ಬಿಗ್ ಬಾಸ್ ನಂತರ ಸಾನ್ಯಾ ಅಯ್ಯರ್ (Sanya Iyer) ಯಾವುದೇ ಸಿನಿಮಾ ಅಥವಾ ಸೀರಿಯಲ್ ಒಪ್ಪಿಕೊಳ್ಳದೇ ಇದ್ದರೂ ಸುದ್ದಿಗಂತೂ ಕೊರತೆ ಮಾಡಿಕೊಂಡಿಲ್ಲ. ಬಿಗ್ ಬಾಸ್ ನಲ್ಲಿ ಲವ್ವಿಡವ್ವಿ ವಿಚಾರಕ್ಕೆ ಹೆಚ್ಚು ಸುದ್ದಿಯಾದರು. ತನ್ನ ಲವರ್ ಬಗ್ಗೆ ಹೇಳಿಕೊಂಡರು. ಸಾಕು ತಂದೆಯ ಬಗ್ಗೆಯೂ ಮಾತನಾಡಿದರು.
ಬಿಗ್ ಬಾಸ್ ನಿಂದ ಬಂದ ನಂತರ ಕಾರ್ಯಕ್ರಮವೊಂದರಲ್ಲಿ ಹುಡುಗನೊಬ್ಬ ಎದೆ ಮುಟ್ಟಿದ ಅನ್ನುವ ಕಾರಣಕ್ಕಾಗಿ ಮತ್ತೆ ಸಾನ್ಯಾ ಸುದ್ದಿಗೆ ಬಂದರು. ಆ ಕಾರ್ಯಕ್ರಮಕ್ಕೆ ಅವರು ಮದ್ಯಪಾನ ಮಾಡಿ ಬಂದಿದ್ದರು ಎನ್ನುವ ಆರೋಪವೂ ಇತ್ತು. ಅದಕ್ಕೂ ಅವರು ಉತ್ತರ ನೀಡಿದ್ದರು. ತಾವು ಮದ್ಯಪಾನ ಮಾಡುವುದಿಲ್ಲ ಎಂದು ಆರೋಪವನ್ನು ಅಲ್ಲಗಳೆದರು.
ನಂತರ ಬಾಲಿವುಡ್ ನ ಫೇಮಸ್ ಫೋಟೋಗ್ರಾಫರ್ ಬಳಿ ಫೋಟೋ ಶೂಟ್ ಮಾಡಿಸಿಕೊಂಡು ಮತ್ತೆ ಮಾಧ್ಯಮಗಳಿಗೆ ಆಹಾರವಾದರು. ಆ ಫೋಟೋಗಳು ಸಾಕಷ್ಟು ವೈರಲ್ ಆದವು. ಆ ಫೋಟೋಶೂಟ್ ಹಿಂದಿನ ಉದ್ದೇಶವನ್ನು ಅವರು ಹೇಳಿಕೊಳ್ಳದೇ ಇದ್ದರೂ, ಬಾಲಿವುಡ್ ಸಿನಿಮಾಗೆ ಸಾನ್ಯಾ ಟ್ರೈ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೀಗ ಸಾನ್ಯಾ ಮತ್ತೆ ಸುದ್ದಿಗೆ ಸಿಕ್ಕಿದ್ದಾರೆ. ಪುನೀತ್ ರಾಜ್ ಕುಮಾರ್ (Puneeth Rajkumar) ನಟನೆಯ ಪರಮಾತ್ಮ (Paramatma) ಸಿನಿಮಾದ ‘ಹೆಸರು ಪೂರ್ತಿ ಹೇಳದೆ’ ಹಾಡಿಗೆ ರೀಲ್ಸ್ (Reels) ಮಾಡಿದ್ದಾರೆ. ಯಾರಾದರೂ ಐ ಲವ್ ಯೂ ಹೇಳುವಂತಹ ಸಂದರ್ಭ ಬಂದರೆ, ದಯವಿಟ್ಟು ‘ಐ ಲವ್ ಯೂ’ (I Love You)ಅಂತ ಹೇಳಬೇಡಿ. ಈ ಹಾಡು ಹೇಳಿ ಎಂದು ಸಲಹೆ ನೀಡಿದ್ದಾರೆ.
ಕೆಲವು ಘಟನೆಗಳ ನಂತರ ಸಾನ್ಯಾ ತಮ್ಮ ಬದುಕನ್ನು ನಾಜೂಕಾಗಿ ಕಟ್ಟಿಕೊಳ್ಳುತ್ತಿದ್ದಾರೆ. ಅಲ್ಲದೇ ಗ್ಲಾಮರ್ ಬಗ್ಗೆಯೂ ಅವರು ಕಾಳಜಿ ತಗೆದುಕೊಳ್ಳುತ್ತಿದ್ದಾರೆ. ಈ ಕುರಿತು ಅವರು ಮಾತನಾಡಿ, ‘ಕಂಬಳದಲ್ಲಿ ನಾನು ಕುಡಿದುಕೊಂಡು ಬಂದಿದ್ದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಅದು ಸುಳ್ಳು. ನಾನು ಜೀರೋ ಶುಗರ್ ಡಯೆಟ್ ಮಾಡುತ್ತಿದ್ದೇನೆ. ಮುಂಬೈನಲ್ಲಿ ಶೂಟಿಂಗ್ ಇರುವ ಕಾರಣಕ್ಕಾಗಿ ಇದೆಲ್ಲವನ್ನೂ ಮಾಡುತ್ತಿದ್ದೇನೆ. ಅಂಥದ್ದರಲ್ಲಿ ಮದ್ಯಪಾನ ಹೇಗೆ ಮಾಡಲಿ? ಜೊತೆಗೆ ನಾನು ರುದ್ರಾಕ್ಷಿಯನ್ನು ಧರಿಸಿದ್ದೇನೆ. ಇದನ್ನು ಧರಿಸಿದಾಗ ಮದ್ಯಪಾನ, ಧೂಮಪಾನ ಮಾಡಲ್ಲ. ಸುಮ್ಮನೆ ನನ್ನ ಮೇಲೆ ಆಪಾದನೆ ಹೊರಿಸಲಾಗುತ್ತಿದೆ’ ಎಂದಿದ್ದರು.
ಈಗಾಗಲೇ ಜೀವನದಲ್ಲಿ ಒಂದು ಲವ್ ಫೆಲ್ಯೂವರ್ ಕಂಡಿರುವ ಪುಟ್ಟಗೌರಿ ಖ್ಯಾತಿಯ ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ (Rupesh Shetty) ನಡುವೆ ಏನೋ ನಡೀತಾ ಇದೆ ಎನ್ನುವುದು ಬಿಗ್ ಬಾಸ್ ಮನೆಯಲ್ಲಿದ್ದವರ ಗುಮಾನಿಯಾಗಿತ್ತು. ಅದಕ್ಕೆ ಪುಷ್ಠಿ ಎನ್ನುವಂತೆ ಈ ಜೋಡಿ ಸದಾ ಜೊತೆಯಾಗಿಯೇ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತಿತ್ತು. ಅದಕ್ಕೂ ಅವರು ಸ್ಪಷ್ಟನೆ ನೀಡಿದ್ದಾರೆ.
ರೂಪೇಶ್ ಮತ್ತು ತಮ್ಮ ನಡುವೆ ಅಂಥದ್ದೂ ಏನೂ ಇಲ್ಲ, ನಾವು ಜಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಏನೇ ಪ್ರಯತ್ನಿಸಿದರೂ, ಅವರುಗಳ ನಡೆ ಮಾತ್ರ ಹಲವು ಅನುಮಾನಗಳನ್ನು ಬಿತ್ತಿದೆ. ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೂ ಸಾನ್ಯಾ ಮತ್ತು ರೂಪೇಶ್ ಹಲವಾರು ಬಾರಿ ಭೇಟಿ ಮಾಡಿದ್ದಾರೆ. ಹಾಗಾಗಿ ಇಬ್ಬರೂ ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಹಾಗೆಯೇ ಜನರ ಮನಸ್ಸಿನಲ್ಲಿ ಉಳಿದಿದೆ.
ತಮ್ಮ ತಾಯಿಯನ್ನು ಅಭಿಮಾನದಿಂದ ಕಾಣುವ ಸಾನ್ಯಾ. ಅವರ ತಾಯಿಯ ಬಗ್ಗೆ ಯಾರೇ ಕೆಟ್ಟ ಕಾಮೆಂಟ್ ಮಾಡಿದರೂ ಸಹಿಸುವುದಿಲ್ಲ. ಇತ್ತೀಚಿಗೆ ದೀಪಾ ಅಯ್ಯರ್ ಅವರ (Deepa Iyer) ಹುಟ್ಟುಹಬ್ಬವಿತ್ತು. ಹಾಗಾಗಿ ಸಾನ್ಯ ಅಮ್ಮನಿಗೆ ಸರ್ಪ್ರೈಸ್ ಉಡುಗೊರೆ ನೀಡಿದ್ದರು. ದೊಡ್ಡ ಹೊಟೇಲಿಗೆ ಕರೆದೊಯ್ದು ಕೇಕ್ ಆರ್ಡರ್ ಮಾಡಿ ಅಮ್ಮನಿಂದ ಕಟ್ ಮಾಡಿಸಿದ್ದರು. ಈ ಖುಷಿಯ ಸನ್ನಿವೇಶವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ಶೇರ್ ಆಗ್ತಿದಂತೆ ದೀಪಾ ಅವರ ಡ್ರೆಸ್‌ಗೆ ನೆಗೆಟಿವ್ ಕಾಮೆಂಟ್ ಹರಿದು ಬಂದಿತ್ತು.
ಅಮ್ಮನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದವರನ್ನು ಚಳಿಬಿಡಿಸಿದ್ದರು ಸಾನ್ಯಾ. ನನ್ನ ತಾಯಿ ನನಗೆ ಹೆಮ್ಮೆ. ಮಾತನಾಡಲು ನೀವ್ಯಾರು? ಒಂದು ಸಲ ನಿಮ್ಮ ತಾಯಿಯನ್ನು ಪ್ರೀತಿಸಿ ನೋಡಿ, ಆಗ ಇಂತಹ ಕಾಮೆಂಟ್ ಗಳು ಬರಲಾರವು ಎಂದಿದ್ದರು. ಈ ಮೂಲಕ ತಾಯಿಯ ಬಗೆಗಿನ ಅಭಿಮಾನವನ್ನು ಮೆರೆದಿದ್ದರು.