ಸಂಜು ವೆಡ್ಸ್ ಗೀತಾ 2 ಮಹೂರ್ತ ಫಿಕ್ಸ್: ರಮ್ಯಾ ತಯಾರಿ ಆಗ್ತಿರೋದು ಇದೆ ಸಿನಿಮಾಗಾ?

Sanju Weds Geetha 1

ಶ್ರೀನಗರ ಕಿಟ್ಟಿ (Srinagar kitty) ಹುಟ್ಟು ಹಬ್ಬದ ದಿನದಂದು ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಚಿತ್ರದ ಬಗ್ಗೆ ಸಣ್ಣದೊಂದು ಸುಳಿವು ಕೊಟ್ಟಿದ್ದರು ನಿರ್ದೇಶಕ ನಾಗಶೇಖರ್ (Nagasekhar). ಕಿಟ್ಟಿ ಹುಟ್ಟು ಹಬಕ್ಕಾಗಿ ಈ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದರು ನಿರ್ದೇಶಕರು. ಈ ಪೋಸ್ಟರ್ ಕೇವಲ ಹುಟ್ಟುಹಬ್ಬಕ್ಕೆ ಮೀಸಲಾಗಿರುತ್ತದೆ ಎಂದು ಗಾಂಧಿನಗರ ಮಾತಾಡಿಕೊಂಡಿತು. ಆದರೆ, ನಾಗಶೇಖರ್ ಬೇಗ ಅಪ್ ಡೇಟ್ ನೀಡಿದ್ದಾರೆ.

Sanju Weds Geetha 2

ಸಂಜು ವೆಡ್ಸ್ ಗೀತಾ 2 ಸಿನಿಮಾದ ಮುಹೂರ್ತ (Muhurta)  ದಿನಾಂಕವನ್ನು ನಾಗಶೇಖರ್ ಫಿಕ್ಸ್ ಮಾಡಿದ್ದಾರೆ. ಆಗಸ್ಟ್ 15ರಂದು ಚಿತ್ರಕ್ಕೆ ಮುಹೂರ್ತವೆಂದು ನಾಗಶೇಖರ್ ಹೇಳಿಕೊಂಡಿದ್ದಾರೆ. ಮುಹೂರ್ತದ ನಂತರ ಶೂಟಿಂಗ್ ಯಾವಾಗ ಎಂದು ಅವರು ಹೇಳಿಕೊಂಡಿಲ್ಲ. ಒಂದು ಕಡೆ ನಾಗಶೇಖರ್ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ರಮ್ಯಾ ಭರ್ಜರಿ ತಯಾರಿ ನಡೆಸಿದ್ದಾರೆ. ಇದನ್ನೂ ಓದಿ:ತೆಲುಗಿನ ಮತ್ತೊಬ್ಬ ನಟಿಯ ದಾಂಪತ್ಯದಲ್ಲಿ ಬಿರುಕು- ಪತಿ ಜೊತೆ ಸ್ವಾತಿ ರೆಡ್ಡಿ ಡಿವೋರ್ಸ್?

Sanju Weds Geetha 3

ರಮ್ಯಾ (Ramya) ಈ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ. ಆದರೆ, ರಮ್ಯಾ ಅವರಂತೂ ಸಖತ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ವಿದೇಶದಲ್ಲಿ ಬೀಡುಬಿಟ್ಟಿರುವ ಅವರು, ತೂಕ ಇಳಿಸಿಕೊಂಡಿದ್ದಾರೆ. ಫಿಟ್ನೆಸ್ ನತ್ತ ದೃಷ್ಟಿನೆಟ್ಟಿದ್ದಾರೆ. ಇದು ಯಾವ ಚಿತ್ರಕ್ಕಾಗಿ ಎನ್ನುವುದು ಅವರು ಹೇಳಿಕೊಂಡಿಲ್ಲ. ಸದ್ಯ ಡಾಲಿ ಜೊತೆ ರಮ್ಯಾ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಈ ಸಿನಿಮಾ ತಯಾರಿಯಾ ಗೊತ್ತಿಲ್ಲ.

ಸಂಜು ಐ ಲವ್ ಯೂ ಎಂಬ ಡೈಲಾಗ್, ಸಂಜು-ಗೀತಾ ಲವ್ ಕಹಾನಿ 2011ರಲ್ಲಿ ಸಿನಿ ಪ್ರೇಕ್ಷಕರಿಗೆ ಕಮಾಲ್ ಮಾಡಿತ್ತು. ಮತ್ತೆ ಈ ಜೋಡಿ ಅದ್ಯಾವಾಗ ಸಂಜು ಮತ್ತು ಗೀತಾ ಒಟ್ಟಿಗೆ ಬರಲಿದ್ದಾರೆ ಎಂದು ಕಾದು ಕುಳಿತಿದ್ದ ಫ್ಯಾನ್ಸ್‌ಗೆ ಈಗ ಸಿಹಿಸುದ್ದಿಯಂತೂ ಸಿಕ್ಕಿದೆ. ಮುಂದೆ ಏನೆಲ್ಲ ಬೆಳವಣಿಗೆ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]