ಮಂಡ್ಯ: ಕ್ಷೇತ್ರದಲ್ಲಿ ಚುನವಣಾ ಬಹಿಷ್ಕಾರ ಮಾಡಿರುವ ಗ್ರಾಮಗಳು ಕಾಂಗ್ರೆಸ್‍ಗೆ ಮತದಾನ ಮಾಡುವ ಗ್ರಾಮಗಳಾಗಿದ್ದು, ಅವರು ಕೇಳಿದ ಸಾಕಷ್ಟು ಮೂಲಭೂತ ಸೌಲಭ್ಯಗಳನ್ನು ನೀಡಿದ್ದೇನೆ. ಇನ್ನು ಹೆಚ್ಚಿನ ಸೌಲಭ್ಯ ಬೇಕಾದರೆ ಕಾಂಗ್ರೆಸ್ ನಾಯಕರು ಹೋಗಿ ಚರ್ಚೆ ಮಾಡುತ್ತಾರೆ ಎಂದು ಸಚಿವ ಸಾರಾ ಮಹೇಶ್ ಹೇಳಿದ್ದಾರೆ.
Advertisement
ಜಿಲ್ಲೆಯ ಅರಂಬಳ್ಳಿ ಗ್ರಾಮಸ್ಥರು ರಸ್ತೆ ಕೇಳಿದ್ದರು. ಅವರ ಮನವಿ ಮೇರೆಗೆ ಕ್ರಮಕೈಗೊಂಡಿದ್ದೇನೆ. ಆದರೆ ಚುನಾವಣಾ ನೀತಿ ಸಂಹಿತೆಯಿಂದ ಸದ್ಯ ಪ್ರಕ್ರಿಯೆ ತಡವಾಗಿದೆ. ಅದ್ದರಿಂದ ಗ್ರಾಮಸ್ಥರ ಮನವೊಲಿಕೆ ಮಾಡುತ್ತೇನೆ. ಆದರೆ ಬಾಚಹಳ್ಳಿ, ದೊಡ್ಡ ಕೊಪ್ಪಲು ಗ್ರಾಮದಲ್ಲಿ ರಾಜಕೀಯ ಪ್ರೇರಿತವಾಗಿ ಬಹಿಷ್ಕಾರ ಮಾಡಿದ್ದಾರೆ. ಎರಡು ಗ್ರಾಮಗಳಿಗೆ ಈಗಾಗಲೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲೂ 2 ಗ್ರಾಮಗಳಲ್ಲಿ ಶೇ.99ರಷ್ಟು ಜನ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಅವರಿಗೆ ಹೆಚ್ಚಿನ ಸೌಲಭ್ಯಗಳು ಬೇಕಾದಲ್ಲಿ ಅವರ ಮುಖಂಡರು ಹೋಗಿ ಚರ್ಚೆ ಮಾಡುತ್ತಾರೆ ಎಂದರು.
Advertisement
ರಾಜಕೀಯ ಪಕ್ಷಗಳ, ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಚುನಾವಣೆ ಘೋಷಣೆ ಮಾಡಲಾಗಿದ್ದು, ಅದ್ದರಿಂದ ಮತದಾನ ಪ್ರಕ್ರಿಯೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ ಮಾಡಲಾಗುತ್ತದೆ. ಈ ಬಾರಿಯೂ ಶೇ.50 ರಷ್ಟು ಮತದಾನ ಆಗುವ ಸಾಧ್ಯತೆ ಇದೆ ಎಂದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv