ಬಾಲಿವುಡ್ ನಟಿಯರು ಮಾತ್ರ ಬಿಕಿನಿಯಲ್ಲಿ ಕಾಣಿಸಿಕೊಳ್ಳಬೇಕೆ? ನಾವೇನೂ ಕಡಿಮೆ ಇಲ್ಲ ಅನ್ನುವಂತಿದೆ ಕನ್ನಡತಿ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಫೋಟೋ. ಆಕಾಶ ನೀಲಿ ಬಣ್ಣದ ಬಿಕಿನಿಯಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿರುವ ಸಾರಾ ಅಣ್ಣಯ್ಯ, ಪಡ್ಡೆಗಳ ನಿದ್ದೆಗೆಡಿಸಿದ್ದಾರೆ. ಬಿಕಿನಿಯಲ್ಲಿ ತಮ್ಮ ಸೌಂದರ್ಯವನ್ನು ಬಿಚ್ಚಿಟ್ಟಿದ್ದಾರೆ.
ಕನ್ನಡತಿ ಸೀರಿಯಲ್ ನೋಡುವ ಪ್ರೇಕ್ಷಕರಿಗೆ ಸಾರಾ ಅಣ್ಣಯ್ಯ ಚಿರಪರಿಚಿತರು. ಈ ಧಾರಾವಾಹಿಯಲ್ಲಿ ಇಂಡಿಪೆಂಡೆಂಟ್ ವುಮನ್ ಪಾತ್ರದಲ್ಲಿ ಬೋಲ್ಡ್ ಆಗಿಯೇ ಕಾಣಿಸಿಕೊಂಡಿರುವ ಇವರು, ಮೂಲತಃ ಮಾಡೆಲ್. ಮಾಡೆಲಿಂಗ್ ಕ್ಷೇತ್ರದಿಂದ ಬಂದಿರುವ ಸಾರಾ ಅಣ್ಣಯ್ಯ, ಒಂದು ರೀತಿಯಲ್ಲಿ ಖಡಕ್ ಪಾತ್ರದ ಮೂಲಕವೇ ಕನ್ನಡ ಕಿರುತೆರೆ ಜಗತ್ತಿಗೆ ಪರಿಚಯವಾದವರು. ಸಂಪ್ರದಾಯಸ್ಥ ಕುಟುಂಬದ ಮಹಿಳೆಯರು, ಈ ನಟಿಯನ್ನು ಬೈದುಕೊಳ್ಳುತ್ತಲೇ ಇಷ್ಟ ಪಡುವುದಕ್ಕೆ ಕಾರಣ, ಅವರ ನಟನೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ
ಈ ಪಾತ್ರದ ಮೂಲಕ ಮಾಡರ್ನ್ ಜಗತ್ತಿನ ಹುಡುಗಿಯರನ್ನು ಪರಿಚಯಿಸುತ್ತಿರುವ ನಿರ್ದೇಶಕರು, ಸಾರಾ ಅಣ್ಣಯ್ಯ ಮೂಲಕ ಹಲವು ವಿಚಾರಗಳನ್ನು ಜಗತ್ತಿಗೆ ತೋರಿಸುತ್ತಿದ್ದಾರೆ. ಅಂತೆಯೇ ಸಾರಾ ಕೂಡ ವೈಯಕ್ತಿಕ ಜೀವನದಲ್ಲಿ ಅಷ್ಟೇ ಬೋಲ್ಡ್ ಆಗಿದ್ದಾರೆ ಎನ್ನುವುದಕ್ಕೆ ಅವರ ಬಿಕಿನಿ ಫೋಟೋಗಳೇ ಸಾಕ್ಷಿ. ಬಾಲಿವುಡ್ ನಟಿಯರಷ್ಟೇ ಅಲ್ಲ, ನಾವೂ ಕೂಡ ಇಂತಹ ಬಿಕಿನಿ ಧರಿಸಬಲ್ಲೆವು ಎಂದು ಅವರು ಸಾರಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿವೆ.