ಶಿವಮೊಗ್ಗ: ಸಾವರ್ಕರ್ ಫೋಟೋ ವಿವಾದದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಚಾಕು ಇರಿತದಿಂದ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್ ಸಿಂಗ್ ಆರೋಗ್ಯವನ್ನು ಸಂತೋಷ್ ಗುರೂಜಿ ವಿಚಾರಿಸಿದ್ದಾರೆ.
Advertisement
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದೂ ಯುವಕರು ಇನ್ನು ಮುಂದೆ ವೆಪನ್ ಗಳನ್ನು ಇಟ್ಟುಕೊಂಡು ಓಡಾಡಬೇಕು. ಶಿವಮೊಗ್ಗದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಮಂಗಳೂರು ಮಾದರಿಯನ್ನು ಶಿವಮೊಗ್ಗ ಯುವಕರು ಅನುಸರಿಸಬೇಕಿದೆ ಎಂದರು. ಇದನ್ನೂ ಓದಿ: ಸಾವರ್ಕರ್ ಪೋಸ್ಟರ್ ವಿವಾದ – ನಾಲ್ವರು ಅರೆಸ್ಟ್
Advertisement
Advertisement
ಬಾವುಟ ಕಟ್ಟೋದು, ಪ್ಲೆಕ್ಸ್ ಹಾಕುವುದು ನಂತರ ಸಾಯೋದು ತಪ್ಪಬೇಕಿದೆ. ಆತ್ಮ ರಕ್ಷಣೆಗಾಗಿ ಸರ್ಕಾರಗಳನ್ನು ಕಾಯುವುದು ತರವಲ್ಲ. ಆತ್ಮರಕ್ಷಣೆ ಮಾಡಿಕೊಳ್ಳಬಹುದು ಎಂದು ಸಂವಿಧಾನವೇ ಹೇಳಿದೆ. ಯಾವುದೇ ಸರ್ಕಾರವಾದ್ರು ಹಿಂದೂಗಳ ರಕ್ಷಣೆ ಮಾಡುವವರನ್ನು ಬೆಂಬಲಿಸಿ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.
Advertisement
ಈ ಪ್ರಕರಣದಲ್ಲಿ ಶಿವಮೊಗ್ಗದ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ದಕ್ಷ ಎಸ್‍ಪಿ ಮತ್ತು ಡಿಸಿ ಶಿವಮೊಗ್ಗ ಜಿಲ್ಲೆಯಲ್ಲಿದ್ದಾರೆ. ಹಿಂದೂಗಳು ಅನಿವಾರ್ಯವಾಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಓಡಾಟ ಮಾಡುವುದು ಅನಿವಾರ್ಯ. ಶಿವಮೊಗ್ಗದಲ್ಲಿ ಮುಂದೆ 10 ವರ್ಷದ ನಂತರ ಹಿಂದೂಗಳ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಅವರು ಭವಿಷ್ಯ ನುಡಿದರು.