ಬೆಂಗಳೂರು: ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಫೌಂಡೇಶನ್ ವತಿಯಿಂದ 35 ವಿಶೇಷಚೇತನರಿಗೆ ಬುಧವಾರ (ನ.5) `ಪಬ್ಲಿಕ್ ಟಿವಿ’ (Public Tv) ಕಚೇರಿಯಲ್ಲಿ ಎಐ (AI) ಆಧಾರಿತ ಕನ್ನಡಕಗಳನ್ನು ವಿತರಣೆ ಮಾಡಲಾಯಿತು.
`ಪಬ್ಲಿಕ್ ಟಿವಿ’ ಮುಖ್ಯಸ್ಥ ಹೆಚ್.ಆರ್.ರಂಗನಾಥ್ (HR Ranganath) 35 ಅಂಧರಿಗೆ ಕನ್ನಡಕ ವಿತರಿಸಿದರು. ಇದು 8ಕ್ಕೂ ಅಧಿಕ ವೈಶಿಷ್ಟತ್ಯೆಗಳನ್ನು ಹೊಂದಿದ್ದು, ಎಐ ಆಧಾರಿತವಾಗಿದೆ. ಈ ಕನ್ನಡಕ ಧರಿಸಿದವರ ಸುತ್ತಮುತ್ತಲೂ ಏನಿದೆ ಎನ್ನುವುದನ್ನು ಇದು ಸ್ಕ್ಯಾನ್ ಮಾಡಿ ಅದರ ಬಗ್ಗೆ ಮಾಹಿತಿ ನೀಡುತ್ತದೆ. ಜೊತೆಗೆ ಬೇರೆ ಭಾಷೆಯಲ್ಲಿರುವ ಸೂಚನಾ ಫಲಕಗಳನ್ನು ಸ್ಥಳೀಯ ಭಾಷೆಗೆ ಅನುವಾದಿಸಿ ಹೇಳುತ್ತದೆ. ಮೊಬೈಲ್‌ನಲ್ಲಿ ನಂಬರ್ ಸೇವ್ ಆಗಿದ್ದವರು ಅಥವಾ ಪರಿಚಯಸ್ಥರು ಎದುರು ಬಂದರೆ ಅವರನ್ನ ಕ್ಷಣಾರ್ಧದಲ್ಲಿ ಸ್ಕ್ಯಾನ್ ಮಾಡಿ, ಅವರ ಹೆಸರನ್ನು ಹೇಳುತ್ತದೆ.ಇದನ್ನೂ ಓದಿ: ವೋಟ್‌ಚೋರಿ ಬಗ್ಗೆ ಮಾತಾಡೋ ರಾಹುಲ್ ಗಾಂಧಿಯದ್ದು ಚೈಲ್ಡಿಶ್ ಹೇಳಿಕೆ – ನಿಖಿಲ್ ಕುಮಾರಸ್ವಾಮಿ
ಇನ್ನೂ ಎಟಿಎಂನಲ್ಲಿ ಹಣ ಡ್ರಾ ಮಾಡುವ ಸಮಯದಲ್ಲಿ ಇದು ಸಹಾಯ ಮಾಡುತ್ತದೆ. ಎಷ್ಟು ಹಣ ಡ್ರಾ ಆಗುತ್ತಿದೆ ಎನ್ನುವದರ ಮಾಹಿತಿ ಕೊಡುತ್ತದೆ. ಒಬ್ಬರು ಬಳಸಿದ ಕನ್ನಡಕವನ್ನ ಬೇರೆಯವರು ಬಳಕೆ ಮಾಡಲು ಸಾಧ್ಯವಿಲ್ಲ. ಯಾರಿಗೆ ರಿಜಿಸ್ಟರ್ ಆಗಿರುತ್ತದೆಯೋ ಅವರು ಮಾತ್ರ ಬಳಕೆ ಮಾಡಬಹುದು. ಈ ಕನ್ನಡಕವು ಅಂಧರಿಗೆ ಸ್ವಾವಲಂಬಿಯಾಗಿ ಬದುಕಲು ಸಹಾಯ ಮಾಡುತ್ತದೆ. ಸ್ನೇಹಿತನಂತೆ ಸದಾ ಜೊತೆಗಿದ್ದು ಎಲ್ಲದರ ಮಾಹಿತಿ ಕೊಡುತ್ತದೆ.
ಇದೇ ವೇಳೆ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಮಾತನಾಡಿ, ದೇವರು ಕೊಟ್ಟಿದ್ದಾನೆ. ದುಡ್ಡು ಕಡಿಮೆ ಇದ್ದಾಗಲೂ ಮಾಡಿದ್ದೇನೆ. ಜಾಸ್ತಿ ಇದ್ದಾಗಲೂ ಮಾಡಿದ್ದೇನೆ. ರಂಗನಾಥ್ ಅವರಿಗೆ ಧನ್ಯವಾದ. ಇವತ್ತು ಇಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ಕೊಟ್ಟಿದ್ದೀರಿ. ಅಮೆರಿಕದಿಂದ ಇದನ್ನು ತರಿಸಿದ್ದೇವೆ. ಅಂಧರಿಗೆ ಇದು ತುಂಬಾ ಸಹಾಯ ಮಾಡುತ್ತದೆ ಎಂದು ತಿಳಿಸಿದರು.
`ಪಬ್ಲಿಕ್ ಟಿವಿ’ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಅವರು ಮಾತನಾಡಿ, ಅನುಕಂಪ ತೋರಿಸಿ, ದುಡ್ಡು ಕೊಡೋದು ಸುಲಭ. ಆದರೆ ನಾವು ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಆ ರೀತಿಯ ಕೆಲಸವನ್ನು ಸಂತೋಷ್ ಲಾಡ್ ಅವರು ಮಾಡುತ್ತಿದ್ದಾರೆ. ಈ ರೀತಿ ಮಾಡುವವರು ತುಂಬಾ ಕಡಿಮೆ. ಅದಕ್ಕಾಗಿ ಇಂದು ಇದನ್ನು ಒಪ್ಪಿಕೊಂಡು ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಯಾರೋ ಒಬ್ಬರು ಈ ರೀತಿ ಯೋಚನೆ ಮಾಡುತ್ತಿದ್ದಾರೆ ಎನ್ನುವುದೇ ದೊಡ್ಡ ಖುಷಿ ಎಂದು ಹೇಳಿದರು.ಇದನ್ನೂ ಓದಿ: ಕೊಡಗಿನಲ್ಲಿ ಅಕ್ರಮ ಗಣಿಗಾರಿಕೆ; ʻಪಬ್ಲಿಕ್ ಟಿವಿʼ ವರದಿ ಬೆನ್ನಲ್ಲೇ ಅಧಿಕಾರಿಗಳ ಭೇಟಿ!

