ಕನ್ನಡದ ‘ಕಾಂತಾರ’ (Kantara) ಬ್ಯೂಟಿ ಸಪ್ತಮಿ ಗೌಡ (Saptami Gowda) ಅವರು ಜೂನ್ 8ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಭಿಮಾನಿಗಳು, ಆಪ್ತರ ಹಾರೈಕೆ ನೋಡಿ ನಟಿ ಖುಷಿಪಟ್ಟರು. ಈ ಬೆನ್ನಲ್ಲೇ ಒಂದು ಬೇಸರದ ಸುದ್ದಿ ಹೊರಬಿದ್ದಿದೆ. ಸಪ್ತಮಿ ನಟನೆಯ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.
‘ಕಾಂತಾರ’ ಸಿನಿಮಾದ ನಟನೆ ನೋಡಿ ಬಾಲಿವುಡ್ ಚಿತ್ರಕ್ಕೆ ವಿವೇಕ್ ಅಗ್ನಿಹೋತ್ರಿ ಬಂಪರ್ ಆಫರ್ ಕೊಟ್ರು. ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ‘ದಿ ವ್ಯಾಕ್ಸಿನ್ ವಾರ್’ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಕನ್ನಡದ ಸಿನಿಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಿದೆ. ಈ ವರ್ಷ ಸ್ವಾತಂತ್ರೋತ್ಸವದ ದಿನದಂದು ಸಿನಿಮಾ ರಿಲೀಸ್ ಮಾಡುವ ಬಗ್ಗೆ ತಂಡ ಯೋಚಿಸಿತ್ತು. ಆದರೆ ಈಗ ಕಾರಣಾಂತರಗಳಿಂದ ಸಿನಿಮಾ ಮುಂದಕ್ಕೆ ಹೋಗಿದೆ.
‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗೆ ಈಗ ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ. ಕೆಲವು ದಿನಗಳ ಶೂಟಿಂಗ್ ಬಾಕಿ ಇದೆ. ಭಾರತದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಅಮೆರಿಕದಲ್ಲಿ ಪ್ರೀಮಿಯರ್ ಮಾಡಲು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಯೋಚಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಇದನ್ನೂ ಓದಿ:ಯೋಗಾಭ್ಯಾಸದ ವೀಡಿಯೋದಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಾಗಿಣಿ
ಸಪ್ತಮಿ ಗೌಡ ಅವರ ಕೈಯಲ್ಲಿ ದಿ ವ್ಯಾಕ್ಸಿನ್ ವಾರ್, ಕಾಳಿ, ಯುವ ಸಿನಿಮಾಗಳಿವೆ. ಮತ್ತೊಂದಿಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಒಟ್ನಲ್ಲಿ ‘ಕಾಂತಾರ’ ಚಿತ್ರದ ಬಳಿಕ ಲೀಲಾ ಬಿಗ್ ಆಫರ್ಸ್‌ಗಳನ್ನೇ ಚಾಚಿಕೊಳ್ತಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರು ನೈಜ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ. ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯಾಕಾಂಡದ ವಿಷಯವನ್ನು ಆಧರಿಸಿ ದಿ ಕಾಶ್ಮೀರ್ ಫೈಲ್ಸ್ ಮೂಡಿಬಂದಿತ್ತು. ಆ ಸಿನಿಮಾ ಭಾರಿ ಚರ್ಚೆ ಹುಟ್ಟುಹಾಕಿತ್ತು. ಈಗ ಅವರು ಕೊರೊನಾ ವ್ಯಾಕ್ಸಿನ್ ಕುರಿತು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಮಾಡುತ್ತಿದ್ದಾರೆ.