CinemaKarnatakaLatestMain PostSandalwood

ಇಂತಹ ವ್ಯಕ್ತಿ ಕಳ್ಕೊಂಡವರು ನತದೃಷ್ಟರು : ರಶ್ಮಿಕಾ ಮಂದಣ್ಣಗೆ ಟಾಂಗ್ ಕೊಟ್ಟರಾ ನಿರ್ದೇಶಕ ಸಂತೋಷ್ ಆನಂದ್ ರಾಮ್?

ಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾ ನೋಡಿರುವ ‘ರಾಜಕುಮಾರ’ ಸಿನಿಮಾ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್, ಈ ಸಿನಿಮಾದ ನಿರ್ದೇಶಕರಿಗೆ ಪೋಸ್ಟ್ ಕಾರ್ಡ್ ನಲ್ಲಿ ಪತ್ರ ಬರೆದಿದ್ದಾರೆ. ಅದನ್ನು ನಿರ್ದೇಶಕ ಕಿರಣ್ ರಾಜ್ ಅವರ ಮನೆಗೆ ಪೋಸ್ಟ್ ಮಾಡಿರುವ ಅವರು, ರಕ್ಷಿತ್ ಶೆಟ್ಟಿ ಅವರನ್ನು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ : Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

ಐವತ್ತು ಪೈಸೆಯ ಅಂಚೆ ಕಾರ್ಡಿನಲ್ಲಿ ಬರೆದ ಸಾಲುಗಳಲ್ಲಿ ‘ಮನುಷ್ಯನಲ್ಲಿರುವ ಮನುಷ್ಯತ್ವವನ್ನು ಅರ್ಥ ಮಾಡಿಸುವ ಚಿತ್ರ ಚಾರ್ಲಿ. ರಕ್ಷಿತ್ ಶೆಟ್ಟಿ ಶ್ರೇಷ್ಠವಾದ ಮಾನವೀಯತೆಯನ್ನು ಮೆರೆದಿದ್ದಾರೆ. ನೈಜ ಬದುಕಿನಲ್ಲಿ ಅಂಥ ವ್ಯಕ್ತಿಯಾಗಿದ್ದರೆ ಮಾತ್ರ ಮೂರು ವರ್ಷ ಕಾದು ಈ ಚಿತ್ರವನ್ನು ತೆರೆಯ ಮೇಲೆ ತರುವುದಕ್ಕೆ ಸಾಧ್ಯ. ಇಂತಹ ವ್ಯಕ್ತಿಯನ್ನು ಕಳೆದುಕೊಂಡವರು ನತದೃಷ್ಟರು’ ಎಂದು ಪರೋಕ್ಷವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಟಾಂಗ್ ಕೊಟ್ಟ ರೀತಿಯಲ್ಲಿ ಪತ್ರ ಮುಗಿಸಿದ್ದಾರೆ ಸಂತೋಷ್ ಆನಂದ್ ರಾಮ್.

ಈ ಪತ್ರವನ್ನು ಬರೆದು ಪೋಸ್ಟ್ ಮಾಡಿದ್ದಲ್ಲದೇ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಈ ಮಾತನ್ನು ನೇರವಾಗಿ ಹೇಳದೇ ಇದ್ದರೂ, ಕಾಮೆಂಟ್ ಬಾಕ್ಸ್‌ನಲ್ಲಿ ಮಾತ್ರ ಆ ನಟಿಯ ಹೆಸರೇ ಕೇಳಿ ಬಂದಿದೆ.

Leave a Reply

Your email address will not be published.

Back to top button