ಜೈಪುರ: ಬಾಲಿವುಡ್ ನಟ ಸೈಫ್ ಅಲಿಖಾನ್ ಪುತ್ರಿ ನಟಿ ಸಾರಾ ಅಲಿ ಖಾನ್ ರಾಜಸ್ಥಾನದ ಉದಯಪುರಕ್ಕೆ ಪ್ರವಾಸ ಹೋಗಿದ್ದು, ಈ ವೇಳೆ ಕ್ಲಿಕ್ಕಿಸಿಕೊಂಡ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬಾಲಿವುಡ್‍ನ ಯುವ ನಟಿಯರಲ್ಲಿ ಸಾರಾ ಅಲಿಖಾನ್ ಕೂಡ ಒಬ್ಬರಾಗಿದ್ದು, ಸದ್ಯ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇಷ್ಟು ದಿನ ಮಾಲ್ಡೀವ್ಸ್ ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಾರಾ ಇದೀಗ ರಾಜಸ್ಥಾನದ ಉದಯಪುರಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಪ್ರಕೃತಿ ಸೌಂದರ್ಯದ ಮಧ್ಯೆ ನೆಮ್ಮದಿಯಿಂದ ಕಾಲ ಕಳೆಯುತ್ತಿರುವ ಸಾರಾ ಅಲಿ ಖಾನ್ ಕೆಲವು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸಾರಾ ವಿವಿಧ ದೇವಾಲಯಗಳಿಗೆ ಭೇಟಿ ನೀಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!
ಕೆಲವು ದಿನಗಳ ಹಿಂದೆಯಷ್ಟೇ ಕಾಶ್ಮೀರಕ್ಕೆ ಭೇಟಿ ನೀಡಿದಾಗ ಭಾರತೀಯ ಸೈನಿಕರನ್ನು ಭೇಟಿಯಾಗಿದ್ದ ಸಾರಾ ಅಲಿ ಖಾನ್ ಇದೀಗ ಉದಯಪುರದಲ್ಲಿರುವ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ ಮತ್ತು ಸರೋವರವೊಂದರ ಬಳಿ ಕುಳಿತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳನು ಸಾರಾ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ – ಸುಳ್ಯ ನ್ಯಾಯಾಲಯಕ್ಕೆ ಇಂದು ಡಿಕೆಶಿ ಹಾಜರು
ಇತ್ತೀಚೆಗಷ್ಟೇ ಸಾರಾ ಅಲಿ ಖಾನ್ ಮಾಲ್ಡೀವ್ಸ್ ಭೇಟಿ ನೀಡಿದ್ದ ಹಳೆಯ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಸಾರಾ ನೀಲಿ ಬಣ್ಣದ ಸ್ವಿಮ್ಮಿಂಗ್ ಡ್ರೆಸ್ ತೊಟ್ಟು ತಂಪಾದ ಗಾಳಿ ಸ್ವೀಕರಿಸುತ್ತಿರುವುದನ್ನು ಕಾಣಬಹುದಾಗಿದೆ.
View this post on Instagram
ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಕಾಲಿವುಡ್ ನಟ ಧನುಷ್ ಜೊತೆ ಅತ್ರಂಗಿ ರೇ ಎಂಬ ಸಿನಿಮಾದಲ್ಲಿ ಸಾರಾ ಅಲಿಖಾನ್ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಈ ಸಿನಿಮಾಕ್ಕಾಗಿ ಡಬ್ ಮಾಡಿದ್ದಾರೆ. ಈ ಮುನ್ನ ರಣ್‍ವೀರ್ ಸಿಂಗ್ ಜೊತೆ ಸಿಂಬಾ, ನಟ ಕಾರ್ತಿಕ್ ಲವ್ ಆಜ್ ಕಲ್-2, ದಿವಗಂತ ನಟ ಸುಸಾಂತ್ ಸಿಂಗ್ ಜೊತೆ ಕೇದರನಾಥ್ ಸಿನಿಮಾದಲ್ಲಿ ಅಭಿನಯಿಸಿದ್ದರು.