RR ಫ್ರಾಂಚೈಸಿ ಜೊತೆ ಮುನಿಸಿಕೊಂಡ ಸಂಜು ಸ್ಯಾಮ್ಸನ್?

Public TV
1 Min Read
SANJU SAMSON 2

ಮುಂಬೈ: 2022ರ ಐಪಿಎಲ್ ಮಹಾ ಹರಾಜಿಗೂ ಮುನ್ನ ಕೆಲ ಆಟಗಾರರು ತಮ್ಮ ಹಳೆಯ ಫ್ರಾಂಚೈಸ್‍ಗಳನ್ನು ಬಿಟ್ಟು ಹೊರ ಬರಲು ನಿರ್ಧರಿಸಿದ್ದಾರೆ. ಈ ಸಾಲಿನಲ್ಲಿ ಇದೀಗ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡದ ನಾಯಕರಾಗಿದ್ದ ಸಂಜು ಸ್ಯಾಮ್ಸನ್ ಕೂಡ ಸೇರಿದ್ದು, ಆರ್‌ಆರ್ ಫ್ರಾಂಚೈಸ್ ಜೊತೆ ಮುನಿಸಿಕೊಂಡು ತಂಡದಿಂದ ಹೊರ ಬರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

SANJU SAMSON

ಸಂಜು ಸ್ಯಾಮ್ಸನ್ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ರಾಜಸ್ಥಾನ ಪರ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದರು. ಸ್ಯಾಮ್ಸನ್ ನಾಯನಾಗಿ ತಂಡದ ಪ್ರದರ್ಶನ ಗಮನಿಸಿದರೆ 14ನೇ ಆವೃತ್ತಿಯಲ್ಲಿ ತಂಡ 7 ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆದರೆ ಒಬ್ಬ ಬ್ಯಾಟ್ಸ್‌ಮ್ಯಾನ್‌ ಆಗಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಸಂಜು 15ನೇ ಆವೃತ್ತಿಯ ಐಪಿಎಲ್‍ಗೆ ಆರ್‍ಆರ್ ಫ್ರಾಂಚೈಸಿ ಸಂಜು ಅವರನ್ನು ರಿಟೈನ್ ಮಾಡಿಕೊಳ್ಳುವ ಹಂಬಲದಲ್ಲಿತ್ತು. ಆದರೆ ಇದೀಗ ಸಂಜು ಆರ್‍ಆರ್ ಫ್ರಾಂಚೈಸ್ ಜೊತೆ ಮುನಿಸಿಕೊಂಡು ತಂಡದಿಂದ ಹೊರ ನಡೆಯಲು ಮುಂದಾಗಿದ್ದಾರೆ ಎಂದು ಪ್ರತಿಷ್ಠಿತ ಕ್ರೀಡಾ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಜಡೇಜಾ ಬೌಲಿಂಗ್ ಆ್ಯಕ್ಷನ್ ಅನುಕರಿಸಿದ ಬುಮ್ರಾ

SANJU SAMSON 1

ಈ ಸುದ್ದಿಗೆ ಪುಷ್ಟಿ ನೀಡುವಂತೆ ಸಂಜು ಕೂಡ ಸಾಮಾಜಿಕ ಜಾಲತಾಣದಲ್ಲಿ ಆರ್‌ಆರ್ ಫ್ರಾಂಚೈಸ್‍ನ್ನು ಅನ್‍ಫಾಲೋ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಹಗಾಗಿ ಸಂಜು ಮುಂದಿನ ಆವೃತ್ತಿಯ ಐಪಿಎಲ್‍ಗು ಮುನ್ನ ಮಹಾ ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಊಹಾಪೋಹಗಳು ಕೇಳಿ ಬರುತ್ತಿದ್ದು, ಇದಕ್ಕೆಲ್ಲ ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಹರಾಜಿನ ಮುನ್ನ ಸ್ಪಷ್ಟ ಉತ್ತರ ಸಿಗಲಿದೆ. ಇದನ್ನೂ ಓದಿ: ಆರ್‌ಸಿಬಿ ಮುಖ್ಯ ಕೋಚ್ ಆಗಿ ಸಂಜಯ್‌ ಬಂಗಾರ್‌ ಆಯ್ಕೆ

Share This Article
Leave a Comment

Leave a Reply

Your email address will not be published. Required fields are marked *