ದಾರವಾಡ: ಬಿಜೆಪಿಯವರು (BJP) ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಕಾಂಗ್ರೆಸ್ (Congress) ವಿರುದ್ಧ ಅಲ್ಲ, ಮೋದಿ (Narendra Modi) ವಿರುದ್ಧ ಎಂದು ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ.
ದಾರವಾಡದಲ್ಲಿ (Dharwad) ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಬಿಜೆಪಿಯವರು ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅವರು ಇನ್ನೂ ಗೊಂದಲದಲ್ಲೇ ಇದ್ದಾರೆ. ಇಡೀ ದೇಶದಲ್ಲಿ ಒಟ್ಟಾರೆ ಬೆಲೆ ಏರಿಕೆಗೆ ಮೋದಿಯವರೇ ಕಾರಣ. ಆದರೆ, ಬಿಜೆಪಿಯವರಿಗೆ ಅವರ ಹೆಸರು ಹೇಳಲು ಬರುತ್ತಿಲ್ಲ. ಅದಕ್ಕೇ ಕಾಂಗ್ರೆಸ್ ಹೆಸರು ಹೇಳಿ ಕರ್ನಾಟಕದಲ್ಲಿ ಬೆಲೆ ಏರಿಕೆಯಾಗಿದೆ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಬಿಜೆಪಿಗೆ ದೇಣಿಗೆ ಜಾಸ್ತಿ
ಬಿಜೆಪಿ ಅವಧಿಯಲ್ಲಿ ಎಷ್ಟು ಬೆಲೆ ಏರಿಕೆಯಾಗಿದೆ ಎಂಬುದರ ಬಗ್ಗೆ ಇವರು ಶೇಕಡಾವಾರು ಮಾತನಾಡಲಿ. ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ನ ಜಾಮನಗರದಲ್ಲಿ ವಿಮಾನ ಪಥನವಾಗಿದೆ. ಈ ಘಟನೆಯಲ್ಲಿ ಸಿದ್ದಾರ್ಥ್ ಎಂಬ ಯುವಕ ಸಾವಿಗೀಡಾಗಿದ್ದಾನೆ. ಅದು 70 ವರ್ಷಗಳಷ್ಟು ಹಿಂದಿನ ವಿಮಾನ. ಹೀಗಾಗಿ ಅದು ಪಥನವಾಗಿದೆ. ಇದರ ಬಗ್ಗೆ ಎಲ್ಲೂ ಚರ್ಚೆ ಆಗುತ್ತಿಲ್ಲ. ಈ ವಿಷಯ ಮುಚ್ಚಿ ಹಾಕಲೆಂದೇ ವಕ್ಫ್ ವಿಚಾರ ಮುನ್ನೆಲೆಗೆ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ 2 ರೂ. ಏರಿಕೆ