ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ವಾರಗಳು ಕಳೆಯುತ್ತಿದ್ದರೂ ಅವರ ನೆನಪು ಮಾತ್ರ ಇನ್ನು ಹಸಿಯಾಗಿಯೇ ಇದೆ. ಈ ಹಿನ್ನೆಲೆ ಅಭಿಮಾನಿಯೊಬ್ಬರು ನಿರ್ದೇಶಕ ಸಂತೋಷ್ ಆನಂದ್‍ರಾಮ್ ಅವರನ್ನು ಅಪ್ಪು ಬಯೋಪಿಕ್ ತೆಗೆಯುವಂತೆ ಮನವಿ ಮಾಡಿಕೊಂಡಿದ್ದು, ರಾಮ್ ಅದಕ್ಕೆ ಒಪ್ಪಿಕೊಂಡಿದ್ದಾರೆ.
ಅಪ್ಪು ಜೊತೆ ಸಂತೋಷ್ ಆನಂದ್‍ರಾಮ್ ಅವರು ಕೆಲಸ ಮಾಡಿ ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ. ಇವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯವಿದೆ. ಈ ಪರಿಣಾಮ ರಾಮ್ ಅವರು, ನಿಮ್ಮಲ್ಲಿ ಇದ್ದಂತಹ ನಿಷ್ಕಲ್ಮಶ ಮನಸ್ಸು ಮಗುವಿನಷ್ಟೇ ಚಂದ. ನಿಮ್ಮ ನಗುವಿನಲ್ಲಿ ಯಾವುದೇ ರೀತಿಯ ಅಹಂ ಇಲ್ಲ. ಅದಕ್ಕೆ ನೀವು ನಿಮ್ಮನ್ನು ಇಷ್ಟಪಡುವ ಎಲ್ಲ ಮಕ್ಕಳಲ್ಲೂ ಇದ್ದಿರಾ. ನೀವು ಇಲ್ಲ ಎಂದು ನಾನು ಎಂದೂ ಸಹ ಭಾವಿಸುವುದಿಲ್ಲ. ನಿಮಗೆ ಸಂಬಂಧ ಪಟ್ಟ ಪ್ರತಿ ಪೋಸ್ಟ್ ನಲ್ಲೂ ನಿಮ್ಮನ್ನು ಟ್ಯಾಗ್ ಮಾಡುತ್ತೇನೆ. ನೀವು ನನಗೆ ಸದಾ ಜೀವಂತ ಎಂದು ಬರೆದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್
I’ll try my level best to bring this idea on screen ???? #appusirliveson https://t.co/ivcPkm7HyF
— Santhosh Ananddram (@SanthoshAnand15) November 21, 2021
ಈ ಸಾಲುಗಳನ್ನು ನೋಡಿದ ಅಪ್ಪು ಅಭಿಮಾನಿಗಳು ರಾಮ್ ಅವರಿಗೆ ಅಪ್ಪುಗೊಸ್ಕರ ಒಂದು ಒಯೋಪಿಕ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಉತ್ಸಾಹದಿಂದ ಆನಂದ್‍ರಾಮ್ ಅವರು, ನಾನು ಅವರ ಬಗ್ಗೆ ತೆರೆ ಮೇಲೆ ತರಲು ನನ್ನ ಕೈಯಲ್ಲಿ ಆದಷ್ಟು ಪ್ರಯತ್ನ ಮಾಡುತ್ತೇನೆ ಎಂದು ರಿಪ್ಲೈ ಮಾಡಿದ್ದಾರೆ.
1000% pakka ???? https://t.co/fyeMqkSAS2
— Santhosh Ananddram (@SanthoshAnand15) November 20, 2021
ಅದು ಅಲ್ಲದೇ ಅಭಿಮಾನಿ, ಅಪ್ಪು ಸರ್‍ಗೋಸ್ಕರ ಪ್ರತಿ ವರ್ಷ ಒಂದು ಹಾಡನ್ನು ಮಾಡಿ. ಅದು ನಮಗೆ ಪ್ರಾರ್ಥನೆ ಆಗಿರುತ್ತೆ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ರಾಮ್ ಅವರು, 1000% ಪಕ್ಕ ಎಂದು ರಿಪ್ಲೈ ಮಾಡಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಪತಿ ಪತ್ನಿಯ ಹುಟ್ಟುಹಬ್ಬ ಮರೆತರೆ ಜೈಲೇ ಗತಿ!