ಅಧಿಕೃತವಾಗಿ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟ ಸಪ್ತಮಿ

Public TV
1 Min Read
saptami gowda

ತೆಲುಗು ಸಿನಿಮಾ ರಂಗಕ್ಕೆ ಕಾಂತಾರ ಬೆಡಗಿ ಸಪ್ತಮಿ ಗೌಡ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಅದು ಈಗ ನಿಜವಾಗಿದೆ. ತಮ್ಮುಡು ಸಿನಿಮಾದ ಮೂಲಕ ಸಪ್ತಮಿ ತೆಲುಗು ಸಿನಿಮಾ ರಂಗವನ್ನು ಪ್ರವೇಶ ಮಾಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕೂಡ ಶುರುವಾಗಿದೆ.

saptami gowda 4

ಈ ಹಿಂದೆ ಸಪ್ತಮಿ ಗೌಡ (Saptami Gowda) ದಿ ವ್ಯಾಕ್ಸಿನ್ ವಾರ್ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ತಮ್ಮುಡು (Thammadu) ಚಿತ್ರದ ಮೂಲಕ ತೆಲುಗು (Telugu) ಸಿನಿಮಾ ರಂಗಕ್ಕೂ ಪ್ರವೇಶ ಮಾಡಿದಂತಾಗಿದೆ. ಕನ್ನಡ, ಹಿಂದಿ ಮತ್ತು ತೆಲುಗಿನ ಚಿತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಬಹುಭಾಷಾ ತಾರೆಯಾಗಿದ್ದಾರೆ. ಜೊತೆಗೆ ಕನ್ನಡದಲ್ಲೇ ಅವರು ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.

saptami gowda 1

ಯುವರಾಜಕುಮಾರ್ ನಾಯಕನಾಗಿ ನಟಿಸುತ್ತಿರುವ ಯುವ ಸಿನಿಮಾದಲ್ಲಿ ನಾಯಕಿಯಾಗಿ  ಸಪ್ತಮಿ ಗೌಡ ನಟಿಸುತ್ತಿದ್ದಾರೆ.  ಅವರು ಈ ಸಿನಿಮಾದಲ್ಲಿ ಸಿರಿ ಎನ್ನುವ ಪಾತ್ರ ಮಾಡುತ್ತಿದ್ದಾರೆ. ಅದೊಂದು ಡಿಗ್ಲಾಮರ್ ಪಾತ್ರ ಎಂದು ಹೇಳಲಾಗುತ್ತಿದೆ. ಕಾಲೇಜು ಹುಡುಗಿಯಾಗಿ ಈ ಸಿನಿಮಾದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ ಸಪ್ತಮಿ. ಯುವರಾಜ್ ಕುಮಾರ್ ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಲಾಂಚ್ ಆಗುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರುತ್ತಿದೆ.

 

 ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ರು. ಡಾಲಿಗೆ ನಾಯಕಿಯಾಗಿ ಮೊದಲ ಸಿನಿಮಾದಲ್ಲೇ ಸೈ ಎನಿಸಿಕೊಂಡರು. ಬಳಿಕ `ಕಾಂತಾರ’ (Kantara) ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾದರು. ಮತ್ತೆ ಇದೀಗ ಡಾಲಿ ಜೊತೆಯೂ ಒಂದು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಉತ್ತರಕಾಂಡ ಸಿನಿಮಾದಲ್ಲೂ ಸಪ್ತಮಿ ಗೌಡ ನಟಿಸುತ್ತಿದ್ದಾರೆ.

Share This Article