೇಕು: ಕಾರಜೋಳ
Advertisement
ಇದು ಅಲ್ಲದೇ ಇನ್ನೂ ಮಹಾಮಸ್ತಕಾಭಿಷೇಕದಲ್ಲಿ ಎಷ್ಟು ಅಕ್ರಮ ಆಗಿರಬಹುದು. ರೋಹಿಣಿ ಸಿಂಧೂರಿ ಅವರ ಶಿಷ್ಯೆ ಎಂದು ಮನೀಷ್ ಅವರು ಹೇಳಿದ್ದರು. ಶಿಷ್ಯೆಗೆ ಇದೇ ಏನು ನೀವು ಹೇಳಿ ಕೊಟ್ಟಿರುವುದು? ಎಂದು ಮನೀಷ್ ಮುದ್ಗಲ್ ವಿರುದ್ದವೂ ವಾಗ್ದಾಳಿ ಮಾಡಿದರು.
ಮುಖ್ಯ ಕಾರ್ಯದರ್ಶಿಗಳೇ ಏಕೆ ಸುಮ್ಮನಿದ್ದೀರಾ? ಎಲ್ಲಾ ದಾಖಲೆಗಳನ್ನು ನೀಡಿದರು ಸುಮ್ಮನೆ ಏಕೆ ಇದ್ದೀರಾ? ಕರ್ನಾಟಕ ರಾಜ್ಯದ ಜನರ ತೆರಿಗೆ ಹಣ ಆಂಧ್ರದಲ್ಲಿ ಆಸ್ತಿ ಮಾಡುವವರ ಪಾಲಾಗುತ್ತಿದೆ. ಇದಕ್ಕೆ ಸಿಎಂ ಮನೆಗೆ ಹೋಗಿದ್ದಿರಾ? ಈ ಕುರಿತು ಸಿಎಸ್ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ:ಚಿಂಕೆ ಭೇಟೆಯಾಡಿದ್ದವನ ಮೇಲೆ ಶೂಟೌಟ್
ಈ ಬಗ್ಗೆ ಸಿಎಂ, ಸಿಎಸ್ ಭೇಟಿ ಮಾಡುತ್ತೇನೆ. ಅಮಾನತ್ತಿನಲ್ಲಿ ಇಟ್ಟು ತನಿಖೆ ಮಾಡಬೇಕು. ಇಲ್ಲ ಮುಖ್ಯ ಕಾರ್ಯದರ್ಶಿಗಳ ಕಚೇರಿ ಮುಂದೆ ಧರಣಿ ಮಾಡುತ್ತೇನೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ತಾಯಿ ಹೃದಯ ಬೇಕು
ಕೋವಿಡ್ ಸಂದರ್ಭದಲ್ಲಿ ತಾಯಿ ಹೃದಯ ಅಧಿಕಾರಿಗೆ ಇರಬೇಕಿತ್ತು. ಐಷಾರಾಮಿ ಜೀವನ ಮಾಡೋಕೆ ಸಾರ್ವಜನಿಕರ ಹಣ ಬಳಕೆ ಮಾಡಲಾಗಿದೆ. ಇದನ್ನು ಕೇಳಿದರೆ ನನ್ನ ಮೇಲೆ ಆರೋಪ ಮಾಡುತ್ತಾರೆ. ಗುತ್ತಿಗೆದಾರ ಕೊಡೋದೆಲ್ಲಾ ಅವರಿಗೆ ಕೊಟ್ಟಿದ್ದೇನೆ. ನಮಗೆ ಬಿಲ್ ಮಾಡಿಸಿ ಎಂದು ಗುತ್ತಿಗೆದಾರ ಕೇಳುತ್ತಿದ್ದಾರೆ. ಮೊದಲು ತನಿಖೆ ಆಗಬೇಕು. ಕ್ರಿಮಿನಲ್ ಕೇಸ್ ಬುಕ್ ಮಾಡಿ, ಕೆಲಸದಿಂದ ಅಮಾನತು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಹಿಣಿ ಸಿಂಧೂರಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅವರನ್ನು ಅಮಾನತು ಮಾಡಿ. ಇಲ್ಲ, ನಿಮ್ಮ ಕಚೇರಿ ಮುಂದೆ ಅಮರಾಣಾಂತ ಉಪವಾಸ ಮಾಡುತ್ತೇವೆ. ಒಳ್ಳೆಯ ಅಧಿಕಾರಿಗಳಿಗೆ ಕೈ ಮುಗಿಯುತ್ತೇವೆ. ಈ ರೀತಿಯ ಭ್ರಷ್ಟಾಚಾರ ಮಾಡುವ ಅಧಿಕಾರಿಗೆ ತಕ್ಕ ಶಿಕ್ಷೆಯಾಗಬೇಕು. ಬೇರೆ ಶಾಸಕರು ತಿರುಪತಿ ದೇವರಂತೆ ನಮಗೇಕೆ ಎಂದು ಸುಮ್ಮನಿದ್ದಾರೆ. ನಾನು ಶ್ರವಣ ಬೆಳಗೊಳದ ಗೊಮ್ಮಟೇಶ್ವರ ಇದ್ದಂತೆ ಎಂದು ಹೇಳಿದ್ದಾರೆ.