ಬೆಂಗಳೂರು: ಸ್ಯಾಂಟ್ರೋ ರವಿ (Santro Ravi) ಪ್ರಕರಣಗಳನ್ನ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ವಂಚಕ, ಪಿಂಪ್ ಸ್ಯಾಂಟ್ರೊ ರವಿ ವಿರುದ್ಧದ ದೂರುಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರಕಾರ ಸಿಐಡಿ ಪೊಲೀಸರಿಗೆ ನಿರ್ದೇಶನ ನೀಡಿದೆ. ಸಿಐಡಿಗೆ ವರ್ಗಾಯಿಸಿರುವುದನ್ನ ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ದೃಢೀಕರಿಸಿ ಮಾಹಿತಿ ನೀಡಿದ್ದಾರೆ.
Advertisement
ಈ ನಡುವೆ ಸ್ಯಾಂಟ್ರೋ ರವಿಗೆ ನ್ಯಾಯಾಂಗ ಬಂಧನದ ನೀಡುವ ವಿಚಾರದಲ್ಲಿ ಜಡ್ಜ್ ಮುಂದೆ ಸರ್ಕಾರ ಆಕ್ಷೇಪ ಮಾಡಲಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಬೆಂಗಳೂರಲ್ಲಿ ಇವತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ವಾಗ್ದಾಳಿ ನಡೆಸಿದ್ರು. ಸ್ಯಾಂಟ್ರೋ ರವಿ ಒಬ್ಬ ನಟೋರಿಯಸ್ ಕ್ರಿಮಿನಲ್. ಯಾರನ್ನಾದರೂ ಬಂಧಿಸಿದ್ರೆ ಪೊಲೀಸ್ ಕಸ್ಟಡಿಗೆ ತಗೊಂಡು ವಿಚಾರಣೆ ಮಾಡ್ತಾರೆ. ಆದರೆ ಆ ನಟೋರಿಯಸ್ ಕ್ರಿಮಿನಲ್ ಅನ್ನ ಯಾಕೆ ಕೂಡಲೇ ನ್ಯಾಯಾಂಗ ಬಂಧನಕ್ಕೆ ನೀಡಿದರು..?. ಇದು ಸರಿಯಾಗಿ ತನಿಖೆಯಾಗಬೇಕು ಎಂದು ಆಗ್ರಹಿಸಿದ್ರು. ಇದನ್ನೂ ಓದಿ: ಮಾರುವೇಷದಲ್ಲಿದ್ದ ಸ್ಯಾಂಟ್ರೋ ರವಿ ಬಗ್ಗೆ ಸುಳಿವು ಕೊಡ್ತು ಹಣೆ ಮೇಲಿನ ಮಾರ್ಕ್
Advertisement
Advertisement
ಈ ಬೆನ್ನಲ್ಲೇ ರಾಜ್ಯ ಸರ್ಕಾರ ಸ್ಯಾಂಟ್ರೋ ರವಿ ಪ್ರಕರಣಗಳನ್ನ ಸಿಐಡಿಗೆ ವಹಿಸಿದ್ದು, ಸ್ಯಾಂಟ್ರೋ ರವಿಗೆ ಸಂಬಂಧಪಟ್ಟ ಬಹುತೇಕ ಎಲ್ಲ ಪ್ರಕರಣಗಳು ಸಿಐಡಿ ವ್ಯಾಪ್ತಿಗೆ ಬರಲಿವೆ. ಅಧಿಕೃತ ಆದೇಶ ಪತ್ರದಲ್ಲಿ ಸಿಐಡಿ (CID) ತನಿಖೆಯ ವ್ಯಾಪ್ತಿ, ಸ್ವರೂಪದ ಬಗ್ಗೆ ಸ್ಪಷ್ಟವಾಗಿ ಗೊತ್ತಾಗಲಿದೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k