ಚಿಕ್ಕೋಡಿ: ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಇತ್ತೀಚಿಗೆ ಜರುಗಿದ ಮನೆಕಳ್ಳತನ ಪ್ರಕರಣ ದಾಖಲಿಸಿಕೊಂಡ 24 ಗಂಟೆಯೊಳಗಾಗಿ ಆರೋಪಿಯನ್ನು ಪತ್ತೆ ಹಚ್ಚಿ ಆರೋಪಿತನಿಂದ 5.3 ಲಕ್ಷ ಮೊತ್ತದ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಸಂಕೇಶ್ವರ ಪೊಲೀಸರು (Police) ಯಶಸ್ವಿಯಾಗಿದ್ದಾರೆ.
ಹೆಬ್ಬಾಳ ಗ್ರಾಮದಲ್ಲಿ ಕಳ್ಳನೊಬ್ಬ ಮನೆಯಲ್ಲಿದ್ದ ಚಿನ್ನಾಭರಣ (Gold), ನಗದು (Money), ಬೈಕ್ (Bike) ಅನ್ನು ಕದ್ದೊಯ್ದಿದ್ದನು. ಈ ಬಗ್ಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿ.ಎಸ್.ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಡವನ್ನು ರಚನೆ ಮಾಡಿದ್ದಾರೆ. ಇದನ್ನೂ ಓದಿ: ‘ಸಿದ್ರಮುಲ್ಲಾ ಖಾನ್’ ಎಂದು ಕರೆದರೆ ಖುಷಿ ಪಡುವೆ: ಸಿದ್ದರಾಮಯ್ಯ
Advertisement
Advertisement
ತಂಡದಲ್ಲಿ ಸಿಪಿಐ ಪಿ. ಆರ್. ಚನ್ನಗಿರಿ, ಪಿ.ಎಸ್ಐ ಎಸ್.ಬಿ. ನಾಯಿಕವಾಡಿ ಮತ್ತು ಸಿಬ್ಬಂದಿಯವರಾದ ಬಿ.ಕೆ ನಾಗನೂರಿ , ಐ.ಬಿ. ಅಲಗರಾವತ , ಬಿ.ವಿ. ಹುಲಕುಂದ, ಮೆಹಬೂಬ ದಾದಾಮಕ, ಬಿ.ಟಿ. ಪಾಟೀಲ್, ಎಮ್.ಎಮ್. ಜಂಬಗಿ, ಚಿ.ಎಸ್. ಕಪರಟ್ಟಿ, ಮಹೇಶ್ ಕರಗುಪ್ಪಿ, ಯಾಶೀನ ನದಾಫ್ ಅವರನ್ನು ಒಳಗೊಂಡ ತಂಡ 24 ಗಂಟೆಯೊಳಗೆ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಯಿಂದ ಸುಮಾರು 85 ಗ್ರಾಂ ಬಂಗಾರದ ಆಭರಣ ಹಾಗೂ 4,500 ರೂ. ನಗದು ಮತ್ತು ಬೈಕ್ ಜೊತೆಗೆ 5,03,000 ರೂ. ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತ- ಸಿಪಿಐ, ಪತ್ನಿ ಸಾವು