ಬಾಲಿವುಡ್ ಚೆಲುವೆ, ನಟ ಸೈಫ್ (Saif Ali Khan) ಪುತ್ರಿ ಸಾರಾ ಅಲಿಖಾನ್ (Sara Ali Khan) ಡಬಲ್ ಡೆಕ್ಕರ್ ಬಸ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಆ ಹಾಟ್ ಫೋಟೋಗಳನ್ನು(Photo Shoot) ಹಂಚಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆಗೆ ಕೊಳ್ಳಿ ಇಟ್ಟಿದ್ದಾರೆ. ಕೆಂಪು ಬಸ್ಸು ಹಳದಿ ಬಣ್ಣದ ಕಾಸ್ಟ್ಯೂಮ್ ಒಂದು ರೀತಿಯಲ್ಲಿ ಸಖತ್ ಕಾಂಬಿನೇಷನ್ ಆಗಿದೆ. ಕೇವಲ ಫೋಟೋ ಶೂಟ್ ಮಾತ್ರವಲ್ಲ, ಎಲ್ಲ ವಿಚಾರದಲ್ಲೂ ಸಾರಾ ಬೋಲ್ಡ್ ಆಗಿದ್ದಾರೆ.
Advertisement
ಈ ಹಿಂದೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಸಾರಾ ಅಲಿಖಾನ್ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದರು. ತಮಗೆ ಅವಕಾಶ ಸಿಕ್ಕರೆ ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡುವುದಾಗಿ ಹೇಳಿಕೊಂಡಿದ್ದರು. ಅಂತಹ ಹುಡುಗನ ಜೊತೆಯೇ ಡೇಟಿಂಗ್ ಗೆ ಹೋಗಲು ಇಷ್ಟಪಡುತ್ತೇನೆ ಎಂದೂ ಶೋನಲ್ಲಿ ಹೇಳಿದ್ದರು. ವಿಜಯ್ ಈಗಾಗಲೇ ಬಾಲಿವುಡ್ ಸಿನಿಮಾದಲ್ಲೂ ಮಿಂಚುತ್ತಿರುವುದರಿಂದ, ಇದು ಸಾಧ್ಯವೂ ಆಗಬಹುದು ಎನ್ನುವ ಗಾಸಿಪ್ ಹರಡಿತ್ತು.
Advertisement
Advertisement
ತಂದೆಯ ಕಾರಣದಿಂದ ತನಗೆ ಅವಕಾಶ ಸಿಗುವುದು ಬೇಡ, ನನ್ನ ಟ್ಯಾಲೆಂಟ್ ಮೇಲೆ ಸಿಗಲಿ ಎಂದೂ ಸಾರಾ ಹೇಳಿಕೊಂಡಿದ್ದರು. ಪ್ರತಿಭೆಯ ಕಾರಣದಿಂದಾಗಿ ಅಕ್ಷಯ್ ಕುಮಾರ್ ಹಾಗೂ ಕಾಲಿವುಡ್ ನಟ ಧನುಷ್ ಜೊತೆ ಅತ್ರಂಗಿ ರೇ ಸಿನಿಮಾದಲ್ಲಿ ನಟಿಸಿದರು. ರಣ್ವೀರ್ ಸಿಂಗ್ ಜೊತೆ ಸಿಂಬಾ, ನಟ ಕಾರ್ತಿಕ್ ಲವ್ ಆಜ್ ಕಲ್-2, ಸುಶಾಂತ್ ಸಿಂಗ್ ಜೊತೆ ಕೇದರನಾಥ್ ಸಿನಿಮಾದಲ್ಲೂ ನಟಿಸಿದ್ದಾರೆ.
Advertisement
ತಂದೆಯ ವಿಚಾರದಲ್ಲೂ ಅಷ್ಟೇ ಖುಲ್ಲಂ ಖುಲ್ಲಾ ಆಗಿ ಸಾರಾ ಮಾತನಾಡಿದ್ದರು. ‘ನನ್ನ ತಂದೆ ಎರಡನೇ ಮದುವೆ ಆಗುವ ವಿಷಯ ನನಗೆ ತಿಳಿದಿತ್ತು. ನಾನು ಕರೀನಾ ಕಪೂರ್ ಅವರ ಅಭಿಮಾನಿ. ಅವರು ನನ್ನ ಜೀವನದಲ್ಲಿ ಇರಬೇಕೆಂದು ಬಯಸಿದ್ದೆ. ಆದರೆ ಅವರು ಈಗ ಮಲತಾಯಿ ಆಗಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ’ ಎಂದು ಸಾರಾ ಅಲಿ ಖಾನ್ ಉತ್ತರಿಸಿದ್ದರು. ನನ್ನ ತಂದೆ ಕರೀನಾ ಕಪೂರ್ ಅವರನ್ನು ಮದುವೆ ಆಗುತ್ತಿದ್ದೀನಿ ಎಂದು ಹೇಳಿದ್ದಾಗ ನಾನು ಯಾವ ಉಡುಪು ಧರಿಸಬೇಕು ಎಂದು ನನ್ನ ತಾಯಿಯ ಬಳಿ ಕೇಳಿದೆ. ಆಗ ನನ್ನ ತಾಯಿ ನೀನು ಯಾವ ಉಡುಪನ್ನು ಧರಿಸುತ್ತೀಯಾ? ಎಂದು ಕೇಳಿದ್ದರು. ನನ್ನ ತಾಯಿ ಕೂಡ ನನ್ನ ತಂದೆಯ ಎರಡನೇ ಮದುವೆಗೆ ಒಪ್ಪಿಗೆ ನೀಡಿದ್ದರು ಎಂದು ಸಾರಾ ತಿಳಿಸಿದ್ದರು.
ಸಾರಾ ಡೇಟಿಂಗ್ ವಿಚಾರದಲ್ಲಿ ಕರಣ್ ಅಚ್ಚರಿ ಎನ್ನುವಂತೆ ಮಾತನಾಡಿದ್ದರು. ಸಾರಾ ಹಾಗೂ ಜಾಹ್ನವಿಗೆ ನೀವಿಬ್ಬರೂ ಒಂದೇ ಕುಟುಂಬದ ಹುಡುಗರ ಜೊತೆ ಡೇಟಿಂಗ್ ಮಾಡುತ್ತಿದ್ದೀರಿ ಅಲ್ಲವಾ ಎಂದು ಕರಣ್ ಕೇಳಿದ್ದರು. ಈ ಪ್ರಶ್ನೆಯನ್ನು ಕನಸು ಮನಸಲ್ಲೂ ಎಣಿಸಿರದ ಸಾರಾ ಮತ್ತು ಜಾಹ್ನವಿ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದರು. ಕೊನೆಗೆ ಆ ಹುಡುಗರು ಯಾರು ಎನ್ನುವುದನ್ನು ಕರಣ್ ಅವರೇ ಬಾಯ್ಬಿಟ್ಟರು. ಮಹಾರಾಷ್ಟ್ರದ ಮಾಜಿ ಸಿಎಂ. ಶಿಂಧೆ ಅವರ ಮಕ್ಕಳಾದ ವೀರ ಪಹಾರಿ, ಶಿಖರ್ ಪಹಾರಿ ಹೆಸರು ಹೇಳುವ ಮೂಲಕ ಮತ್ತೆ ಅಚ್ಚರಿಗೆ ದೂಡಿದ್ದರು ಕರಣ್.