ಒಂದಿಲ್ಲೊಂದು ಸಿನಿಮಾಗಳಲ್ಲಿ ಬ್ಯೂಸಿ ಆಗಿರುವ ‘ಕಾಂತಾರ’ (Kantara) ಚಿತ್ರದ ನಟಿ ಸಪ್ತಮಿ ಗೌಡ (Sapthami Gowda) ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೆಟ್ ಮಾಡುತ್ತಲೇ ಇದ್ದಾರೆ. ಇದೀಗ ರೆಡ್ & ವೈಟ್ ಕಾಂಬಿನೇಷನ್ ಡ್ರೆಸ್ನಲ್ಲಿ ಮಾಡಿಸಿರೋ ಫೋಟೋ ಶೂಟ್ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.
ಕೆಂಪು ಬಣ್ಣದ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಸ್ಲೀವ್ಲೆಸ್ ಟಾಪ್ ಧರಿಸಿ ವಿವಿಧ ಭಂಗಿಯಲ್ಲಿ ನಟಿ ಹಾಟ್ & ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಸಪ್ತಮಿಯ ಮುದ್ದಾದ ನಗುವಿಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ನಟಿಯ ಫೋಟೋಗೆ ಏಂಜಲ್, ಸಿಂಗಾರ ಸಿರಿ ಹೀಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇನ್ನೆಷ್ಟು ಅಂತ ನಮ್ಮ ಎದೆಗೆ ಬೆಂಕಿ ಹಚ್ತೀರಿ ಅಂತಲೂ ಕೇಳಿದ್ದಾರೆ. ಇದನ್ನೂ ಓದಿ: ಅಟ್ಲಿ-ಅಲ್ಲು ಸಿನಿಮಾ ವಿಎಫ್ಎಕ್ಸ್ಗೆ ಬರೋಬ್ಬರಿ 350 ಕೋಟಿ ಖರ್ಚು !
2020ರಲ್ಲಿ ಡಾಲಿ ಧನಂಜಯ ನಟನೆಯ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಸಪ್ತಮಿ ಹೀರೋಯಿನ್ ಆಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಕುರಿತು ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದನ್ನೂ ಓದಿ: ರಾಜಾ ಶಿವಾಜಿಗೆ ವಿದ್ಯಾ ಬಾಲನ್ ಎಂಟ್ರಿ: ದೊಡ್ಡದಾಯ್ತು ಪಟ್ಟಿ!
ಆ ನಂತರ 2022ರಲ್ಲಿ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾಗೆ ಸಪ್ತಮಿ ಗೌಡ ನಾಯಕಿಯಾಗಿ ಗಮನ ಸೆಳೆದರು. ಈ ಸಿನಿಮಾದ ಭರ್ಜರಿ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಸಪ್ತಮಿ ಗುರುತಿಸಿಕೊಂಡರು. ಬಳಿಕ ಬಾಲಿವುಡ್ನ ‘ದಿ ವ್ಯಾಕ್ಸಿನ್ ವಾರ್’ ಚಿತ್ರದಲ್ಲಿ ಸಪ್ತಮಿ ಪ್ರಮುಖ ಪಾತ್ರದಲ್ಲಿ ನಟಿಸಿದರು.
ಸದ್ಯ ಬಾಲಿವುಡ್ ಬಳಿಕ ಟಾಲಿವುಡ್ನತ್ತ ಮುಖ ಮಾಡಿರುವ ಸಪ್ತಮಿ ತೆಲುಗು ನಟ ನಿತಿನ್ಗೆ ನಾಯಕಿಯಾಗಿ ನಟಿಸಿದ್ದಾರೆ. ಮೂಡ್ ಆಫ್ ತಮ್ಮುಡು’ (Mood Of Thammudu) ಚಿತ್ರದ ಮೂಲಕ ತೆಲುಗಿನಲ್ಲಿ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ರತ್ನ ಪಾತ್ರದ ಮೂಲಕ ಹಳ್ಳಿ ಹುಡುಗಿ ಗೆಟಪ್ನಲ್ಲಿ ಬರುತ್ತಿದ್ದಾರೆ. ಅವರ ಪಾತ್ರದ ಟೀಸರ್ ರಿಲೀಸ್ ಆಗಿದೆ. ಇದನ್ನೂ ಓದಿ: ಸ್ಕಿನ್ ಕಲರ್ ಬಟ್ಟೆಯಲ್ಲಿ ಪಡ್ಡೆಗಳ ನಿದ್ದೆ ಕೆಡಿಸಿದ ಸಮಂತಾ
ಈ ನಡುವೆ ಅಭಿನಯ ಚತುರ ಸತೀಶ್ ನೀನಾಸಂ (Satish Ninasam) ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ʻದಿ ರೈಸ್ ಆಫ್ ಅಶೋಕʼ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಇದನ್ನೂ ಓದಿ: ಕಿಲ್ಲರ್ ಸಿನಿಮಾ ಘೋಷಿಸಿ, ಗುಡ್ ನ್ಯೂಸ್ ಕೊಟ್ಟ ತಮಿಳಿನ ಡೈರೆಕ್ಟರ್ ಕಂ ಆಕ್ಟರ್