ದೊಡ್ಮನೆಯಲ್ಲಿ ಪ್ರೇಮಪಕ್ಷಿಗಳಾಗಿ ಸಾನ್ಯ (Sanya Iyer) ಮತ್ತು ರೂಪೇಶ್ (Roopesh Shetty) ಜೋಡಿ ಹೈಲೈಟ್ ಆಗಿತ್ತು. ಒಬ್ಬರಿಗೊಬ್ಬರು ಸಾಥ್ ನೀಡ್ತಿದ್ದರು. ಇದೀಗ ಸಾನ್ಯ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಮುಂದೊಂದು ದಿನ ರೂಪೇಶ್ ಶೆಟ್ಟಿ ಅವರ ಮನೆ ಕಡೆಯಿಂದ ಮದುವೆ (Wedding) ಪ್ರಪೋಸಲ್ ಬಂದರೆ ಸಾನ್ಯ ಉತ್ತರವೇನು ಎಂಬುದರ ಬಗ್ಗೆ ನಟಿ ಮಾತನಾಡಿದ್ದಾರೆ.
ಒಟಿಟಿಯಿಂದ ಟಿವಿ ಬಿಗ್ ಬಾಸ್‌ವೆರೆಗೂ (Bigg Boss Kannada) ಸ್ಪರ್ಧಿಗಳಾಗಿ ಜೊತೆಯಾಗಿ ಕಾಣಿಸಿಕೊಂಡ ಜೋಡಿ ಸಾನ್ಯ ಮತ್ತು ರೂಪೇಶ್ ಮುಂದಿನ ದಿನಗಳಲ್ಲಿ ಮದುವೆಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದೇ ಹೇಳಿಕೊಂಡು ಬಂದಿರುವ ಈ ಜೋಡಿ ಮಧ್ಯೆ ಮದುವೆ ಆಲೋಚನೆ ಇದ್ಯಾ ಎಂಬುದರ ಬಗ್ಗೆ ನಟಿ ಸಾನ್ಯ ನೇರ ಉತ್ತರ ಕೊಟ್ಟಿದ್ದಾರೆ.
ಇದೀಗ ಇದರ ಬಗ್ಗೆ ಯೋಚನೆನೆ ಮಾಡಬಾರದು. ನನ್ನ ಕನಸಿನ ಜರ್ನಿ ಇದೀಗ ಶುರುವಾಗುತ್ತಿದೆ. ಇನ್ನೊಂದು 5 ವರ್ಷ ನಾನು ನನ್ನ ಕೆರಿಯರ್‌ನತ್ತ ಗಮನ ಕೊಡಬೇಕು. ಹಾಗಂತ ನಾನು ರೂಪೇಶ್ ಫ್ರೆಂಡ್‌ಶಿಪ್ ಬಿಡ್ತೀನಿ ಅಂತಾ ಅಲ್ಲ. ಹೋಗ್ತಾ ಹೋಗ್ತಾ ಹೇಗೆ ಡೆವಲಪ್ ಆಗುತ್ತೆ ನನಗೆ ಗೋತ್ತಿಲ್ಲ. ಮದುವೆ ಎಲ್ಲಾ ಇವಾಗ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ನಾಯಕಿಯಾಗೋದು ನನ್ನ ಕನಸು. ಅದನ್ನ ನಾನು ಪಕ್ಕಕ್ಕೆ ಇಡೋಕೆ ಆಗಲ್ಲ ಎಂದು ಬಿಗ್ ಬಾಸ್ ಸ್ಪರ್ಧಿ ಸಾನ್ಯ, ರೂಪೇಶ್ ಜೊತೆಗಿನ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಪುಷ್ಪ 2 ಅಲ್ಲು ಅರ್ಜುನ್ ಮುಂದೆ ಅಬ್ಬರಿಸಲು ಬರುತ್ತಿದ್ದಾರೆ ವಿದೇಶಿ ವಿಲನ್
ಇನ್ನೂ ಮುಂದಿನ ದಿನಗಳಲ್ಲಿ ಕನ್ನಡ, ತುಳು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸುವ ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇವೆ ಎಂದು ಸಾನ್ಯ ಈ ಬಗ್ಗೆ ಮಾತನಾಡಿದ್ದಾರೆ.