BollywoodCinemaDistrictsKarnatakaLatestMain Post

ಹಿಂದಿ ಬದಲು ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ: ಕಂಗನಾ ರಣಾವತ್

ನಿನ್ನೆಯಷ್ಟೇ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಹೆಚ್ಚು ಟ್ರೋಲ್ ಆಗಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್, ಇವತ್ತು ರಾಷ್ಟ್ರ ಭಾಷೆಯ ಕಾರಣಕ್ಕಾಗಿ ಮತ್ತೆ ಸುದ್ದಿಯಾಗಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ‘ಹಿಂದಿ ರಾಷ್ಟ್ರ ಭಾಷೆ’ ಎಂದು ಹೇಳಿ ಕನ್ನಡಿಗರ ಎದೆಯಲ್ಲಿ ರೋಷಾಗ್ನಿ ಹೆಚ್ಚಿಸಿದ್ದರು. ಕಂಗನಾ ಕೂಡ ಅಜಯ್ ದೇವಗನ್ ಮಾತಿಗೆ ಅನುಮೋದನೆ ನೀಡುವುದಷ್ಟೇ ಅಲ್ಲ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇದನ್ನೂ ಓದಿ : ಕಂಗನಾ ರಣಾವತ್ ಏನಿದು ಅವತಾರ ಎಂದ ನೆಟ್ಟಿಗರು

ಹಿಂದಿ ರಾಷ್ಟ್ರ ಭಾಷೆ ಎಂದು ಅಜಯ್ ದೇವಗನ್ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ನಾವು ಇನ್ನೂ ಆಳವಾಗಿ ಯೋಚಿಸಬೇಕಿದೆ. ಹಿಂದಿ, ಫ್ರೆಂಚ್ ಸೇರಿದಂತೆ ಹಲವು ಭಾಷೆಗಳ ಉಗಮಕ್ಕೆ ಸಂಸ್ಕೃತ ಕಾರಣ. ಹಾಗಾಗಿ ಸಂಸ್ಕೃತ ಭಾಷೆಯನ್ನೇ ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕು. ಕಡ್ಡಾಯವಾಗಿ ಅದನ್ನು ಶಾಲೆಯಲ್ಲಿ ಕಲಿಸಬೇಕು ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ. ಇದನ್ನೂ ಓದಿ : ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ

ಇಂಗ್ಲಿಷ್ ಅನ್ನು ಸಂಪರ್ಕ ಭಾಷೆಯನ್ನಾಗಿ ಪರಿಗಣಿಸಬೇಕು ಎಂದು ಹೇಳುತ್ತಾರೆ. ಅದರ ಅಗತ್ಯವಿಲ್ಲ. ಪ್ರಾದೇಶಿಕ ಭಾಷೆಗಳನ್ನೇಕೆ ಸಂಪರ್ಕ ಭಾಷೆಯನ್ನಾಗಿ ಇಟ್ಟುಕೊಳ್ಳುಬಾರದು ಎಂದು ಹೇಳುವ ಮೂಲಕ ಪ್ರಾದೇಶಿಕ ಭಾಷೆಗಳು ರಾಷ್ಟ್ರ ಭಾಷೆಯಾಗಲು ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

ತಮ್ಮ ಮಾತುಗಳ ಮೂಲಕ ಅಜಯ್ ದೇವಗನ್ ಅವರ ಮಾತನ್ನು ಸಮರ್ಥಿಸಿಕೊಂಡಿರುವ ಕಂಗನಾ ವಿರುದ್ಧ ಕನ್ನಡಿಗರು ಕೆರಳಿದ್ದಾರೆ. ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಅವರು ಮಾತುಗಳಿಗೆ ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published.

Back to top button