LatestNational

ಮನೆ ಮನೆಗಳಲ್ಲಿಯೇ ಸಮಾಧಿ-ಸತ್ತವರೊಂದಿಗೆ ಜನರ ವಾಸ

ಲಕ್ನೋ: ಉತ್ತರ ಪ್ರದೇಶದಲ್ಲಿ ಗ್ರಾಮವೊಂದರಲ್ಲಿ ಮುಸ್ಲಿಂ ಕುಟುಂಬಗಳು ಸತ್ತವರನ್ನು ತಮ್ಮ ಮನೆ ಮನೆಗಳಲ್ಲಿಯೇ ಸಮಾಧಿ ಮಾಡಿಕೊಳ್ಳುತ್ತಿದ್ದಾರೆ.

ಹೌದು. ಉತ್ತರ ಪ್ರದೇಶ ರಾಜ್ಯದ ಆಗ್ರಾ-ಜೈಪುರ ಹೆದ್ದಾರಿಯ ಆಗ್ರಾದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಅಚ್ನೇರಾ ಬ್ಲಾಕ್‍ನ ಕುರಾಲಿ ತೆಹ್‍ಸಿಲ್‍ಯಲ್ಲಿನ ಚಹ್ ಪೋಕರ್ ಎಂಬ ಗ್ರಾಮದಲ್ಲಿ ಸುಮಾರು 50 ಮುಸ್ಲಿಂ ಕುಟುಂಬಗಳಿವೆ. ಅವರೆಲ್ಲರೂ ತಮ್ಮ ಕುಟುಂಬಸ್ಥರು ಯಾರದರೂ ಸತ್ತರೆ ಅವರನ್ನು ತಮ್ಮ ಮನೆಯಲ್ಲಿಯೆ ಸಮಾಧಿ ಮಾಡುವುದನ್ನು ರೂಡಿಸಿಕೊಂಡು ಬಂದಿದ್ದಾರಂತೆ. ಇದು ಯಾವುದೇ ಪದ್ಧತಿಯಲ್ಲ, ಬಲವಂತ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದಲ್ಲಿರುವ 50 ಮುಸ್ಲಿಂ ಮನೆಗಳಲ್ಲಿ ಸುಮಾರು 300 ಜನಸಂಖ್ಯೆ ಹೊಂದಿದೆ. ಆದರೆ ಅವರಿಗೆ ಖಾಯಂ ಸ್ಮಶಾನ ಭೂಮಿ ಇಲ್ಲ. ಸ್ಮಶಾನ ಭೂಮಿಯ ಕೊರತೆಯಿರುವುದರಿಂದ ಯಾರೇ ಸತ್ತರೂ ಕುಟುಂಬದವರು ಅವರನ್ನು ಅವರ ಮನೆಯಲ್ಲಿಯೇ ಸಮಾಧಿ ಮಾಡುತ್ತಾರೆ. ಇಲ್ಲಿರುವ ಬಹುಪಾಲು ಮುಸ್ಲಿಮರು ಸ್ವಂತ ಭೂಮಿ ಇರದ ಕೂಲಿ ಕೆಲಸ ಮಾಡುವ ಕಡುಬಡವರು. ತಮ್ಮದೇ ಭೂಮಿ ಅಥವಾ ಜಮೀನು ಹೊಂದಿರುವವರು ತಮ್ಮ ಜಮೀನಿನಲ್ಲಿ ಸಮಾಧಿ ಮಾಡಬಹುದು.

ಮಾಧ್ಯಮಗಳೊಂದಿಗೆ ಮಾತನಾಡಿದ ರಿಂಕಿ ಬೇಗಂ, ವಿಪರೀತ ಜ್ವರದಿಂದ ಸತ್ತ ನನ್ನ 10 ತಿಂಗಳ ಮಗುವಿನಿಂದ ಹಿಡಿದು ನಮ್ಮ ಕುಟುಂಬದ ಐವರನ್ನು ನಾವು ಹಿತ್ತಲಿನಲ್ಲಿ ಸಮಾಧಿಮಾಡಿದ್ದೇವೆ ಎಂದರು.

ಗುಡ್ಡಿ ಎಂಬವರ ಮಾತನಾಡಿ, ನಮ್ಮಂತಹ ಬಡವರಿಗೆ ಸಾವಿಗೆ ಬೆಲೆಯಿಲ್ಲ. ಮನೆಯಲ್ಲಿ ಜಾಗದ ಕೊರತೆಯಿಂದ ಸತ್ತವರ ಸಮಾಧಿ ಮೇಲೆಯೇ ದಿನನಿತ್ಯ ಓಡಾಡುತ್ತೇವೆ ಹಾಗೂ ಅದರ ಮೇಲೆ ಕೂರುತ್ತೇವೆ ಎಂದು ಹೇಳುತ್ತಾರೆ.

ಅಡುಗೆ ಕೋಣೆಗಳಲ್ಲಿ, ಕೊಠಡಿಗಳಲ್ಲಿ, ಅಂಗಳದಲ್ಲಿ, ಮನೆಯ ಇಕ್ಕೆಲಗಳಲ್ಲಿ ಹಾಗೂ ಹಿತ್ತಲಿನಲ್ಲಿ ನಿರ್ಮಿಸಿರುವ ಸಮಾಧಿಗಳಲ್ಲಿ ಶವಗಳು ಕೊಳೆಯುವಾಗ ಉಂಟಾಗುವ ದುರ್ವಾಸನೆ ಹಾಗೂ ಮಾಲಿನ್ಯತೆಯನ್ನು ಸಹಿಸಿಕೊಳ್ಳಲೇಬೇಕಾಗುತ್ತದೆ. ಜೊತೆಗೆ ಇದರಿಂದ ಮಾನಸಿಕ ಆಘಾತಗಳು ಕೂಡ ಕಾಡುತ್ತವೆ. ಪಕ್ಕದ ಊರಿನ ಮುಸ್ಲಿಂರು ಈ ಗ್ರಾಮಕ್ಕೆ ಕಾಲಿಡುವುದನ್ನೆ ಬಿಟ್ಟಿದ್ದಾರೆ. ಮಳೆಗಾಲದಲ್ಲಿ ಈ ಸಮಾಧಿಯಲ್ಲಿನ ಅವಶೇಷಗಳು ಹೊರಬರುವ ಸಾಧ್ಯತೆಗಳೂ ಇರುತ್ತವೆ.

ಮುನೀಮ್ ಖಾನ್ ಮಾತನಾಡಿ, ನಮ್ಮ ಪೂರ್ವಜರಿಗಾಗಿ ಸ್ವಲ್ಪ ಜಾಗ ಕೊಡಿ ಎಂದು ನಾವು ಕೇಳಿಕೊಂಡಿದ್ದೇವೆ. ಹಿಂದುಗಳಿಗೆ ಸ್ಮಶಾನ ಜಾಗವಿದೆ ಆದರೆ ನಾವು ಸಮಾಧಿಯೊಂದಿಗೆ ವಾಸಿಸುತ್ತಿದ್ದೇವೆ ಎನ್ನುತ್ತಾರೆ.

ಈ ಹಿಂದೆ ಹಳ್ಳಿಗರ ಸಮಾಧಿಗಾಗಿ ಕೆರೆ ಇರುವ ಸ್ಥಳವನ್ನು ಆಡಳಿತ ಮಂಡಳಿ ನೀಡಿತ್ತು. ಆದರೆ ಆ ಕೆರೆಯನ್ನು ತೆರವುಗೊಳಿಸಿ ಅಲ್ಲಿ ಸಮಾಧಿಗೆ ಭೂಮಿಯನ್ನು ಸಿದ್ಧಪಡಿಸುವುದು ದುಬರಿ ಕೆಲಸವಾದುದರಿಂದ ಹೊಸ ಜಾಗವನ್ನು ಗುರುತಿಸುವುದಾಗಿ ಸರ್ಕಾರ ಹೇಳಿದೆ.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Leave a Reply

Your email address will not be published.

Back to top button