ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ತನ್ನ ತಮ್ಮನ ಜೊತೆಗಿರುವ ಬಿಕಿನಿ ಫೋಟೋ ಹಂಚಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಗುರುವಾರ ಸಾರಾ ಅಲಿ ಖಾನ್ ಇನ್‍ಸ್ಟಾದಲ್ಲಿ ತನ್ನ ತಮ್ಮ ಇಬ್ರಾಹಿಂ ಅಲಿ ಖಾನ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಈ ಹಿಂದೆ ಸಾರಾ ಮಾಲ್ಡೀವ್ಸ್ ಗೆ ಹೋಗಿದ್ದಾಗ ಬಿಕಿನಿ ಧರಿಸಿ ಇಬ್ರಾಹಿಂ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದೇ ಫೋಟೋವನ್ನು ಸಾರಾ ಗುರುವಾರ ಇನ್‍ಸ್ಟಾದಲ್ಲಿ ಹಾಕಿ, ತನ್ನ ತಮ್ಮನಿಗೆ ಹುಟ್ಟುಹಬ್ಬದ ಶುಭ ಕೋರಿದ್ದರು.
Advertisement
Advertisement
ಸಾರಾ ಇನ್‍ಸ್ಟಾದಲ್ಲಿ ಬಿಕಿನಿ ಫೋಟೋ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಅವರನ್ನು ಟ್ರೋಲ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡರು. ಕೆಲವರು ತಮ್ಮನ ಜೊತೆ ಬಿಕಿನಿ ಧರಿಸಿ ನಿಲ್ಲಲ್ಲು ನಾಚಿಕೆ ಆಗಲ್ವಾ ಎಂದು ಕಮೆಂಟ್ ಮಾಡಿದ್ದರು. ಮತ್ತೆ ಕೆಲವರು, ಧರ್ಮದ ಬಗ್ಗೆ ಮಾತನಾಡಿ ಸಾರಾ ಅವರಿಗೆ ಕ್ಲಾಸ್ ತೆಗೆದುಕೊಂಡರು.
Advertisement
Advertisement
ಮತ್ತೆ ಕೆಲವರು, ‘ಲವ್ ಆಜ್ ಕಲ್’ ಚಿತ್ರದಲ್ಲಿ ನಿಮ್ಮ ನಟನೆ ನೋಡಲು ಆಗುತ್ತಿರಲಿಲ್ಲ. ಇದೀಗ ಈ ಫೋಟೋ ನೋಡಲು ಆಗುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ‘ನಿಮ್ಮ ತಮ್ಮನ ಮುಂದೆ ನಿಮಗೆ ಹೇಗೆ ಬಿಕಿನಿ ಧರಿಸಲು ಸಾಧ್ಯವಾಗುತ್ತೆ ಎಂದು ಪ್ರಶ್ನಿಸಿದ್ದಾರೆ.
ಸದ್ಯ ಸಾರಾ ತಮ್ಮ ಮುಂಬರುವ ‘ಅತರಂಗಿ ರೇ’ ಸಿನಿಮಾದ ಶೂಟಿಂಗ್‍ಗಾಗಿ ಬನಾರಸ್‍ನಲ್ಲಿ ಇದ್ದಾರೆ. ಈ ಚಿತ್ರವನ್ನು ನಿರ್ದೇಶಕ ಆನಂದ್ ಎಲ್ ರಾಯ್ ನಿರ್ದೇಶನ ಮಾಡುತ್ತಿದ್ದು, ಸಾರಾ ಜೊತೆ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹಾಗೂ ತಮಿಳು ನಟ ಧನುಶ್ ನಟಿಸುತ್ತಿದ್ದಾರೆ.