ಬೆಂಗಳೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಭರ್ಜರಿಯಾಗಿ ಸಜ್ಜುಗೊಂಡಿದೆ. ನೀವೇನಾದರೂ ಹಬ್ಬವನ್ನು ಇನ್ನಷ್ಟು ಜೋಶ್ ಆಗಿ ಆಚರಿಸಬೇಕು ಅನ್ಕೊಂಡಿದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದಂತೂ ಗ್ಯಾರಂಟಿ.
ಹಬ್ಬ ಜೋರಾಗಿ ಮಾಡೋಣವೆಂದು ಸಾಮಾನು ಖರೀದಿಸಲು ಮಾರುಕಟ್ಟೆಗೆ ಹೋದರೆ ನಿಮಗೆ ಶಾಕ್ ಆಗುತ್ತದೆ. ಯಾಕಂದ್ರೆ ಕಳೆದ ವರ್ಷಕ್ಕಿಂತ ಈ ವರ್ಷ ಮಾರುಕಟ್ಟೆಯಲ್ಲಿ ಸಂಕ್ರಾತಿ ಹಬ್ಬಕ್ಕೆ ಬೇಕಾದ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆ ಮಧ್ಯೆಯೇ ಗಾಂಧಿಬಜಾರ್, ಮಲ್ಲೇಶ್ವರಂ, ಯಶವಂತಪುರ ಹಾಗೂ ಕೆ.ಆರ್.ಮಾರ್ಕೆಟ್‍ನಲ್ಲಿ ಸಂಕ್ರಾಂತಿ ಹಬ್ಬದ ವ್ಯಾಪಾರ ಜೋರಾಗಿದೆ.
Advertisement
Advertisement
ಹಬ್ಬದ ವಸ್ತುಗಳ ದರ:
ಕೊಬ್ಬರಿ ಕೆ.ಜಿಗೆ ಬರೋಬ್ಬರಿ 500 ರೂ. ಆಗಿದೆ. ಇತ್ತ ಸಕ್ಕರೆ ಅಚ್ಚು ಕೂಡ 200 ರೂ. ಆಗಿದೆ. ಹಬ್ಬ ಅಂದರೆ ಎಳ್ಳು-ಬೆಲ್ಲ ಮಾಡಬೇಕು. ಆದರೆ ಮಿಕ್ಸೆಡ್ ಎಳ್ಳು ಕೆ.ಜಿಗೆ 240 ರೂ. ಏರಿಕೆ ಆಗಿದೆ. ಬರಿ ಎಳ್ಳುಗೆ 360 ರೂ., ಬೆಲ್ಲ ನೋಡುವುದಾದರೆ 140 ರೂ. ಹಾಗೂ ಜೋಡಿ ಕಬ್ಬು 150 ರಿಂದ 200 ರೂ. ದುಬಾರಿಯಾಗಿದೆ.
Advertisement
ಹೂವುಗಳ ದರ:
ಪ್ರತಿ ಹಬ್ಬಕ್ಕೂ ಮೆರುಗು ಕೊಡುವುದೇ ಹೂ, ಆದರೆ ಮಾರುಕಟ್ಟೆಯಲ್ಲಿ ಹೂಗಳ ದರ ಆಕಾಶದಷ್ಟು ಏರಿಕೆ ಆಗಿದೆ. ಒಂದು ಕೆ.ಜಿ ಗುಲಾಬಿಗೆ 350 ರೂ., ಮಲ್ಲಿಗೆ 320 ರೂ., ಸೇವಂತಿ 330 ರೂ. ಹಾಗೂ ಸುಗಂಧರಾಜ 300 ರೂ. ಆಗಿದೆ.
Advertisement
ಹಣ್ಣುಗಳ ರೇಟ್:
ಹಬ್ಬಕ್ಕೆ ಹಣ್ಣುಗಳು ಬೇಕೆಬೇಕು. ಆದರೆ ಕೆ.ಜಿ ಬಾಳೆಹಣ್ಣಿಗೆ 100 ರೂ., ದ್ರಾಕ್ಷಿ 250 ರೂ., ದಾಳಿಂಬೆ 220 ರೂ. ಮತ್ತು ಸೇಬು 200 ರೂ. ದುಬಾರಿ ಆಗಿದೆ.
ಪ್ರತಿ ವರ್ಷವೂ ನಾವು ಹಬ್ಬವನ್ನು ಅದ್ಧೂರಿಯಾಗಿ ಮಾಡುತ್ತೇವೆ. ಹಬ್ಬಕ್ಕಾಗಿ ಬೇಕಾದ ಹಣ್ಣು, ಹೂ, ವಸ್ತುಗಳು ಎಲ್ಲವನ್ನು ಖರೀದಿಸಬೇಕು. ಇದ್ಯಾವುದೂ ಇಲ್ಲದೆ ಹಬ್ಬ ಮಾಡುವುದೇ ಕಷ್ಟವಾಗುತ್ತದೆ. ಇದು ವರ್ಷದಲ್ಲಿ ಮೊದಲ ಹಬ್ಬವಾಗಿದ್ದು, ಈ ಹಬ್ಬವನ್ನು ಸಂತೋಷದಿಂದ ಬರ ಮಾಡಿಕೊಳ್ಳೋಣ ಎಂದರೆ ಹಬ್ಬದ ವಸ್ತುಗಳೇ ಇಷ್ಟು ದುಬಾರಿಯಾದರೆ ನಾವು ಹಬ್ಬ ಮಾಡುವುದು ಹೇಗೆ ಎಂದು ಕಂಗಾಲಾಗಿರುವುದಾಗಿ ಗೃಹಿಣಿಯರು ಹೇಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv