– ಕೋವಿಡ್ ಕಾಲದಲ್ಲಿ ಮಿಡಿದವರಿಗೆ ಅರ್ಪಣೆಯಾಗಲಿದ ಸಪ್ತಸ್ವರ
– ಬೆಳಗ್ಗೆ 10:30ಕ್ಕೆ ನೇರಪ್ರಸಾರ
ಬೆಂಗಳೂರು: ಕನ್ನಡಿಗರ ನೆಚ್ಚಿನ ಮ್ಯೂಸಿಕ್ ಚಾನೆಲ್, ನಿಮ್ಮ ಪಬ್ಲಿಕ್ ಮ್ಯೂಸಿಕ್ ಇಂದಿಗೆ ಏಳು ವಸಂತಗಳನ್ನು ಪೂರೈಸಲಿದೆ. ಕಳೆದ ಎರಡು ವರ್ಷಗಳ ಕೊರೊನಾ ಸಂಕಷ್ಟದ ಸಮಯದಲ್ಲಿ ಮಿಡಿದವರಿಗೆ ನಾವು 7ನೇ ವರ್ಷದ ಸಪ್ತಸ್ವರ ಕಾರ್ಯಕ್ರಮವನ್ನು ಅರ್ಪಣೆ ಮಾಡುತ್ತಿದ್ದೇವೆ.
ಸಂಗೀತದ ತೇರನ್ನು ಸ.ರಿ.ಗ.ಮ.ಪ.ದ.ನಿ, ಏಳು ಸ್ವರಗಳು ಎಳೆದೋಯ್ಯತ್ತವೆ. ಈ ಏಳು ಸ್ವರಗಳಂತೆ, ಕನ್ನಡಿಗರ ಪ್ರಪ್ರಥಮ ಮ್ಯೂಸಿಕ್ ಚಾನೆಲ್, ಪಬ್ಲಿಕ್ ಮ್ಯೂಸಿಕ್ ಏಳು ಹೆಜ್ಜೆಗಳನ್ನು ಪೂರೈಸಿದೆ.
Advertisement
ಕಳೆದೆರೆಡು ವರ್ಷಗಳಿಂದ, ಕೊರೊನಾ ವೈರಸ್‍ನಿಂದ, ಹಸಿವಿನಿಂದ ಪರದಾಡಿದ ಒಡಲುಳೆಷ್ಟೋ? ಹನಿ ಆಕ್ಸಿಜನ್‍ಗಾಗಿ ಅಂಗಲಾಚಿದ ಸ್ವರಗಳೆಷ್ಟೋ? ಕೊನೆಗೆ ಮಣ್ಣು ಸೇರಲು ಜಾಗ ತಡಕಿದ ಹೃದಯಗಳೆಷ್ಟೋ? 2ವರ್ಷಗಳಲ್ಲಿ ಅತೀ ಹೆಚ್ಚು ಕಿವಿ ಕೇಳಿದ ಸ್ವರ, ಸಂಕಟ. ಈ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ನಾವಿದ್ದೇವೆ ಎಂದು ಸಹಾಯಾಸ್ತ ಚಾಚಿದವರಿಗೆ 7ನೇ ವರ್ಷದ ಸಪ್ತಸ್ವರ ಕಾರ್ಯಕ್ರಮವನ್ನು ಅರ್ಪಣೆ ಮಾಡುತ್ತಿದ್ದೇವೆ.
Advertisement
ಸಂಗೀತಕ್ಕೆ ಹೇಗೆ ಏಳು ಸ್ವರ ಮುಖ್ಯವೋ ಹಾಗೆ ಕೊರೊನಾ ಸಮಯದಲ್ಲಿ ನೆರವಾದ ಏಳು ಸ್ವರಗಳು ಈ ಜಗತ್ತಿಗೆ ಅಷ್ಟೇ ಮುಖ್ಯವಾಗಿದೆ. ಬೆಳಗ್ಗೆ 10:30ರ ಸಪ್ತಸ್ವರ ಕಾರ್ಯಕ್ರಮದಲ್ಲಿ ಹೆಚ್.ಆರ್ ರಂಗನಾಥ್ ಜೊತೆ ಅತಿಥಿಗಳಾಗಿ ಕೊರೊನಾ ಸಮಯದಲ್ಲಿ ನೆರವಾದ ಏಳು ವಿಭಾಗದ ಗಣ್ಯರು ಜೊತೆಯಲ್ಲಿರುತ್ತಾರೆ.
Advertisement
75 ಸಾವಿರ ಜನರ ಹೊಟ್ಟೆ ತುಂಬಿಸಿದ ಬುಹುಭಾಷಾ ನಟಿ ಪ್ರಣಿತಾ, ರಾಜಕೀಯ ವಿಭಾಗದಿಂದ ಆರೋಗ್ಯ ಸಚಿವ ಸುಧಾಕರ್, ಆರೋಗ್ಯ ಇಲಾಖೆಯಿಂದ ನಾರಾಯಣ ನೇತ್ರಾಲಯ ಚೇರ್‌ಮ್ಯಾನ್ ಅಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಕೆ.ಭುಜಂಗ ಶೆಟ್ಟಿ, ಶಿಕ್ಷಣ ವಿಭಾಗದಿಂದ ರೇವಾ ಯೂನಿವರ್ಸಿಟಿಯ ಕುಲಪತಿಗಳಾದ ಡಾ. ಪಿ ಶ್ಯಾಮರಾಜು, ಹಾಗೂ ಎನ್‍ಜಿಓ ವಿಭಾಗದಿಂದ ಚಿಂತಕ ಯುವ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ, ಪೊಲೀಸ್ ಇಲಾಖೆಯಿಂದ ನಗರ ಶಸಸ್ತ್ರ ಮೀಸಲು ಪಡೆ ಮುಖ್ಯಪೇದೆ ಎಸ್.ಕುಮಾರಸ್ವಾಮಿ ಹಾಗೂ ಕೊನೆಯ ಸ್ವರವಾಗಿ ಡಿ.ಎಸ್ ಮ್ಯಾಕ್ಸ್ ಪ್ರಾಪಟ್ರೀಸ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎಸ್.ಪಿ ದಯಾನಂದ್‍ರಂತಹ ಸಾಧಕರನ್ನು ಗೌರವಿಸಲಾಗುತ್ತದೆ.