ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ (Jamia Masjid) ವಿವಾದ ಸದ್ಯ ತಣ್ಣಗೆ ಆಗುವಂತೆ ಕಾಣುತ್ತಿಲ್ಲ. ಪ್ರತಿ ವರ್ಷದ ರೀತಿ ಈ ಬಾರಿಯೂ ಸಹ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ (AanjaneyaSwami Temple) ಪುನರ್ ಪ್ರತಿಷ್ಠಾಪನೆಗೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯಿಂದ ಇಂದು ಬೃಹತ್ ಸಂಕೀರ್ತನಾ ಯಾತ್ರೆ ಜರುಗಲಿದೆ.
Advertisement
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಸದ್ಯ ಹೈಕೋರ್ಟ್ ಅಂಗಳದಲ್ಲಿ ಇದ್ರಯ ಸಹ ಪ್ರತಿ ವರ್ಷದ ರೀತಿ ಹಿಂದೂ ಜಾಗರಣ ವೇದಿಕೆ ಭಾನುವಾರ ಹನುಮ ಮಾಲಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ನಡೆಸಲು ಸಿದ್ಧತೆಯನ್ನು ಮಾಡಿಕೊಂಡಿದೆ. ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಹೊಡೆದು ಟಿಪ್ಪು ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಮತ್ತೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಮರು ಪ್ರತಿಷ್ಠಪನೆಯಾಗಬೇಕೆಂದು ಹಲವು ವರ್ಷಗಳಿಂದ ಹಿಂದೂ ಜಾಗರಣ ವೇದಿಕೆ ಈ ಸಂಕೀರ್ತನಾ ಯಾತ್ರೆಯನ್ನೂ ಮಾಡಿಕೊಂಡು ಬಂದಿದೆ. ಅದೇ ರೀತಿ ಭಾನುವಾರ ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆಯನ್ನು ನಡೆಸಲು ನಿರ್ಧಾರ ಮಾಡಿದ್ದು, ಈ ಕುರಿತು ಸಿದ್ಧತೆಗಳು ಭರ್ಜರಿಯಾಗಿ ಜರುಗುತ್ತಿವೆ. ಇಡೀ ಶ್ರೀರಂಗಪಟ್ಟಣ ಕೇಸರಿ ಮಯದಿಂದ ಕಂಗೊಳಿಸುತ್ತಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ವೇದ ಟೀಸರ್ ಬಿಡುಗಡೆ – ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು
Advertisement
Advertisement
ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದಿಂದ ರಂಗನಾಥಸ್ವಾಮಿ ದೇವಸ್ಥಾನದವರೆಗೆ ಈ ಸಂಕೀರ್ತನಾ ಯಾತ್ರೆಯ ಮೆರವಣಿಗೆ ಜರುಗಲಿದೆ. ಪ್ರತಿ ವರ್ಷ ಈ ಯಾತ್ರೆಯಲ್ಲಿ ಮೂರರಿಂದ ಐದು ಸಾವಿರ ಮಂದಿ ಹನುಮ ಮಾಲಾಧಾರಿಗಳು ಭಾಗಿಯಾಗುತ್ತಿದ್ದರು. ಆದರೆ ಈ ಬಾರಿ ಒಂದು ಲಕ್ಷ ಮಂದಿ ಹನುಮ ಮಾಲಾಧಾರಿಗಳನ್ನು ಸೇರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಸಂಕೀರ್ತನಾ ಯಾತ್ರೆಯನ್ನು ಹಿಂದೂ ಜಾಗರಣ ವೇದಿಕೆ ಮಾಡುತ್ತಿದ್ರು ಸಹ, ಹಿಂದೂ ಸಂಘಟನೆಗಳಿಗೆ ಬಲ ತುಂಬಲು ಬಿಜೆಪಿ ಮುಂದಾಗಿದೆ. ಹೀಗಾಗಿ ಮಂಡ್ಯದ ಪ್ರತಿ ಕ್ಷೇತ್ರದಿಂದ 8 ರಿಂದ 10 ಸಾವಿರ ಮಂದಿ ಹನುಮ ಮಾಲಾಧಾರಿಗಳನ್ನು ಕರೆತರಲು ನಿರ್ಧಾರ ಮಾಡಿದೆ. ಮಂಡ್ಯ ಮಾತ್ರವಲ್ಲದೇ ಅಕ್ಕ-ಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಮಂದಿ ಹನುಮ ಮಾಲಾಧಾರಿಗಳು ಭಾಗಿಯಾಗುವ ಸಾಧ್ಯತೆ ಇದೆ.
Advertisement
ನಾಳೆ ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ ಇರುವ ಕಾರಣ ಇಡೀ ಪಟ್ಟಣದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮಂಡ್ಯ ಎಸ್ಪಿ ಯತೀಶ್ ನೇತೃತ್ವದಲ್ಲಿ 7 ಮಂದಿ ಡಿವೈಎಸ್‍ಪಿ, 15 ಮಂದಿ ಸಿಪಿಐ, ,9 ಡಿಎಆರ್ ಹಾಗೂ 6 ಕೆಎಸ್‍ಆರ್ ಪಿ ತುಕಡಿ ಸೇರಿದಂತೆ 1500 ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದಲ್ಲದೇ ಎರಡು ಡ್ರೋಣ್ ಕ್ಯಾಮೆರಾ, 20 ಮೂವಿಂಗ್ ಕ್ಯಾಮೆರಾ, ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಹಾಕಲಾಗಿದೆ.
ಒಟ್ಟಾರೆ ಜಾಮಿಯಾ ಮಸೀದಿಯ ವಿವಾದ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಂಕೀರ್ತನಾ ಯಾತ್ರೆಯ ಮೂಲಕ ಹಿಂದೂ ಸಂಘಟನೆಗಳು ಜಾಮಿಯಾ ಮಸೀದಿಯಲ್ಲಾ ಮಂದಿರ ಎಂದು ಸಾರಲು ಹೊರಟಿದ್ದು, ನಾಳೆ ಒಂದು ಲಕ್ಷ ಮಂದಿ ಹನುಮ ಭಕ್ತರ ಈ ಸಂಕೀರ್ತನಾ ಯಾತ್ರೆ ಹೇಗೆ ಇರುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.