CinemaKarnatakaLatestMain PostSandalwood

ಪ್ರಶಾಂತ್ ಸಂಬರ್ಗಿಗೆ ‘ಕುತಂತ್ರಿ ಕಲಾವಿದ’ ಎಂದ ಸಾನ್ಯ ಅಯ್ಯರ್

ಬಿಗ್ ಬಾಸ್ ಓಟಿಟಿಯಲ್ಲಿ ನೋಡುಗರಿಗೆ ಸಖತ್ ಮೋಡಿ ಮಾಡಿದ್ದ ಸಾನ್ಯ ಅಯ್ಯರ್, ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Season 9) ಕೊಂಚ ಡಲ್ ಹೊಡೆದಂತೆ ಕಾಣ್ತಿದ್ದಾರೆ.  ಸದಾ ಲವಲವಿಕೆ, ಜಾಣ್ಮೆಯಿಂದ ಆಟ ಆಡುತ್ತಿದ್ದ,  ರೂಪೇಶ್ ಶೆಟ್ಟಿ ಜೊತೆಲಿ ಯಾವಾಗಲೂ ಅಂಟಿಕೊಂಡೇ ಇರುತ್ತಿದ್ದ ಈ ಪುಟ್ಟ ಗೌರಿ, ಇದೀಗ ಗುಂಪಿನಲ್ಲಿ ಗೋವಿಂದ ಆಗಿದ್ದಾರೆ. ಹೀಗಾಗಿಯೇ ಪ್ರಶಾಂತ್ ಸಂಬರ್ಗಿಗೆ ಸಾನ್ಯ ಕುತಂತ್ರಿ ಕಲೆ ಎನ್ನುವ ಬ್ಯಾಂಡ್ ಕಟ್ಟಿ ನಲಿದಿದ್ದಾರೆ.

ಬಿಗ್ ಬಾಸ್ ಮನೆ ಒಳಗೆ ಬರುವ ಪ್ರತಿಯೊಬ್ಬರಿಗೂ ಕಿಚ್ಚ ಸುದೀಪ್, ಒಂದೊಂದು ಬ್ಯಾಂಡ್ ಕೊಟ್ಟು ಕಳುಹಿಸಿದ್ದರು. ಆ ಬ್ಯಾಂಡ್ ಮೇಲೆ ಒಂದೊಂದು ಹೆಸರಿತ್ತು. ಅದನ್ನು ಮನೆಯಲ್ಲಿರುವ ತಮ್ಮಿಷ್ಟದ ವ್ಯಕ್ತಿಗೆ ಕಟ್ಟಲು ಸೂಚಿಸಿದ್ದರು. ಆ ಟಾಸ್ಕ್ ಈಗ ನಡೆದಿದೆ. ಸಾನ್ಯಗೆ ಸಿಕ್ಕ ಬ್ಯಾಂಡ್ ನಲ್ಲಿ ‘ಕಲಾವಿದ’ ಎಂದು ಬರೆಯಲಾಗಿತ್ತು. ಕಲಾವಿದ ಪದವನ್ನು ಕುತಂತ್ರಿ ಕಲೆ ಎಂದು ಬದಲಾಯಿಸಿ ಸಾನ್ಯ ಅಯ್ಯರ್ (Sanya Iyer), ಸಂಬರ್ಗಿಗೆ ಕಟ್ಟಿದರು. ಇದರಿಂದ ಸಾಂಬರ್ಗಿ ಶ್ಯಾನೇ ಬೇಜಾರು ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾದ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್

ಪ್ರಶಾಂತ್ ಸಂಬರ್ಗಿ (Prashant Sambargi) ದೊಡ್ಮನೆಲಿ ಒಂದು ರೀತಿ ಫೈಯರ್ ಬ್ರ್ಯಾಂಡ್. ನೇರವಾಗಿ ಮಾತಾಡೋ ಮೂಲಕ ಹಲವರ ವಿರೋಧ ಕೂಡ ಕಟ್ಟಿಕೊಂಡಿದ್ದಾರೆ. ಹಾಗಾಗಿ ಪ್ರಶಾಂತ್ ಕೈಲಿ ಈಗ ಕುತಂತ್ರಿ ಕಲಾವಿದ ಬ್ಯಾಂಡ್ ರಾರಾಜಿಸುತ್ತಿದೆ. ಇಂಥದೊಂದು ಬ್ಯಾಂಡ್ ಕಟ್ಟಿರೋ ಸಾನ್ಯಗೆ ಮುಂದಿನ ದಿನಗಳಲ್ಲಿ ಪ್ರಶಾಂತ್ ಅದ್ಯಾವ ರೀತಿಯಲ್ಲಿ ನೆಡೆಸ್ಕೋತಾರೋ ಬಿಗ್ ಬಾಸ್ ನೇ ಬಲ್ಲ.

ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಎಲ್ಲರ ಗಮನ ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದ್ದರೆ, ಸಾನ್ಯ ಮಾತ್ರ ಆಗಾಗ್ಗೆ ಮೌನಕ್ಕೆ ಜಾರಿ ಬಿಡ್ತಾರೆ. ರೂಪೇಶ್ ಶೆಟ್ಟಿ (Rupesh Shetty) ಕೂಡ ಆಕೆಯಿಂದ  ಅಂತರ ಕಾಪಾಡಿಕೊಳ್ತಿರೊದ್ರಿಂದ ತಾಯಿಯನ್ನು ಕಳೆದುಕೊಂಡ ಕರುವಿನಂತಾಗಿದ್ದಾರೆ ಸಾನ್ಯ. ಆದರೂ, ಒಂದೊಂದು ಸಲ ಚಾರ್ಜ್ ಆಗಿ ಅಚ್ಚರಿ ಮೂಡಿಸುವಷ್ಟು ಚಟುವಟಿಕೆಯಲ್ಲಿ ಇರ್ತಾರೆ ಮುದ್ದು ಮುಖದ ಹುಡುಗಿ. ಮುಂದಿನ ದಿನಗಳಲ್ಲಿ ಸಾನ್ಯ ಅದು ಹೇಗೆ ಆಟ ಆಡ್ತಾರೋ ಕಾದು ನೋಡಬೇಕು.

Live Tv

Leave a Reply

Your email address will not be published. Required fields are marked *

Back to top button