ಕೊಚ್ಚಿ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಶನಿವಾರ ತಮ್ಮ ಬಹು ಕಾಲದ ಗೆಳತಿ ಚಾರುಲತಾರೊಂದಿಗೆ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ.
ಕೇರಳದ ಕೋವಲಂ ರೆಸಾರ್ಟ್‍ನಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಸಂಜು, ಚಾರುಲತಾ ವಿವಾಹ ನೆರವೇರಿತು. ಕಾರ್ಯಕ್ರಮಕ್ಕೆ ಆಪ್ತ ವಲಯದ ಸ್ನೇಹಿತರು ಹಾಗೂ ಕುಟುಂಬ ವರ್ಗದವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
24 ವರ್ಷದ ಸಂಜು ಟೀಂ ಇಂಡಿಯಾ ಪರ ಏಕೈಕ ಟಿ20 ಪಂದ್ಯವನ್ನು ಮಾತ್ರ ಆಡಿದ್ದಾರೆ. ಉಳಿದಂತೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಪರ ಆಡಿದ್ದ ಸಂಜು ಸ್ಯಾಮ್ಸನ್ ತಮ್ಮ ಪ್ರದರ್ಶನ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ ಟೀ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಲು ವಿಫಲರಾಗಿದ್ದರು. ಐಪಿಎಲ್ ನಲ್ಲಿ ಆಡುವ ವೇಳೆ ರಾಜಸ್ಥಾನ ತಂಡ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಗರಡಿಯಲ್ಲಿ ಸಂಜು ಮತ್ತಷ್ಟು ಪಳಗಿದ್ದರು. ಮದುವೆ ಕಾರ್ಯಕ್ರಮದಲ್ಲಿ ದ್ರಾವಿಡ್ ಭಾಗವಹಿಸಿ ನವದಂಪತಿಗ ಶುಭ ಕೋರಿದರು.
Wish u a very very #happy marriage #SanjuSamson u started a new journey God bless u… pic.twitter.com/Iu7Ufvvc9L
— Deepak Thakur (@dpksingh00) December 22, 2018
2014ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಟೂರ್ನಿಗೆ ಆಯ್ಕೆ ಸಂಜು ಸ್ಯಾಮ್ಸನ್ ಆಗಿದ್ದರೂ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಆದರೆ 2017ರ ಐಪಿಎಲ್ ನಲ್ಲಿ 1 ಸಾವಿರ ರನ್ ಹೊಡೆದ ಕಿರಿಯ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆ ಪಡೆದಿದ್ದರು. ಅಲ್ಲದೇ ಕೇರಳ ರಣಜಿ ತಂಡವನ್ನು ಮುನ್ನಡೆಸಿದ ಕಿರಿಯ ನಾಯಕ ಎಂಬ ದಾಖಲೆಯನ್ನು ಹೊಂದಿದ್ದಾರೆ. 2013ರಲ್ಲಿ ಐಪಿಎಲ್ ನ ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ ಪಡೆದಿದ್ದರು.
Happy married life champ ????#SanjuSamson @BCCI @rajasthanroyals @RanjiKerala pic.twitter.com/gRjbw1uTgF
— Toruk Macto???????? (@rahulToGo) December 22, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv