ಬಿಗ್ ಬಾಸ್ ಮನೆಯಲ್ಲಿ (Bigg Boss House) ರೂಪೇಶ್ ಶೆಟ್ಟಿ(Roopesh Shetty), ಸಾನ್ಯ ಅಯ್ಯರ್(Sanya Iyer)ಲವ್ ಬರ್ಡ್ಸ್ ಆಗಿ ಹೈಲೈಟ್ ಆಗಿದ್ದರು. ಸಾನ್ಯ ಎಲಿಮಿನೇಟ್ ಆಗಿ ಹೊರಬಂದ ಮೇಲೂ ತಮ್ಮ ಸ್ನೇಹಿತನಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಇದೀಗ ನಾನು ಕಳುಹಿಸುತ್ತಿರುವ ವಸ್ತುಗಳು ರೂಪೇಶ್‌ಗೆ ರೀಚ್ ಆಗುತ್ತಿಲ್ಲ ಎಂದು ಬಿಗ್ ಬಾಸ್ ಮೇಲೆ ಸಾನ್ಯ ಬೇಸರ ಹೊರ ಹಾಕಿದ್ದಾರೆ.
ದೊಡ್ಮನೆಯಲ್ಲಿ ಪ್ರೇಮ ಪಕ್ಷಿಗಳಾಗಿದ್ದ ಸಾನ್ಯ ಮತ್ತು ರೂಪು ಒಟಿಟಿಯಿಂದ ಟಿವಿ ಬಿಗ್ ಬಾಸ್‌ವೆರೆಗೂ (Bigg Boss Kannada) ಸಾಥ್ ನೀಡುತ್ತಲೇ ಬಂದಿದ್ದರು. ಸಾನ್ಯ ಔಟ್ ಆಗಿದ್ದಾರೆ ಎಂದಾಗ ರೂಪೇಶ್, ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಸಾನ್ಯ ಹೊರ ಬರುವಾಗ ಬೆಸ್ಟ್ ಫ್ರೆಂಡ್ ರೂಪೇಶ್ ಶೆಟ್ಟಿ ಒಂದು ಮಾತು ತೆಗೆದುಕೊಳ್ಳುತ್ತಾರೆ, ಪ್ರತಿ ವಾರವೂ ನನಗೆ ರೆಡ್ ಶರ್ಟ್ ಅಥವಾ ಟೀ-ಶರ್ಟ್ ಕಳುಹಿಸಬೇಕು ಅದರಲ್ಲಿ ನಿನ್ನ ಪ್ರೀತಿ ತುಂಬಿರಬೇಕು ಎಂದಿದ್ದರು. ಅದರಂತೆ ಕೊಟ್ಟ ಮಾತನ್ನ ಸಾನ್ಯ ಉಳಿಕೊಳ್ಳುತ್ತಾರೆ. ಒಂದು ವಾರ ಬಟ್ಟೆ ಕಳುಹಿಸಿದ್ದಾರೆ. ಎರಡನೇ ವಾರದಿಂದ ಯಾವ ಡ್ರೆಸ್ ಕೂಡ ಬರುವುದಿಲ್ಲ. ಇದನ್ನು ರೂಪೇಶ್ ಮಾತ್ರವಲ್ಲ ಪ್ರತಿ ದಿನ ಎಪಿಸೋಡ್ ನೋಡುತ್ತಿರುವವರಿಗೂ ಗಮನಕ್ಕೆ ಬಂದಿದೆ.
ಇದೇನಪ್ಪ ಪ್ರೀತಿ ಕಡಿಮೆ ಆಗಿರಬೇಕು ಅದಿಕ್ಕೆ ಕೆಂಪು ಶರ್ಟ್ ಬರುತ್ತಿಲ್ಲ ಎಂದು ವೀಕ್ಷಕರು ಭಾವಿಸಿದ್ದರು ಆದರೆ ಈಗ ಸಾನ್ಯ ಹಾಕಿರುವ ಪೋಸ್ಟ್ ನೋಡಿ ಎಲ್ಲರಿಗೂ ಕ್ಲ್ಯಾರಿಟಿ ಸಿಕ್ಕಿದೆ. ಇದನ್ನೂ ಓದಿ: ಮಂಗಳಗೌರಿ ಕಾವ್ಯಶ್ರೀ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್
View this post on Instagram
ರೂಪಿ ನೀನು ಸ್ಟ್ರಾಂಗ್ ಆಗಿರು ಆಯ್ತಾ ನಾನು ಕಳುಹಿಸುತ್ತಿರುವ ಶರ್ಟ್ಗಳನ್ನು ನಿನಗೆ ತಲುಪಿಸುತ್ತಿಲ್ಲ ಆದರೆ ಪಾರ್ಸಲ್ ಸ್ವೀಕರಿಸಿರುವುದಾಗಿ ಹೇಳುತ್ತಿದ್ದಾರೆ. ಆದರೆ ನನ್ನ ಪಾಸಿಟಿವಿಟಿ ಮತ್ತು ಸರ್ಪೋಟ್ ಕಳುಹಿಸುತ್ತಿರುವೆ, ಇದನ್ನು ಯಾರಿಂದಲ್ಲೂ ಸ್ಟಾಪ್ ಮಾಡಲು ಆಗುವುದಿಲ್ಲ ಆಯ್ತಾ. ನನ್ನ ಬೆಸ್ಟಿ ಸದಾ ಶೈನ್ ಆಗುತ್ತಿರಬೇಕು ಎಂದು ಸಾನ್ಯ ಬರೆದುಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.