ಬಾಲಿವುಡ್‌ನ (Bollywood) ಸ್ಟಾರ್ ಕಿಡ್ ಸಾರಾ ಅಲಿ ಖಾನ್ (Sara Ali Khan) ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಸಕ್ಸಸ್ ಸಿಕ್ಕಿಲ್ಲ. ಸೋಲಿನ ಸುಳಿಯಲ್ಲಿರುವ ನಟಿ ಸಾರಾ ಇದೀಗ ಅಷ್ಟಾಗಿ ಸಿನಿಮಾವೇನು ಮಾಡುತ್ತಿಲ್ಲ. ಈ ಹಿಂದಿನ ಅಸಲಿ ಕಾರಣ ಇದೀಗ ಹೊರಬಿದ್ದಿದೆ. ಬ್ರೇಕಪ್ ನೋವು ಎದುರಿಸಿರೋದಾಗಿ ಸಾರಾ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಪಿಂಕ್ ಬಣ್ಣದ ಮಾಡರ್ನ್ ಡ್ರೆಸ್‌ನಲ್ಲಿ ಮಿರ ಮಿರ ಮಿಂಚಿದ ಕಿಯಾರಾ
`ಕೇದರನಾಥ್’ (Kedaranath) ಚಿತ್ರದ ಮೂಲಕ ಸುಶಾಂತ್ ಸಿಂಗ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ಸಾರಾ ಅಲಿ ಖಾನ್ ಅವರು ಸಿಂಬಾ, ಲವ್ ಆಜ್ ಕಲ್, `ಕೂಲಿ ನಂ 1′ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಯಾವೊಂದು ಸಿನಿಮಾ ಕೂಡ ಅವರ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಡಲಿಲ್ಲ. ಸಿನಿಮಾಗಳಲ್ಲಿ ಆಕ್ಟೀವ್ ಇಲ್ಲದೇ ಇರುವ ಹಿಂದಿನ ತಮ್ಮ ಬ್ರೇಕಪ್ ಬಗ್ಗೆ ನಟಿ ಸಾರಾ ಬಾಯ್ಬಿಟ್ಟಿದ್ದಾರೆ.
2020 ನನ್ನ ಬದುಕಿನ ಕೆಟ್ಟ ಸಮಯ ಎಂದಿದ್ದಾರೆ. ಆ ವರ್ಷ ಬ್ರೇಕಪ್‌ನಿಂದ ಶುರುವಾಯ್ತು ಎಂದಿದ್ದಾರೆ. ಕೆಟ್ಟ ಟ್ರೋಲ್‌ಗಳಿಂದ ಸಮಸ್ಯೆ ಎದುರಿಸಬೇಕಾಯಿತು. ಆದರೂ ಆಕೆಯ ಪರ್ಸನಲ್ ಲೈಫ್ ಸಮಸ್ಯೆಗಳೇ ಇದ್ದ ಕಾರಣ ಆ ಟೀಕೆಗಳು ಅಷ್ಟು ಬಾಧಿಸಿಲ್ಲ ಎಂದಿದ್ದಾರೆ. ಅಂದು ಯಾರ ಜೊತೆ ಸಾರಾ ಡೇಟ್ ಮಾಡ್ತಿದ್ದರು ಎಂದು ನಟಿ ರಿವೀಲ್ ಮಾಡಿಲ್ಲ.
ಇನ್ನೂ ಕಾರ್ತಿಕ್ ಆರ್ಯನ್ ಜೊತೆ ಸಾರಾ ಡೇಟ್ ಮಾಡುತ್ತಿದ್ದರು ಎನ್ನಲಾಗಿತ್ತು. 2020ರಲ್ಲಿ `ಲವ್ ಆಜ್ ಕಲ್’ ಸಿನಿಮಾ ರಿಲೀಸ್ ಮುಂಚೆಯೇ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂದು ಹೇಳಲಾಗುತ್ತಿದೆ.