ಖ್ಯಾತನಾಮರು ನಿಧನರಾದಾಗ ಅಥವಾ ಸುದ್ದಿಯಾದಾಗ ಅವರ ಮೇಲೆ ಸಿನಿಮಾ ಮಾಡುವ ಖಯಾಲಿಯನ್ನು ಸ್ಯಾಂಡಲ್ ವುಡ್ ನಲ್ಲಿ ಕೆಲವರು ಬೆಳೆಸಿಕೊಂಡಿದ್ದಾರೆ. ಆದರೆ, ಆ ಸಿನಿಮಾಗಳು ಈವರೆಗೂ ಆಗಿಲ್ಲ. ಆದರೂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆ ನೋಂದಾಯಿಸಲಾಗುತ್ತದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು
Advertisement
ಈ ಹಿಂದೆ ಭೂಗತ ಪಾತಕಿ, ಸುಪಾರಿ ಕಿಲ್ಲರ್ ಗುಂಡಿಗೆ ತಲೆಯೊಡ್ಡಿದ್ದ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯ ಪಿ.ಎಸ್.ಐ ಮಲ್ಲಿಕಾರ್ಜುನ್ ಬಂಡೆ ಅವರ ಮೇಲೆ ಸಿನಿಮಾ ಮಾಡಲು ಮೂವರು ರೆಡಿಯಾಗಿದ್ದರು. ಮೂರು ಟೈಟಲ್ ಗಳು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಆದವು. ಅದು ಈವರೆಗೂ ಸುದ್ದಿಯಿಲ್ಲ. ಐಎಎಸ್ ಅಧಿಕಾರಿ ಡಿ.ಕೆ ರವಿ ನಿಧನರಾದಾಗಲೂ ಅವರ ಬಗ್ಗೆ ಸಿನಿಮಾ ಮಾಡಲು ಹಲವರು ಮುಂದಾದರು. ವಾಣಿಜ್ಯ ಮಂಡಳಿಯು ಡಿ.ಕೆ. ರವಿ ಹೆಸರಿನಲ್ಲಿ ಶೀರ್ಷಿಕೆ ಕೊಡದೇ ಇದ್ದರೂ ಬೇರೆ ಬೇರೆ ಹೆಸರಿನಲ್ಲಿ ಟೈಟಲ್ ರೆಜಿಸ್ಟರ್ ಆಯಿತು. ಆ ಸಿನಿಮಾಗಳು ಈವರೆಗೂ ಸೆಟ್ಟೇರಿಲ್ಲ. ಐ.ಪಿ.ಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಾಗ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡುತ್ತೇನೆ ಎಂದು ಬಂದರು. ಅದು ಕೂಡ ಈವರೆಗೂ ಆಗಲಿಲ್ಲ. ಹೀಗೆ ಇಂತಹ ಘಟನೆಗಳು ನಡೆದಾಗೆಲ್ಲ ಸಿನಿಮಾ ಮಾಡುವ ಇಂಗಿತವನ್ನು ಕೆಲವರು ವ್ಯಕ್ತ ಪಡಿಸುತ್ತಾರೆ, ಕಾವು ಆರಿದ ನಂತರ ಸುಮ್ಮನಾಗುತ್ತಾರೆ. ಇದೀಗ 45ನೇ ವಯಸ್ಸಿಗೆ 25ರ ಹರೆಯದ ಹುಡುಗಿಯನ್ನು ಮದುವೆಯಾಗಿ ನೆನ್ನೆಯಷ್ಟೇ ನೇಣಿಗೆ ಕೊರಳೊಡ್ಡಿರುವ ಶಂಕರಣ್ಣನ ಬಗ್ಗೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಗಿರಿಕಿ ಹೊಡೆಯುತ್ತಿದೆ.
Advertisement
Advertisement
ಲಾಕ್ ಡೌನ್, ಕೊರೋನಾ, ಕೋವಿಡ್ ಎನ್ನುವ ಆತಂಕದ ನಡುವೆ 2021ರಲ್ಲಿ 45ರ ಇಳಿವಯಸ್ಸಿನ ಶಂಕರಣ್ಣ ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದ ಮೇಘನಾ ಅವರನ್ನು ಮದುವೆಯಾಗಿದ್ದರು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈಗ ಅದನ್ನೇ ಸಿನಿಮಾ ಮಾಡುವ ಆಲೋಚನೆ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು
Advertisement
ಶಂಕರಣ್ಣ ಮತ್ತು ಮೇಘನಾ ಅವರದ್ದು ಒಂದು ರೀತಿಯಲ್ಲಿ ಇಂಟ್ರಸ್ಟಿಂಗ್ ಸ್ಟೋರಿ ನಿಜ. ಮೇಘನಾ ಅವರಿಗೆ ಆಗಲೇ ಮದುವೆ ಆಗಿತ್ತು. ಎರಡು ವರ್ಷದಿಂದ ಗಂಡ ನಾಪತ್ತೆಯಾಗಿದ್ದ. ಮದುವೆಯಾಗಿಯೂ ಒಂಟಿ ಬದುಕು ನಡೆಸುವುದು ತುಂಬಾ ಕಷ್ಟ. ಹಾಗಾಗಿ ಇನ್ನೂ ಮದುವೆಯಾಗದೇ ಉಳಿದಿದ್ದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶಂಕರಣ್ಣನನ್ನು ಭೇಟಿಯಾಗುವ ಮೇಘನಾ, ತನ್ನನ್ನು ಮದುವೆ ಆಗುವಂತೆ ಕೇಳುತ್ತಾಳೆ. ನೊಂದಿರುವ ಹುಡುಗಿಗೆ ಬಾಳು ಕೊಡಲು ಶಂಕರಣ್ಣ ಒಪ್ಪುತ್ತಾನೆ. ಗುರು ಹಿರಿಯರ ಸಮ್ಮುಖದಲ್ಲಿ ಇಬ್ಬರೂ ಸತಿಪತಿಗಳಾಗುತ್ತಾರೆ. ಆ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿತ್ತು. ಕೆಲವರು ಅವರನ್ನು ಆಡಿಕೊಂಡರೆ, ಇನ್ನೂ ಕೆಲವರು ಶಂಕರಣ್ಣನಿಗೆ ಶಹಭಾಷ್ ಹೇಳಿದ್ದರು. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?
ಈ ದಾಂಪತ್ಯಕ್ಕೆ ಕೇವಲ ಐದೇ ಐದು ತಿಂಗಳು ಆಯುಷ್ಯ ಅಂತ ಯಾರೂ ಅಂದುಕೊಂಡಿರಲಿಲ್ಲ. ನೆನ್ನೆ ಶಂಕರಣ್ಣ ಬಾರದ ಲೋಕಕ್ಕೆ ಹೋಗಿ ಬಿಟ್ಟಿದ್ದಾರೆ. ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕರಣ್ಣನ ಸಾವು ಇದೀಗ ನಾನಾ ರೂಪ ಪಡೆದುಕೊಂಡಿದೆ. ಹೆಂಡತಿ ಮೇಘನಾ ಒಂದು ರೀತಿಯಲ್ಲಿ ಹೇಳಿದರೆ, ಶಂಕರಣ್ಣನ ತಾಯಿ ಮತ್ತೊಂದು ರೀತಿಯಲ್ಲಿ ಹೇಳುತ್ತಿದ್ದಾರೆ. ಹಾಗಾಗಿ ಶಂಕರಣ್ಣನ ಸಾವು ನಿಗೂಢ.