ಬೆಂಗಳೂರು: ವೇಶ್ಯಾವಾಟಿಕೆ ದಂಧೆಕೋರ, ವರ್ಗಾವಣೆ ಕಿಂಗ್ ಪಿನ್ ಸ್ಯಾಂಟ್ರೋ ರವಿ (Santro Ravi) ಬಂಧನದ ಬೆನ್ನಲ್ಲೇ ರಾಜಕಾರಣಿಗಳ ಎದೆಯಲ್ಲಿ ನಡುಕ ಶುರುವಾದರೆ ಇನ್ನೊಂದು ಕಡೆ ಕೆಲ ಪೊಲೀಸರ (Police) ಎದೆಯಲ್ಲಿ ಢವ ಢವ ಶುರುವಾಗಿದೆ.
ಸಿಡಿ ತನಿಖೆ ನಮ್ಮ ಬುಡಕ್ಕೆ ಎಲ್ಲಿ ಬರಬಹುದು ಎಂಬ ಭಯ ಕೆಲ ರಾಜಕಾರಣಿಗಳಿದ್ದರೆ ಲಕ್ಷ ಲಕ್ಷ ಕೊಟ್ಟು ಪೋಸ್ಟಿಂಗ್ ಪಡೆದ ಅಧಿಕಾರಿಗಳಲ್ಲಿ ಇದೀಗ ಆತಂಕ ಶುರುವಾಗಿದೆ. ಯಾಕೆಂದರೆ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ ಪೋಸ್ಟಿಂಗ್ ಡೀಲ್ ಬಳಿಕ ವಾಟ್ಸಪ್ ಸ್ಟೇಟಸ್‌ನಲ್ಲಿ ಸಚಿವರ ಟಿಪ್ಪಣಿ ಪ್ರತಿ(Minutes Copy), ವರ್ಗಾವಣೆಯಾದ ಪೊಲೀಸರ ಲಿಸ್ಟ್ ಹಾಕುತ್ತಿದ್ದ. ಇದನ್ನೂ ಓದಿ: ಮಕ್ಕಳಿಬ್ಬರಿಗೆ ವಿಷವುಣಿಸಿ ತಾಯಿ ನೇಣಿಗೆ ಶರಣು
Advertisement
Advertisement
ವರ್ಗಾವಣೆಯಾಗುವ ಮೊದಲು ಸಚಿವರಿಗೆ, ಶಾಸಕರಿಗೆ ಹಣ ಕೊಡಬೇಕು ಎಂದು ಹೇಳಿ ಪೊಲೀಸರಿಂದ ಹಣ (Money) ಪಡೆಯುತ್ತಿದ್ದ. ಹಣವನ್ನು ಸಿದ್ದ ಪಡಿಸಿದ ಬಳಿಕ ಅಧಿಕಾರಿಗಳು ರವಿಗೆ ಕಂತೆ ಹಣದ ಫೋಟೋವನ್ನು ವಾಟ್ಸಪ್‌ನಲ್ಲಿ ಸೆಂಡ್ ಮಾಡಬೇಕಿತ್ತು. ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರಿಗೆ ಈ ರೀತಿ ಸಾಕಷ್ಟು ಮಂದಿ ಅಧಿಕಾರಿಗಳು ರವಿಗೆ ಹಣ ಕಳುಹಿಸಿದ್ದ ಫೋಟೋ ಲಭ್ಯವಾಗಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
Advertisement
ಸಿಐಡಿ ಈಗಾಗಲೇ ಸ್ಯಾಂಟ್ರೊ ರವಿಯ ವಿಚಾರಣೆ ಆರಂಭಿಸಿದ್ದು, ಕೆಲ ಭ್ರಷ್ಟ ಪೊಲೀಸರಿಗೆ ನೋಟಿಸ್ ನೀಡುವ ಸಾಧ್ಯತೆಯಿದೆ. ಇದರಿಂದಾಗಿ ಆಘಾತಕ್ಕೊಳಗಾಗಿರಿವ ಪೊಲೀಸರು ಕೋರ್ಟ್ ಮೂಲಕ ಹೇಗಾದರೂ ತಮ್ಮ ಹೆಸರು ಆಚೆ ಬರದಂತೆ ಸ್ಟೇ (Stay Order) ತರಲು ತಯಾರಿ ನಡೆಸುತ್ತಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k