ಬೆಂಗಳೂರು: ಚಾರಣಿಗರ ಸ್ವರ್ಗ, ದಕ್ಷಿಣ ಕಾಶಿ ಶಿವಗಂಗೆಯ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ತೀರ್ಥೋದ್ಭವ ಉತ್ಪತ್ತಿಯಾಗಿ ಕುತೂಹಲ ಮೂಡಿಸಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆಯ ಬೆಟ್ಟದ ತುತ್ತತುದಿಯಲ್ಲಿ ಬೆಳಗಿನ ಜಾವ ಸೂರ್ಯೋದಯಕ್ಕೂ ಮೊದಲು 5.19ಕ್ಕೆ ತೀರ್ಥ ಕಂಬದ ಬಳಿ ತೀರ್ಥೋದ್ಭವಾಗಿದೆ. ಇದನ್ನು ಕಣ್ತುಂಬಿಕೊಂಡ ಭಕ್ತರು ಸಂತೋಷಪಟ್ಟರು.
ತೀರ್ಥೋಧ್ಬವ ನಂತರ ಗಂಗೆಯನ್ನು ತಂದು ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 6.30 ರಿಂದ 7.00 ಗಂಟೆಗೆ ಸಲ್ಲುವ ಮಕರ ಲಗ್ನದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ನಡೆಯಿತು.
ನೂರಾರು ಭಕ್ತರ ಸಮ್ಮುಖದಲ್ಲಿ ಗಿರಿಜೆ ಸಮೇತ ಗಂಗಾಧರೇಶ್ವರ ಸ್ವಾಮಿಯ ಕಲ್ಯಾಣ ಅದ್ಧೂರಿಯಾಗಿ ನೆರವೇರಿತು. ಈ ಬೆಟ್ಟ ಸಮುದ್ರ ಮಟ್ಟದಿಂದ 4,577 ಅಡಿ ಎತ್ತರವಿರುವ ಗಿರಿ ಶಿಖರದಲ್ಲಿ ಇಂದು ಗಂಗೋತ್ಪತ್ತಿಯಾಗಿ ಕೌತುಕ ನಡೆದಿದೆ.